ಶ್ರೀದೇವಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶ್ರೀ ಸಂಭ್ರಮ ವಾರ್ಷಿಕೋತ್ಸವ

ತುಮಕೂರು:

     ವಿದ್ಯಾರ್ಥಿಗಳ ಜೀವನದಲ್ಲಿ ಮುಖ್ಯವಾಗಿ ಜೀವನ ಶೈಲಿಯನ್ನು ಬೆಳಿಸಿಕೊಳ್ಳಬೇಕು ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೌಶಲ್ಯ ಹಾಗೂ ಸೌಜನ್ಯವನ್ನು ಬಳಸಿಕೊಳ್ಳಬೇಕು ಹಾಗೂ ಪಠ್ಯಕ್ರಮದ ಜೊತೆ ಜೊತೆಯಲ್ಲಿಯೇ ಕ್ರೀಡೆ, ಸಾಂಸ್ಕøತಿಕ ಕ್ಷೇತ್ರ ಅಗತ್ಯವಾಗಿದೆ. ದೇಶ ಪ್ರಗತಿಶೀಲದಿಂದ ನಡೆಯುತ್ತಿದೆ.

      ಕಳೆದ 5 ವರ್ಷಗಳಿಂದ ಇತಿಹಾಸ ಬದಲಾಗಿರುವುದು ಕಾಣುತ್ತಿರುವುದು ಕಂಡು ಬರುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳು ಬದಲಾವಣೆಯಾಗುತ್ತಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರು ಡಿಜಿಟಲ್ ಇಂಡಿಯಾ ಆರ್ಥಿಕ ಸಂಪನ್ಮೂಲಗಳು ಸಹ ಬದಲಾವಣೆಯಾಗಿ ಕಾಣುತ್ತಿದೆ. ಜೀವನದಲ್ಲಿ ಅತಿಮುಖ್ಯವಾದ ತಾಂತ್ರಿಕ ಶಿಕ್ಷಣ ಅಗತ್ಯವಾಗಿದೆ ಎಂದು ಶ್ರೀದೇವಿ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್‍ರವರು ತಿಳಿಸಿದರು.

      ನಗರದ ಶ್ರೀದೇವಿ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಶ್ರೀ ಸಂಭ್ರಮ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಏಪ್ರಿಲ್ 2 ರಂದು ಸಂಜೆ 6 ಗಂಟೆಗೆ ಏರ್ಪಡಿಸಲಾಗಿತ್ತು. ಇದರ ಜೊತೆ ಜೊತೆಯಲ್ಲಿಯೇ ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮಗಳು ಸಹ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಶಿಕ್ಷಣದ ಜೊತೆಗೆ ಕೌಶಲ್ಯ ಜ್ಞಾನವನ್ನು ಬೆಳೆಸಿಕೊಂಡರೆ ಅನೇಕರಿಗೆ ವರದಾನವಾಗಿದೆ, ಮುಂದೇ ಬರುವ ಕೌಶಲ್ಯಗಳ ಬೆಳೆಸಿಕೊಂಡರೆ ಸುಭದ್ರವಾಗಲಿದೆ ಎಂದರು. ವಿದ್ಯಾರ್ಥಿಗಳು ಜ್ಞಾನವನ್ನು ಬೆಳೆಸಿಕೊಂಡರೆ ಕಂಪನಿಯ ಸ್ವಯಂ ಜೀವನದ ಬುನಾದಿಯಾಗಲಿದೆ. ಭಾರತ ಆರ್ಥಿಕವಾಗಿ ಅಂತರ ರಾಷ್ಟ್ರೀಯದಲ್ಲಿ 6 ನೇ ಸ್ಥಾನವಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಅರ್ಥಪೂರ್ಣವಾಗಿ ವಿವರಿಸಿದರು.

      ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ರೇಣುಕಾ ಪ್ರಸಾದ್‍ರವರು ಮಾತನಾಡುತ್ತಾ ವಿದ್ಯಾರ್ಥಿಗಳಿಂದರೆ ವಿಶೇಷ ಶಕ್ತಿ ಚೈತನ್ಯವಿದ್ದಂತೆ ಹಾಗೂ ವಿದ್ಯಾರ್ಥಿಗಳ ಉತ್ತಮ ವಿದ್ಯಾಭ್ಯಾಸ ಮಾಡಿದರೆ ಉತ್ತಮ ಜೀವನದ ಶಿಖರಕ್ಕೆ ಏರಬಹುದು ಎಂದು ತಿಳಿಸಿದರು.

       ಇದೇ ಸಂದರ್ಭದಲ್ಲಿ ಶ್ರೀದೇವಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಮಹಾಂತೇಶ್ ಭಜಂತ್ರಿರವರು ವಾರ್ಷಿಕ ವರದಿಯನ್ನು ಮಂಡಿಸಿ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಯಾವ ರೀತಿ ವಿದ್ಯಾಭ್ಯಾಸ ಮಾಡಬೇಕು, ಯಾವ ರೀತಿಯಲ್ಲಿ ಅಂಕಗಳಿಸಬೇಕು ಮತ್ತು ಶಿಕ್ಷಣದ ಮೌಲ್ಯಗಳು ಯಾವ ರೀತಿ ಒದಗಿಸಬೇಕಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

       ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಕನ್ನಡದ ಸಿನಿಮಾ ಹಾಸ್ಯನಟರಾದ ಡಿಂಗ್ರಿ ನಾಗರಾಜ್‍ರವರು ಮಾತನಾಡುತ್ತಾ ನಾನು ವಿದ್ಯಾಭ್ಯಾಸ ಮಾಡಿರುವುದು ಕಡಿಮೆ. ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದರೆ ಉತ್ತಮ ಗುರಿಮುಟ್ಟಲ್ಲೂ ಸಾಧ್ಯವಾಗುತ್ತದೆ. ಅಲ್ಲದೆ ಯಶಸ್ವು ಕಟ್ಟಿಟ್ಟಬುತ್ತಿ. ವಿದ್ಯಾರ್ಥಿಗಳು ಜೀವನದಲ್ಲಿ ಲಭಿಸುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಮತ್ತು ವಿದ್ಯಾರ್ಥಿಗಳು ಆತ್ಮವಿಶ್ವಾಸ, ಕೌಶಲ್ಯ, ಶ್ರದ್ದೆ, ಸಮಯಪ್ರಜ್ಞೆ ಇತ್ಯಾದಿಗಳ ಮೂಲಕ ಯಶಸ್ಸುನ್ನು ಸಾಧಿಸಬಹುದು. ಉತ್ತಮ ಫಲಿತಾಂಶ ಪಡೆದವರು ಉದ್ಯೋಗವನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

      ಈ ಸಮಾರಂಭದಲ್ಲಿ ಕಾರ್ಯಕ್ರಮದಲ್ಲಿ ಶ್ರೀದೇವಿ ಕಾಲೇಜಿನ ಆಡಳಿತಾಧಿಕಾರಿಯಾದ ಟಿ.ವಿ. ಬ್ರಹ್ಮದೇವಯ್ಯ, ಚಲನಚಿತ್ರ ವಿತರಕರು ಹಾಗೂ ನಿರ್ದೇಶಕರಾದ ಸ್ವಾಧೀನ್‍ಕುಮಾರ್, ಪ್ರೊ. ಸುಧಾ, ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link