ಹರಪನಹಳ್ಳಿ
ಇಲ್ಲಿಯ ತಾ.ಪಂ ಅಧ್ಯಕ್ಷೆ, ಉಪಾದ್ಯಕ್ಷರ ವಿರುದ್ದ ಎರಡನೇ ಬಾರಿಗೆ ಪಕ್ಷ ಬೇಧ ಮರೆತು ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದು, ಆ ಪ್ರಕಾರ ಮಾ.20 ರಂದು ತಾ.ಪಂ ಇಒ ವಿಶೇಷ ಸಭೆ ಆಯೋಜಿಸಿದ್ದಾರೆ.
ತಾ.ಪಂ ಆಡಳಿತ ಬಿಜೆಪಿಯದಾಗಿದ್ದು, ಕಳೆದ 3 ವರ್ಷಗಳಿಂದ ಅಧ್ಯಕ್ಷರಾಗಿ ಅನ್ನಪೂರ್ಣಮ್ಮ, ಉಪಾದ್ಯಕ್ಷರಾಗಿ ಎಲ್ .ಮಂಜನಾಯ್ಕ ಕಾರ್ಯನಿರ್ವಹಿಸುತ್ತಿದ್ದಾರೆ. ಅಧ್ಯಕ್ಷೆ, ಉಪಾದ್ಯಕ್ಷರ ಬಗ್ಗೆ ನಮಗೆ ವಿಶ್ವಾಸವಿಲ್ಲ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ನ ಒಟ್ಟು 19 ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದಾರೆ.
ಒಟ್ಟು 26 ಸದಸ್ಯರಲ್ಲಿ 10 ಬಿಜೆಪಿ, 8 ಕಾಂಗ್ರೆಸ್ , 1 ಪಕ್ಷೇತರ ಸೇರಿ 19 ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಲು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಬಿಜೆಪಿ ಸದಸ್ಯರು – ವಿಶಾಲಾಕ್ಷಮ್ಮ(ಅರಸಿಕೇರಿ), ನೀಲಿಬಾಯಿ(ಚಟ್ನಿಹಳ್ಳಿ) ಗಂಗೂಬಾಯಿ (ಪುಣಭಗಟ್ಟ), ರಹಮತುಲ್ಲಾ (ಅಣಜಿಗೇರಿ), ಪಾಟೀಲ್ ಕೆಂಚನಗೌಡ( ಉಚ್ಚಂಗಿದುರ್ಗ), ಪ್ರಕಾಶ ಹುಣ್ಸಿಹಳ್ಳಿ (ಸಾಸ್ವಿಹಳ್ಳಿ) ಕೆ.ವೆಂಕಟೇಶರೆಡ್ಡಿ (ಕುಂಚೂರು), ಸುಮಿತ್ರಾ( ಮಾಚಿಹಳ್ಳಿ), ಆರ್ .ಲತಾ(ಬಾಗಳಿ), ರೇವನಗೌಡ ಪಾಟೀಲ್ (ಹಿರೇಮೇಗಳಗೇರಿ) ಕಾಂಗ್ರೆಸ್ ಸದಸ್ಯರು – ಎಚ್ .ಚಂದ್ರಪ್ಪ(ನೀಲಗುಂದ), ಓ.ರಾಮಪ್ಪ(ನಂದಿಬೇವೂರು), ಎಸ್ .ಬಸವನಗೌಡ(ಚಿಗಟೇರಿ), ಗೌಡ್ರು ಮಂಜುಳಾ( ದುಗ್ಗಾವತ್ತಿ, ಜಿ.ಮಂಜುಳಾ(ತೆಲಿಗಿ), ಯಲ್ಲಮ್ಮ (ನಿಚ್ಚವನಹಳ್ಳಿ), ಶಶಿಕಲಾ(ಮತ್ತಿಹಳ್ಳಿ), ಲಕ್ಷ್ಮೀಬಾಯಿ(ಹಾರಕನಾಳು) ಹಾಗೂ ರಾಗಿಮಸಲವಾಡ ಕ್ಷೇತ್ರದ ಪಕ್ಷೇತರ ಸದಸ್ಯೆ ಮಾನಿಬಾಯಿ ಅವರು ಅವಿಶ್ವಾಸಕ್ಕೆ ಸಹಿ ಹಾಕಿದ ಸದಸ್ಯರುಗಳು .
ಈ ಹಿಂದೆ ಸಹ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿತ್ತು, ಫೆ.18 ರಂದು ನಡೆದ ಅವಿಶ್ವಾಸ ಗೊತ್ತುವಳಿ ಸಭೆಯನ್ನು ಕೋರ್ಟ ಆದೇಶದ ಪ್ರಕಾರ ತಾ.ಪಂ ಇಒ ರದ್ದುಗೊಳಿಸಿದ್ದರು. ಆಗ ಅವಿಶ್ವಾಸ ಮಂಡಿಸಿದ್ದ ಸದಸ್ಯರು ಸಭೆ ರದ್ದುಗೊಳಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಪುನಃ 19 ಸದಸ್ಯರು ನಿಯಮಾನುಸಾರ ಅಧ್ಯಕ್ಷ, ಉಪಾದ್ಯಕ್ಷರ ವಿರುದ್ದ ಅವಿಶ್ವಾಸಗೊತ್ತುವಳಿ ಮಂಡಿಸಿ
ಈ ಬಾರಿ ಸಭೆ ಕರೆಯಲು ನೋಟೀಸ್ ನೀಡಿದ್ದರೂ ಅಧ್ಯಕ್ಷರು ಸಭೆ ಕರೆಯಲು ವಿಫಲವಾಗಿದ್ದರು. ಆದ್ದರಿಂದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಮತಾ ಹೊಸಗೌಡರು ಅವರು ಮಾ.20 ರಂದು ಬೆಳಿಗ್ಗೆ 11.30ಕ್ಕೆ ಅವಿಶ್ವಾಸ ಗೊತ್ತುವಳಿ ವಿಶೇಷ ಸಭೆಯನ್ನು ಆಯೋಜಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
