ಶ್ರೀನಿವಾಸ್ ಮಾನೆಯವರಿಂದ ವಾರ್ಡ್ ವಿಸಿಟ್..!!

ಹಾನಗಲ್ಲ :

     ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಅವರು ಮಂಗಳವಾರ ಹಾನಗಲ್ ಪುರಸಭೆಯ 16 ನೇ ವಾರ್ಡ್‍ನಲ್ಲಿ ವಾರ್ಡ್ ವಿಸಿಟ್ ಕೈಗೊಳ್ಳುವ ಮೂಲಕ ನಿವಾಸಿಗಳ ಸಮಸ್ಯೆ ಆಲಿಸಿದರು. ಇದೇ ಸಂದರ್ಭದಲ್ಲಿ ವಾರ್ಡ್ ನೈರ್ಮಲ್ಯ, ಶುದ್ಧ ಕುಡಿಯುವ ನೀರು ಪೂರೈಕೆ, ಕಸ ವಿಲೇವಾರಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮಕ್ಕೆ ಸ್ಥಳದಲ್ಲಿದ್ದ ಪುರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಇದೇ ಸಂದರ್ಭದಲ್ಲಿ ಸಂಪೂರ್ಣ ದುಸ್ಥಿತಿಗೆ ತಲುಪಿರುವ ವಾರ್ಡ್ ವ್ಯಾಪ್ತಿಯ ಕಲಭಾವಿಗೆ ಭೇಟಿ ನೀಡಿದ ಶ್ರೀನಿವಾಸ್ ಮಾನೆ ಪರಿಸ್ಥಿತಿ ಅವಲೋಕಿಸಿದರು. ಕೂಡಲೇ ಸ್ವಚ್ಛತಾ ಕಾರ್ಯ ಕೈಗೊಂಡು ಪುನಶ್ಚೇತನಕ್ಕೆ ಕಾರ್ಯಸೂಚಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿ, ಸರಕಾರದಿಂದ ಅಗತ್ಯ ಅನುದಾನ ದೊರಕಿಸುವ ಭರವಸೆ ನೀಡಿದರು.

     ಪುರಸಭೆ ಸದಸ್ಯರು ಜನತೆಯಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವಲ್ಲಿ ಕಾಳಜಿ ವಹಿಸಬೇಕು. ಕಸ ಎಲ್ಲೆಂದರಲ್ಲಿ ಎಸೆಯುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಚರಂಡಿ ಮುಚ್ಚಿ ಸೊಳ್ಳೆ, ಹಂದಿ ಕಾಟ ಹೆಚ್ಚುತ್ತಿದ್ದು, ಸಾಂಕ್ರಾಮಿಕ ರೋಗಗಳಿಗೆ ಎಡೆ ಮಾಡಿಕೊಡುವ ಸಾಧ್ಯತೆ ಹೆಚ್ಚಿದೆ.

     ಈ ಹಿನ್ನೆಲೆಯಲ್ಲಿ ಸ್ವಚ್ಛತೆಯ ಬಗೆಗೆ ಸಮುದಾಯದಲ್ಲಿ ಕಳಕಳಿ ಮೂಡಿಸುವಲ್ಲಿ ಮುಂದಾಗಬೇಕಿದೆ ಎಂದು ಹೇಳಿದ ಶ್ರೀನಿವಾಸ್ ಮಾನೆ, ಮನೆ ಮನೆ ಕಸ ಸಂಗ್ರಹಣೆಗೆ ಇನ್ನೂ ಕನಿಷ್ಟ 3 ವಾಹನಗಳ ವ್ಯವಸ್ಥೆ ಕಲ್ಪಿಸಬೇಕು. ಎರಡು ದಿನಗಳಿಗೊಮ್ಮೆ ಕಸ ಸಂಗ್ರಹಿಸಬೇಕು. ಪ್ರತಿಯೊಂದು ಓಣಿಗಳಲ್ಲಿ ಕಸ ಎಸೆಯಲು ತೊಟ್ಟಿ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳ ಗಮನ ಸೆಳೆದರು.

        ಇದೇ ಸಂದರ್ಭದಲ್ಲಿ ಶ್ರೀನಿವಾಸ್ ಮಾನೆ ವಾರ್ಡ್ ನಿವಾಸಿಗಳ ಅಹವಾಲು ಸ್ವೀಕರಿಸಿದರು. ಕಾಶ್ಮೀರಿ ದರ್ಗಾದಿಂದ ಆರಂಭಗೊಂಡ ಸಂಚಾರ ವಾರ್ಡ್ ವ್ಯಾಪ್ತಿಯ ರಸ್ತೆಗಳು ಹಾಗೂ ಓಣಿಗಳಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗನಗೌಡ ಪಾಟೀಲ, ಪ್ರಮುಖರಾದ ಯಲ್ಲಪ್ಪ ಕಿತ್ತೂರ, ರವಿ ದೇಶಪಾಂಡೆ, ರಾಜೂ ಗುಡಿ, ಗುರುರಾಜ್ ನಿಂಗೋಜಿ, ಬಸವರಾಜ್ ಹಾದಿಮನಿ, ಖುರ್ಷಿದ್ ಹುಲ್ಲತ್ತಿ, ವಿರುಪಾಕ್ಷಪ್ಪ ಕಡಬಗೇರಿ ಸೇರಿದಂತೆ ಪುರಸಭೆ ಮುಖ್ಯಾಧಿಕಾರಿಗಳು, ಮುಖ್ಯ ಅಭಿಯಂತರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link