ತುಮಕೂರು:

21.3.2019 ರಂದು ಶಿರಾ ತಾಲೂಕು ರಾಮಲಿಂಗಪುರ ಮಾದೇನಹಳ್ಳಿ ಜಾನಕಲ್ಲು ಗ್ರಾಮಗಳ ವತಿಯಿಂದ ನಡೆದ ಸುಜ್ಙಾನ ಸಂಗಮ ಹುಣ್ಣಿಮೆ ಸತ್ಸಂಗ ಕಾರ್ಯಕ್ರಮದಲ್ಲಿ
ಮಾನವನ ಬದುಕಿಗೆ ಆಧ್ಯಾತ್ಮ ದಿವ್ಯ ಔಷಧ ಅಂತ ದಿವ್ಯ ಔಷಧವನ್ನು ನಂಬಿ ಬದುಕನ್ನು ಹಸನುಗೊಳಿಸುವ ಸುಂದರಗೊಳಿಸುವ ಸುಲಲಿತ ಗುಣಿಸುವ ಸದ್ಗುರುವಿನ ದಾರಿಯಲ್ಲಿ ಸುಜ್ಞಾನದ ದಾರಿಯಲ್ಲಿ ಸಾಗುವ ಮೂಲಕ ಬದುಕನ್ನು ಬೆಳಗಿಸಿ ಕೊಳ್ಳುವ ಪ್ರಯತ್ನ ಮಾಡಿ ಎಂದು ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಶಾಂತವೀರ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು ಪ್ರತಿ ತಿಂಗಳು ಹುಣ್ಣಿಮೆಯಂದು “ಸುಜ್ಙಾನ ಸಂಗಮ ಹುಣ್ಣಿಮೆ ಸತ್ಸಂಗ” ಕಾರ್ಯಕ್ರಮ ನಡೆಯುತ್ತದೆ
ಆಧ್ಯಾತ್ಮ ಎನ್ನುವುದು ವ್ಯವಹಾರವನ್ನು ಆಧ್ಯಾತ್ಮ ಎನ್ನುವುದು ಮಾನವನನ್ನು ಮಹಾದೇವನನ್ನಾಗಿ ಮಾಡುವ ಮಂತ್ರದಂಡ ಪ್ರತಿಯೊಬ್ಬನು ಆಧ್ಯಾತ್ಮವನ್ನು ಅನುಸರಿಸುವ ಮೂಲಕ ಬದುಕಿನ ಅಶಾಂತಿಗೆ ಅತೃಪ್ತಿಗೆ ಅಸಹನೆಗೆ ಪರಿಹಾರ ನೀಡುವುದೇ ಆಧ್ಯಾತ್ಮ ಅಧ್ಯಾತ್ಮದ ದಾರಿಯಲ್ಲಿ ನಡೆಯುವ ಜನರಿಗೆ ಸತ್ಯದ ಅರಿವಾಗುತ್ತದೆ ಆ ಕಾರಣಕ್ಕೆ ಪ್ರತಿಯೊಬ್ಬರೂ ಆಧ್ಯಾತ್ಮ ಜೀವಿಗಳಾಗಿ ಬದುಕನ್ನು ಸಂತೋಷವಾಗಿ ಸಂಭ್ರಮದಿಂದ ಮುಂದುವರಿಸಲು ಆಧ್ಯಾತ್ಮದ ಮರೆ ಹೋಗಿ ಭಜನೆ ಪ್ರಾರ್ಥನೆ ಸೇವೆ ತ್ಯಾಗ ಸರಳತೆ ಸಹಜತೆ ಇರುವಲ್ಲಿ ಸಂತೃಪ್ತಿ ಇರುತ್ತದೆ ಎಂದು ಆಶೀರ್ವಚನ ನೀಡಿದರು, ಈ ಸಮಾರಂಭದಲ್ಲಿ ರಂಗಣ್ಣನವರು ಗಿರೀಶ್ ಕಿಶೋರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
