ದಾವಣಗೆರೆ:
ಲೋಕ ಕಲ್ಯಾಣಾರ್ಥವಾಗಿ ನಗರದ ಹೊರವಲಯದಲ್ಲಿರುವ ಶ್ರೀ ನಾಗೇಶ್ವವರ ಪಾಶ್ರ್ವ ಭೈರವ್ ಧಾಮ್ ಜೈನ ದೇವಸ್ಥಾನದಲ್ಲಿ ಭಾನುವಾರ ಹೋಮ, ಪೂಜನ ಕಾರ್ಯಕ್ರಮ ನಡೆಸಲಾಯಿತು.ಇದೇ ಮೊದಲ ಬಾರಿಗೆ ಶ್ರೀಭೈರವ್ ಭಕ್ತ ಪರಿವಾರದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಬಟ್ಟೆಯಲ್ಲಿ ಬಂದ 151 ಜೋಡಿ ದಂಪತಿಗಳು ಪೂಜೆ ಸಲ್ಲಿಸಿದರು.
ರಾಜ್ಯದಲ್ಲಿ ಬರಗಾಲವಿರುವುದರಿಂದ ರೈತರು ಕಷ್ಟ ಅನುಭವಿಸುವಂತಾಗಿದೆ. ಉತ್ತಮ ಮಳೆ-ಬೆಳೆಯಾಗಿ ರೈತಾಪಿ ವರ್ಗ ಹಾಗೂ ಜನರು ನೆಮ್ಮದಿಯ ಜೀವನ ನಡೆಸುವಂತಾಗಬೇಕು. ಅದಕ್ಕಾಗಿ ಶ್ರದ್ಧಾ ಭಕ್ತಿಯಿಂದ ಭೈರವ ಸ್ವಾಮೀಜಿಗಳನ್ನು ಪಾರ್ಥನೆ ಮಾಡಿದರೆ ವರುಣ ದೇವ ಕರುಣಿಸುತ್ತಾನೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಭೈರವ ದೇವರ ಪರಮ ಭಕ್ತರಾದ ಮಹಾರಾಷ್ಟ್ರ ಧುಲೆ ನಗರದ ಮಫತಲಾಲ್ ಗುಂಡೇಚಾ ಹಾಗೂ ದಾವಣಗೆರೆ ನಗರದ ಸುರೇಶ್ ಧನರಾಜ ಜೈನ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಕ್ಕೆ ಒಳ್ಳೆಯ ಮಳೆ-ಬೆಳೆಯಾಗಲಿ ಎಂದು ಪೂಜೆಯಲ್ಲಿ ಕೂತಿದ್ದ ದಂಪತಿಗಳು ದೇವರಲ್ಲಿ ಪ್ರಾರ್ಥಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
