ಬಂಜಾರ ಸಮುದಾಯದ ಅಭಿವೃದ್ಧಿಗೆ ಸರ್ಕಾರಗಳು ವಿಶೇಷ ಒತ್ತು ನೀಡುವುದು ಅಗತ್ಯ

ಶಿರಾ

        ರಾಜ್ಯದ ಬಂಜಾರ ಸಮುದಾಯಗಳ ಗ್ರಾಮಗಳು ಇಂದಿಗೂ ಅಭಿವೃದ್ಧಿಯನ್ನು ಕಾಣದೆ ಆರ್ಥಿಕ ಸಂಕಷ್ಟಕ್ಕೆ ಈಡಾಗುತ್ತಿದು, ಇಂತಹ ಸಮಾಜದ ಬಗ್ಗೆ ಸರ್ಕಾರಗಳಿಗೆ ಕಾಳಜಿ ಇರಬೇಕಾಗಿದೆ. ವಿವಿಧ ಯೋಜನೆಗಳಡಿಯಲ್ಲಿ ತಾಂಡಾಗಳ ಸಮಗ್ರ ಅಭಿವೃದ್ಧಿಯನ್ನು ಸರ್ಕಾರ ಕೈಗೊಳ್ಳುವುದು ಅಗತ್ಯ ಎಂದು ಮಾಜಿ ಸಚಿವ ಶಿವಮೂರ್ತಿ ನಾಯಕ ತಿಳಿಸಿದರು.

       ಶಿರಾ ತಾಲ್ಲೂಕಿನ ಕಿಲಾರದಹಳ್ಳಿ ತಾಂಡಾ ಗ್ರಾಮದಲ್ಲಿ ಬಂಜಾರ ಸಮುದಾಯದ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

       ರಾಜ್ಯದಲ್ಲಿನ ಲಂಬಾಣಿ ಜನಾಂಗವು ಇಂದಿಗೂ ಶೋಷಿತ ಸಮಾಜವಾಗಿಯೇ ಉಳಿದಿದ್ದು, ಹಳ್ಳಿಗಳಲ್ಲಿ ಕೂಲಿಯೂ ಕೂಡ ಸಿದೆ, ಈ ಜನಾಂಗದ ಸ್ಥಿತಿ ಅತಂತ್ರವಾಗಿದೆ. ತಾಂಡಾ, ಹಾಡಿ ಹಾಗೂ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವಂತೆ ಸಿದ್ಧರಾಮಯ್ಯ ಅವರ ಸರ್ಕಾರದಲ್ಲಿದ್ದಾಗ ನಾನು ವ್ಯಾಪಕ ಒತ್ತಡ ಹೇರಿದ್ದೆನು. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡ ಮುಂದಾಗಿದೆ ಎಂದರು.

         ಬಂಜಾರ ಸಮುದಾಯದ ಪ್ರತಿಭಾನ್ವಿತರನ್ನು ಗುರ್ತಿಸುವ ಮೂಲಕ ಕಿಲಾರದಹಳ್ಳಿ ತಾಂಡಾ ಗ್ರಾಮಸ್ಥರು ಉತ್ತಮ ಕಾರ್ಯ ಕೈಗೊಂಡಿರುವುದು ಶ್ಲಾಘನಾರ್ಹ ಸಂಗತಿ ಎಂದರು.ಹೈಕೋರ್ಟ್ ವಕೀಲ ಅನಂತರಾಮನಾಯ್ಕ, ಎಂ.ಕೆ.ನಾಯ್ಕ, ತಾ.ಪಂ. ಸದಸ್ಯೆ ಮಂಜುಳಾಬಾಯಿ, ಶೇಷಾನಾಯ್ಕ, ಬಾಬುನಾಯ್ಕ, ಚಂಪಕಮಾಲ, ನಾನ್ಯಾನಾಯ್ಕ, ಚಂದ್ರಾನಾಯ್ಕ, ಡಾ.ಈಸೌರನಾಯ್ಕ, ಕುಮಾರನಾಯ್ಕ, ತಿಮ್ಮಾನಾಯ್ಕ, ರಾಜೇಂದ್ರನಾಯ್ಕ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ