ಬಳ್ಳಾರಿ
ಸಾಮಾಜಿಕ ಜಾಲತಾಣಗಳಲ್ಲಿ ಹಂಪಿಯ ಬಗ್ಗೆ ವೈರಲ್ ಆಗಿರುವ ವೀಡಿಯೋ ತನಿಖೆ ಮಾಡಲಾಗಿ, ಆ ವೀಡಿಯೋ ಮತ್ತು ಘಟನೆಯು ಸುಮಾರು ವರ್ಷಗಳ ಹಳೆಯದಾಗಿರುವುದು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ರವರ ದೂರಿನಿಂದ ಕಂಡುಬಂದಿರುತ್ತದೆ.
ಮತ್ತೆ ಪೊಲೀಸರು ತಂಡಗಳನ್ನು ಮಾಡಿ ಆ ವೀಡಿಯೋದಲ್ಲಿ ಬಂದಿರುವ ವ್ಯಕ್ತಿಗಳ ಬಗ್ಗೆ ತನಿಖೆ ಮಾಡಿ ವೀಡಿಯೋದಲ್ಲಿರುವ 3 ಜನ ಯುವಕರು ಮತ್ತು ವೀಡಿಯೋ ತೆಗೆದಿರುವ ಒಬ್ಬ ಯುವಕ ಒಟ್ಟು 4 ಜನ ಎಗ್ಸೈಟ್ಮೆಂಟ್ನಿಂದ ಟೂರಿಸ್ಟ್ ಯುವಕರು ಮಾಡಿರುವ ಈ ಘಟನೆ ಪತ್ತೆಯಾಗುತ್ತಿರುತ್ತದೆ.
ಇದರಲ್ಲಿ ಕೆಲವೊಂದು ರಾಜಕೀಯ ಮತ್ತು ಧಾರ್ಮಿಕ ಗುಂಪುಗಳು ತಮ್ಮ ತಮ್ಮ ಸ್ವಾರ್ಥಕ್ಕಾಗಿ ಒಂದು ವರ್ಷದ ಈ ಹಳೆಯ ವೀಡಿಯೋವನ್ನು ತಾತ್ಕಾಲಿಕ ಮತ್ತು ಭವಿಷ್ಯದ ಪ್ರಯೋಜನೆಗಾಗಿ ಉಪಯೋಗಿಸಿಕೊಂಡಿರುವುದು ಕಂಡುಬಂದಿರುತ್ತದೆ. ತಮ್ಮ ಸ್ವಾರ್ಥಕ್ಕಾಗಿ ದೇಶದ ಯಾವುದೇ ಪ್ರಜೆಗಳ ಮೇಲೆ ವೈಷಮ್ಯವನ್ನು ಸೃಷ್ಠಿ ಮಾಡುವುದು ಗಂಭೀರ ಅಪರಾಧವಾಗಿರುತ್ತದೆ. ಅಂತಹ ಅಪರಾಧಗಳನ್ನು ಮಾಡುವವರನ್ನು ಕೂಡ ಕಠಿಣ ಶಿಕ್ಷೆ ಕೈಗೊಳ್ಳಲಾಗುವುದೆಂದು ತಿಳಿಯಪಡಿಸಿದೆ.