ಜಾಮೀನಿನ ಮೇಲೆ ಹೊರ ಬಂದ ಖೈದಿಗಳ ಮೇಲೆ ನಿಗಾ ವಹಿಸಲು ವಿಶೇಷ ಘಟಕ ..!

ಬೆಂಗಳೂರು

   ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರು, ರೌಡಿಗಳು, ಜಾಮೀನಿನಿಂದ ಹೊರಬಂದ ಮೇಲೆ ಅವರ ಚಟುವಟಿಕೆಗಳ ಮೇಲೆ ನಿಗಾವಹಿಸಲು ನ್ಯಾಯಾಲಯ ನಿಗಾ ಘಟಕವನ್ನು ಸ್ಥಾಪಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಅವರು ತಿಳಿಸಿದ್ದಾರೆ .ನ್ಯಾಯಾಲಯ ಘಟಕವು ಜಾಮೀನು ಪಡೆದವರ ಚಟುವಟಿಕೆಗಳು ಮತ್ತು ಅವರ ಹಿನ್ನೆಲೆ ಹಾಗೂ ಜಾಮೀನು ಷರತ್ತಿನ ಉಲ್ಲಂಘನೆಯ ಬಗ್ಗೆ ನಿಗಾವಹಿಸಲಿದೆ ಎಂದು ಹೇಳಿದರು.

    ನಗರದಲ್ಲಿ ರೌಡಿ ಚಟುವಟಿಕೆಗಳನ್ನು ಹತ್ತಿಕ್ಕಲು ಜಾಮೀನಿನ ಮೇಲೆ ಹೊರಬಂದಿರುವ ರೌಡಿಗಳು,ಅಪರಾಧಿಗಳ ಮೇಲೆ ನ್ಯಾಯಾಲಯದ ನಿಗಾ ಘಟಕ ನಿಗಾವಹಿಸಲಿದೆ.ಅಲ್ಲದೆ, ಸ್ಥಳೀಯ ಪೊಲೀಸರು ಕೂಡ ಅಂತಹ ಅಪರಾಧಿಗಳ ಮೇಲೆ ಗಮನವಿರಿಸುವುದು ಕಡ್ಡಾಯವಾಗಿ ಮಾಡಲಾಗುವುದು ಎಂದರು.

      ವಾರೆಂಟ್ ಜಾರಿ, ಸಮನ್ಸ್ ಉಲ್ಲಂಘನೆ, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿರುವ ಆರೋಪಿಗಳ ಮೇಲೂ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವವರಿಗೆ ಪೊಲೀಸ್ ಠಾಣೆಗಳಲ್ಲಿ ನೀಡುವ ಜಾಮೀನಿನ ಷರತ್ತುಗಳನ್ನು ಕಠಿಣಗೊಳಿಸಲಾಗುವುದು,ಠಾಣೆಗಳಲ್ಲಿ ನೀಡುವ ಜಾಮೀನನ್ನು ಕಠಿಣಗೊಳಿಸಿ ಜಾಮೀನು ಪಡೆದವರ ಮೇಲೆ ನಿಗಾವಹಿಸಲಾಗುವುದು.

     ಜಾಮೀನಿಗೆ ಷರತ್ತು ವಿಧಿಸುವಾಗ 50 ಸಾವಿರ ರೂ. ನಿಂದ ಒಂದು ಲಕ್ಷದವರೆಗೆ ಠೇವಣಿ ಇರಿಸಿಕೊಳ್ಳುವುದು, ಆಸ್ತಿ-ಪಾಸ್ತಿ ದಾಖಲೆಗಳನ್ನು ಇಟ್ಟುಕೊಳ್ಳಲಾಗುವುದು ಎಂದರು.ಒಂದು ವೇಳೆ ಜಾಮೀನು ಪಡೆದವರು ಷರತ್ತುಗಳನ್ನು ಉಲ್ಲಂಘಿಸಿದರೆ,ಅವರು ಠೇವಣಿಯಾಗಿಟ್ಟ ಹಣ ಹಾಗೂ ಆಸ್ತಿ-ಪಾಸ್ತಿಯನ್ನು ಜಪ್ತಿ ಮಾಡಲಾಗುವುದು ಎಂದರು.

ರಕ್ಷಣೆ ನೀಡಿದವರ ಮೇಲೆ ಕೇಸ್

     ಅಪರಾಧಿಗಳು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿ ಪೊಲೀಸರಿಂದ ತಲೆಮರೆಸಿ ಕೊಂಡವರಿಗೆ ರಕ್ಷಣೆ ನೀಡುವವರ ಮೇಲೆ ಮೊಕದ್ದಮೆ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link