ಗುಬ್ಬಿ
ಸಿದ್ದಗಂಗಾ ಶ್ರೀಗಳು ಪವಾಡ ಪುರುಷರು ದೈವೀಪುರುಷರು ಇವರ ಅಗಲಿಕೆಯಿಂದ ನಾಡಿಗೆ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಇಷ್ಟು ವರ್ಷಗಳ ಕಾಲ ಶ್ರೀಗಳು ತೋರಿಸಿರುವ ಮಾರ್ಗದಲ್ಲಿ ಎಲ್ಲರೂ ಸಾಗಿ ಅವರಿಗೆ ಗೌರವ ಸಲ್ಲಿಸಬೇಕಾಗಿದೆ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಜಿ.ಷಡಾಕ್ಷರಿ ತಿಳಿಸಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ವಕೀಲರ ಸಂಘದವತಿಯಿಂದ ಲಿಂಗೈಕ್ಯ ಶ್ರೀಶಿವಕುಮಾರಮಹಾಸ್ವಾಮಿಗಳ ಪುಣ್ಯಾರಾಧನೆ ಅಂಗವಾಗಿ ಏರ್ಪಡಿಸಿದ್ದ ಭಕ್ತಿ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಷ್ಟ್ರಕ್ಕೆ ಮತ್ತು ರಾಜ್ಯಕ್ಕೆ ಸಿದ್ದಗಂಗಾ ಶ್ರೀಗಳು ನೀಡಿದ ಕೊಡುಗೆ ಅಪಾರ ಅವರು ಮಹಾತಪಸ್ವಿಗಳು ಜಾತ್ಯಾತೀತವಾಗಿ ವಿದ್ಯಾದಾನ, ಅನ್ನದಾನಮಾಡಿದ ಈಶತಮಾನದ ಪುಣ್ಯ ಪುರುಷರಾಗಿದ್ದರು ಅವರ ಆಧರ್ಶಗಳು ಮತ್ತು ಚಿಂತನೆಗಳನ್ನು ಪ್ರತಿಯೊಬ್ಬರೂ ಸಾಮಾಜಿಕ ಬದುಕಿನಲ್ಲಿ ಅಳವಢಿಸಿಕೊಂಡಾಗ ಸುಸಂಸ್ಕøತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.
ವಕೀಲರ ಸಂಘದ ಕಾರ್ಯದರ್ಶಿ ಎಂ.ಪಿ.ಮೋಹನ್ ಮಾತನಾಡಿ ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ ಮತ್ತು ಅನ್ನದಾಸೋಹದ ಮೂಲಕ ಇಡೀವಿಶ್ವಕ್ಕೆ ಮಾದರಿಯಾದ ಸೇವೆಯನ್ನು ಮಾಡಿದ ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾಗಿರುವುದು ತುಂಬಲಾರದ ನಷ್ಟವಾಗಿದೆ ಅವರ ಆಧರ್ಶಗಳನ್ನು ಪಾಲಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವತ್ತ ಮುಂದಾಗಬೇಕಿದೆ ಎಂದು ತಿಳಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಎ.ಎಸ್.ಶಶಿಧರ್ ಮಾತನಾಡಿ ಶ್ರೀಗಳು ಆತ್ಮದ ಬೆಳಕು ಲಕ್ಷಾಂತರ ಭಕ್ತರಿಗೆ ಬೆಳಕು ನೀಡಿ ಅವರು ತಮ್ಮ ಕಾಲಮೇಲೆ ತಾವು ನಿಂತು ಸ್ವಾಭಿಮಾನದ ಬದುಕು ಕಾಣಲು ಶ್ರೀಗಳು ನೆರವಾಗಿದ್ದಾರೆ ಅವರ ಅಗಲಿಕೆಯಿಂದ ಇಡೀ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ ಪ್ರಸ್ತುತ ದಿನಗಳಲ್ಲಿ ಅವರ ಆಧರ್ಶಗಳನ್ನು ಪಾಲಿಸುವ ಮೂಲಕ ಸುಸಂಸ್ಕತ ಸಮಾಜ ನಿರ್ಮಾಣ ಮಾಡುವಂತೆ ತಿಳಿಸಿದರು.
ಭಾಗವಹಿಸಿದ್ದ ಭಕ್ತಾಧಿಗಳಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಫೈರೋಜ್ ಹೆಚ್ ಉಕ್ಕಲಿ, ರಾಘವೇಂದ್ರ ಶೆಟ್ಟಿಗಾರ್, ರಾಧಾ, ಗಣೇಶ್, ವಕೀಲರ ಸಂಘದ ಖಜಾಂಚಿ ಯೋಗೀಶ್, ಜಂಟಿ ಕಾರ್ಯದರ್ಶಿ ರವೀಶ್, ವಕೀಲರುಗಳಾದ ಬಾಲಾಜಿ, ಬಾಲಸುಬ್ರಹ್ಮಣ್ಯ, ಕ್ಷೀರಕುಮಾರಸ್ವಾಮಿ, ದಕ್ಷಿಣಾಮೂರ್ತಿ, ಮಧುಸೂದನ್, ಮಂಜುನಾಥ್, ರಾಜೀವ್‍ಅಮ್ಮನಘಟ್ಟ, ಬಸವರಾಜಯ್ಯ, ರುದ್ರೇಶ್, ನಾಗರಾಜು, ಮಹೇಶ್, ಪುಷ್ಪಲತಾ, ಪ್ರಮೀಳಾ, ಪಟ್ಟಣ ಪಂಚಾಯ್ತಿ ಸದಸ್ಯರಾದ ಜಿ.ಆರ್.ಶಿವಕುಮಾರ್. ಶಶಿಕುಮಾರ್. ಜಿ.ಸಿ.ಕೃಷ್ಣಮೂರ್ತಿ. ಮಹಮದ್ ಸಾಧಿಕ್, ಅಣ್ಣಪ್ಪಸ್ವಾಮಿ, ಕಂದಾಯ ಇಲಾಖೆಯ ಗೋವಿಂದರೆಡ್ಡಿ, ರಮೇಶ್ ಸೇರಿದಂತೆ ನ್ಯಾಯಂಗ ಇಲಾಖೆಯ ಸಿಬ್ಬಂದಿವರ್ಗ, ಪೋಲೀಸ್ ಇಲಖೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.