ಬಳ್ಳಾರಿ
ಹೈದರಾಬಾದ್ ಕರ್ನಾಟಕದ 6 ಜಿಲ್ಲೆಗಳ ಎಲ್ಲಾ ಅಂಗನವಾಡಿ ಕೇಂದ್ರಗಳ ಮಕ್ಕಳಲ್ಲಿ ಕಲಿಕಾ ಸಾಮಥ್ರ್ಯ ಮತ್ತು ಆರೋಗ್ಯ ವೃದ್ಧಿಸಲು ಕಳೆದ ನಾಲ್ಕು ದಿನಗಳಿಂದ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ನಗರದೇವತೆ ಶ್ರೀ ಕನಕದುರ್ಗಮ್ಮ ದೇವಸ್ಥಾನ ಬಳಿಯ ಸರ್ಕಾರಿ ಕಸ್ತೂರ್ ಬಾ ಪ್ರೌಢಶಾಲೆಯಲ್ಲಿಯೂ ಸಹ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ತರಬೇತಿ ಶಿಬಿರ ನಡೆಯಿತು. ಮೇಲ್ವಿಚಾರಕರಾದ ಸಾಯಿಪ್ರಭಾ ಬಿ., ಹೆಚ್.ಮರಿಲಮ್ಮ ಅವರ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರಿಗೆ ವಿಶೇಷ ತರಬೇತಿ ನೀಡಲಾಯಿತು.
ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 2393 ಅಂಗನವಾಡಿ ಕೇಂದ್ರಗಳಿವೆ. ಈ ಪೈಕಿ ಬಳ್ಳಾರಿ ನಗರದ 185 ಕೇಂದ್ರಗಳ ಕಾರ್ಯಕರ್ತೆಯರಿಗೆ ಉತ್ತಮ ಗುಣ ಮಟ್ಟದ ಬಾಲ್ಯದ ಆರಂಭಿಕ ಶಿಕ್ಷಣ ಕಾರ್ಯಕ್ರಮದ ಕುರಿತು ದೃಷ್ಟಿಕೋನ ಬೆಳೆಸಲಾಯಿತು. ಮುಕ್ತ ಆಟಗಳ ಪರಿಕಲ್ಪನೆ ಮತ್ತು ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವುದು, ಅಂಗನವಾಡಿ ಕಾರ್ಯಕರ್ತೆಯರಲ್ಲಿ ಮತ್ತು ಆಟವನ್ನು ಯೋಜನೆ ಮಾಡುವ ಮತ್ತು ಚಟುವಟಿಕೆ ನಡೆಸುವ ಕೌಶಲ್ಯಗಳನ್ನು ಬೆಳಸುವ ಕುರಿತು ತರಬೇತಿ ನೀಡಲಾಯಿತು. ಈ ಸಂದರ್ಭದಲ್ಲಿ ಶಾರದಾ, ಮೀನಾಕ್ಷಿ, ವರಲಕ್ಷ್ಮಿ, ಎಸ್.ಅರ್ಕಾಣಿ ಇನ್ನಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








