ಮಳೆಗಾಗಿ ನಾಳೆ ದುಗ್ಗಮ್ಮನಿಗೆ ವಿಶೇಷ ಪೂಜೆ

ದಾವಣಗೆರೆ :

      ವಾಡಿಕೆಯಂತೆ ಮಳೆಯಾಗದ ಪ್ರಯುಕ್ತ ಜಾನುವಾರುಗಳು, ರೈತರಿಗೆ ನೀರಿನ ಸಮಸ್ಯೆಯಾಗುತ್ತಿದೆ. ಮುಂದೆ ಕುಡಿಯುವ ನೀರಿಗೂ ತತ್ವಾರ ಉಂಟಾಗಲಿದ್ದು, ಈ ಸಂಬಂಧ ಲೋಕಕಲ್ಯಾಣಾರ್ಥವಾಗಿ ಮಳೆಗಾಗಿ ಪ್ರಾರ್ಥಿಸಿ ಜು.12ರಂದು ದಾವಣಗೆರೆ ನಗರದೇವತೆ ಶ್ರೀದುರ್ಗಾಂಭಿಕಾ ದೇವಿಗೆ ಸಂಘಟನೆ ವತಿಯಿಂದ ವಿಶೇಷಪೂಜೆ ಸಲ್ಲಿಸಲು ಕರ್ನಾಟಕ ಸಮರ ಸೇನೆ ಸಭೆಯಲ್ಲಿ ನಿರ್ಧರಿಸಲಾಯಿತು.

       ಬುಧವಾರ ಇಲ್ಲಿನ ಪ್ರವಾಸಿಮಂದಿರದಲ್ಲಿ ನಡೆದ ಸಂಘಟನೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಜು.12ರಂದು ಕನ್ನಡದ ಮೇರುನಟ ಡಾ.ಶಿವರಾಜಕುಮಾರ್ ಅವರ ಜನ್ನದಿನವಿರುವುದರಿಂದ ಜಯದೇವ ವೃತ್ತದಲ್ಲಿ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿ ಸಿಹಿ ಹಂಚಲಾಗುವುದು ಎಂದು ಸಂಘಟನೆ ಕಾರ್ಯಾಧ್ಯಕ್ಷ ಬಿ.ವಾಸುದೇವ ತಿಳಿಸಿದರು.

     ಇದೇ ಸಂದರ್ಭದಲ್ಲಿ ಸಂಘಟನೆಯ ಅಲ್ಪ ಸಂಖ್ಯಾತರ ಘಟಕಕ್ಕೆ ಜಿಲ್ಲಾ ಅಧ್ಯಕ್ಷರನ್ನಾಗಿ ಮಿರ್ಜಾ ಕಲೀಮುಲ್ಲಾ ಅವರನ್ನು ಮತ್ತು ಜಿಲ್ಲಾ ಕಾರ್ಯದರ್ಶಿಯಾಗಿ ತನ್ವೀರ್ ಅಹ್ಮದ್, ಜಂಟಿ ಕಾರ್ಯದರ್ಶಿಯನ್ನಾಗಿ ಹೆಚ್.ಕೆ.ಹಬೀಬುಲ್ಲಾ ಖಾನ್, ಖಜಾಂವಿಯಾಗಿ ಸಿ.ವಸೀಂ ಅಕ್ರಂ ಅವರನ್ನು ಆಯ್ಕೆಮಾಡಲಾಯಿತು.

      ಸಭೆಯಲ್ಲಿ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ರಾಜ್ಯ ಯುವಘಟಕದ ಅಧ್ಯಕ್ಷ ಎಂ.ಮನು, ರಾಜ್ಯ ಉಪಾಧ್ಯಕ್ಷರಾ ಜಿ.ಪಿ.ಪ್ರಕಾಶ್, ಕೋಟೆಹಾಳ್ ಸಿದ್ದೇಶ್, ಜಿಲ್ಲಾ ಅಧ್ಯಕ್ಷ ಯೋಗೀಶ್, ಗೌರವಾಧ್ಯಕ್ಷ ರಾಘವೇಂದ್ರಚೌವಾಣ್, ಹರಿಹರ ತಾಲೂಕು ಅಧ್ಯಕ್ಷ ದಾದಾಪೀರ್, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿದೇವಿ, ಉತ್ತರವಲಯದ ಅಧ್ಯಕ್ಷೆ ಮಧುಮತಿ, ಪರಶುರಾಮ್, ಪ್ರಕಾಶ್ ಮತ್ತಿತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link