ಹರಿಹರ:
ನಗರದ ಹಳೆ ಆಸ್ಪತ್ರೆ ಆವರಣದಲ್ಲಿ ನೂತನ ನಗರ ಪೊಲೀಸ್ ಠಾಣೆ ನಿರ್ಮಾಣಕ್ಕಾಗಿ ಶಾಸಕ ಎಸ್.ರಾಮಪ್ಪ, ಸೇರಿದಂತೆ ಡಿ ಸಿ ಗೌತಮ್ ಬಾಗಾದಿ, ಎಸ್ಪಿ ಚೇತನ್ ಆರ್.ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು.
ಶಾಸಕ ಎಸ್.ರಾಮಪ್ಪರ ಕೋರಿಕೆ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ನಂತರ ಡಿಸಿ ಗೌತಮ್ ಮಾತನಾಡಿ, ಹಳೆ ಆಸ್ಪತ್ರೆ ಜಾಗ ಎಷ್ಟಿದೆ, ಇದರಲ್ಲಿ ಠಾಣೆ ಕಟ್ಟಡಕ್ಕೆ ಎಷ್ಟು ಜಾಗ ಬೇಕಾಗುತ್ತದೆ ಎಂಬುದನ್ನು ಪರಿಶೀಲಿಸಿ ಮಾಹಿತಿ ನೀಡಿದರೆ ಈ ಕುರಿತು ಆರೋಗ್ಯ ಇಲಾಖೆ ಕಾರ್ಯದರ್ಶಿಯವರಿಗೆ ನಿವೇಶನ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಶಾಸಕ ಎಸ್.ರಾಮಪ್ಪರು ಮಾತನಾಡಿ, ನಗರದಲ್ಲಿರುವ ದಾವಣಗೆರೆ ಪಾಲಿಕೆ ಹಳೆ ನೀರು ಸರಬರಾಜು ಕೇಂದ್ರ, ಹಳೆ ಜೆಎಂಎಫ್ಸಿ ನ್ಯಾಯಾಲಯದ ಜಾಗ ಠಾಣೆ ನಿರ್ಮಾಣಕ್ಕೆ ಸೂಕ್ತವಾಗುವುದಿಲ್ಲ. ಹಳೆ ಪಿ.ಬಿ.ರಸ್ತೆಗೆ ಜೋಡಣೆಯಾಗಿರುವ ಹಳೆ ಆಸ್ಪತ್ರೆ ಜಾಗ ಸೂಕ್ತವಾಗುತ್ತದೆ. ಪ್ರಸ್ತಾವನೆ ಸಲ್ಲಿಸಿದ ನಂತರ ತಾವೂ ಕೂಡ ಸರಕಾರದ ಮೇಲೆ ಒತ್ತಡ ಹಾಕಿ ನಿವೇಶನ ಮಂಜೂರಾತಿಗೆ ಪ್ರಯಯ್ತತ್ನಿಸುವುದಾಗಿ ಹೇಳಿದರು.
ಅಗಸನಕಟ್ಟೆ ಕೆರೆ: ನದಿ ಬೇಸಿಗೆಯಲ್ಲಿ ಒಣಗಿದಾಗ ನಗರದ ಜನತೆಗೆ ಕುಡಿಯುವ ನೀರಿಗೆ ಪರ್ಯಾಯವಿಲ್ಲದಂತಾಗಿ ತೊಂದರೆಯಾಗುತ್ತಿದೆ. ದಾವಣಗೆರೆ ತಾಲೂಕು ವ್ಯಾಪ್ತಿಯ ನಗರದ ಹೊರವಲಯದಲ್ಲಿರುವ ಅಗಸನಕಟ್ಟೆ ಕೆರೆಯನ್ನು ನಗರಕ್ಕೆ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆಯಾಗಿ ರೂಪಿಸಬೇಕಿದೆ.
ಆ ಕೆರೆಯ ಹಸ್ತಾಂತರವಾಗಬೇಕಿದೆ ಎಂದು ಡಿಸಿ ಗಮನ ಸೆಳೆದಾಗ ಈ ಕುರಿತು ಪ್ರಸ್ತಾವನೆ ಸಲ್ಲಿಸಲು ಪೌರಾಯುಕ್ತೆ ಎಸ್.ಲಕ್ಷ್ಮಿರಿಗೆ ಡಿಸಿ ಸೂಚಿಸಿದರು.
ಎಸ್ಪಿ ಚೇತನ್ ಆರ್. ಡಿವೈಎಸ್ಪಿ ಮಂಜುನಾಥ ಗಂಗಲ್, ತಹಸೀಲ್ದಾರ್ ರೆಹಾನ್ ಪಾಷಾ, ಆಸ್ಪತ್ರೆ ಮುಖ್ಯಸ್ಥ ಡಾ.ಎಲ್.ಹನುಮನಾಯ್ಕ್, ನಗರಸಭಾ ಸದಸ್ಯ ಎಸ್.ಎಂ.ವಸಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಲ್.ಬಿ.ಹನುಮಂತಪ್ಪ, ಎಂ.ಬಿ.ಆಬಿದ್ ಅಲಿ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ