ವಿಶೇಷ ಸಂಚಿಕೆ ಬಿಡುಗಡೆ

ಜಗಳೂರು :

      ನೇರ ದಿಟ್ಟ, ನಿಷ್ಪಕ್ಷಪಾತವಾಗಿ ಸುದ್ದಿಯನ್ನು ಬರೆಯುವ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಜನತೆಯ ಶ್ರೇಯೋಭಿವೃದ್ಧಿಯಾಗಿ ಜಗಳೂರು ಗೆಳೆಯ ಪತ್ರಿಕೆಯ ಸಂಪಾದಕರು ಕೆಲಸ ಮಾಡಲಿ ಎಂದು ತಾಲ್ಲೂಕು ಪಂಚಾಯತಿ ಸದಸ್ಯ ಮರೇನಹಳ್ಳಿ ಬಸವರಾಜು ಹೇಳಿದರು.

       ಪಟ್ಟಣದ ವಿದ್ಯಾನಗರದಲ್ಲಿರುವ ಪತ್ರಿಕಾಭವನದಲ್ಲಿ ಮಂಗಳವಾರ ಶಶಿಕುಮಾರ್ ಎಂ.ಬಿ.ಸಂಪಾದಕರ ಜಗಳೂರು ಗೆಳಯ ಪತ್ರಿಕೆಯ ಬಿಡುಗಡೆ ಸಮಾರಂಭದಲ್ಲಿ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

       ಪತ್ರಿಕೆಯನ್ನು ಪ್ರಾರಂಭಿಸುವುದು ಸುಲುಭ, ಆದರೆ ಪತ್ರಿಕೆಯನ್ನು ನಡೆಸಿಕೊಂಡು ಹೋಗುವುದು ಬಹಳ ಕಷ್ಟದ ಕೆಲಸ. ಹಿಂದುಳಿದ ಜಗಳೂರು ತಾಲ್ಲೂಕಿನ ಸಮಸ್ಯೆಗಳನ್ನು ಅರಿತಿರುವ ಪ್ರಧಾನ ಸಂಪಾದಕರಾದ ಎಂ.ಸಿ.ಬಸವರಾಜ್‍ರವರು ಸಮಾಜಮುಖಿಯಾಗಿ ಸುದ್ದಿಯನ್ನು ಮಾಡುವ ವಿಶ್ವಾಸವಿದೆ ಎಂದವರು ಅಭಿಪ್ರಾಯಪಟ್ಟರು.

      ಕಾ.ನಿ.ಪತ್ರಕರ್ತರಸಂಘದ ಜಿಲ್ಲಾ ಉಪಾಧ್ಯಕ್ಷ ಕೊಟ್ರೇಶ್ ಮಾತನಾಡಿ ಸಮಾಜಮುಖಿಯಾಗಿ ಪತ್ರಿಕೆ ಕೆಲಸ ಮಾಡಿದರೇ ಯಶಸ್ಸು ಖಂಡಿತಾ ಲಭಿಸುತ್ತದೆ. ಅಚ್ಚು ಮಳೆಗಳ ಜೋಡಿಸಿ ಪತ್ರಿಕೆಯನ್ನು ಮಾಡಿರುವ ಅನುಭವ ಹೊಂದಿರುವ ಬಸವರಾಜುರವರು ಜಗಳೂರು ಗೆಳೆಯ ಪತ್ರಿಕೆಯನ್ನು ಹೊಸವರ್ಷದ ದಿನಂದು ಹೊರತರುವ ಮೂಲಕ ಜನರ ಆಶಯಗಳಿಗೆ ,ಜನರ ಕಷ್ಟಗಳಿಗೆ ಪತ್ರಿಕೆ ಸದಾ ಸ್ಪಂದಿಸಲಿ ಎಂದವರು ಶುಭ ಹಾರೈಸಿದರು.

      ತಾ.ಕಾ.ನಿ.ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಶ್ರೀನಿವಾಸ್ ಮಾತನಾಡಿ ದಶಕಗಳ ಹಿಂದೆ ನಿಮ್ಮ ಮಿತ್ರ ದಿನಪತ್ರಿಕೆಯನ್ನು ಅಚ್ಚು ಮಳೆಗಳ ಜೋಡಣೆ ಮಾಡಿ ತಾಲ್ಲೂಕಿನ ಜನರ ಸಮಸ್ಯೆಗಳಿಗೆ ನೇರವಾಗಿ ಪತ್ರಿಕೆಯ ಮೂಲಕ ಬರೆದು ಇತ್ಯರ್ಥ ಪಡಿಸುವ ಕೆಲಸ ಮಾಡಿದ್ದು, ಇಂದು ಪ್ರಾರಂಭಿಸಿರುವ ಜಗಳೂರು ಗೆಳೆಯ ಪತ್ರಿಕೆಯು ಸಮಾಜದ ಅಭಿವೃದ್ಧಿಯಾಗಿ ಕೆಲಸ ಮಾಡಲೆಂದು ಅವರು ಹೆಳಿದರು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿದಾನಂದ ಜಿ.ಎಸ್., ಜಗಳೂರು ಗೆಳೆಯ ದಿನ ಪತ್ರಿಕೆ ಸಂಪಾಧಕ ಶಶಿಕುಮಾರ್, ಪ್ರಧಾನ ಸಂಪಾದಕ ಎಂ.ಸಿ. ಬಸವರಾಜ್ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link