ಪದವೀಧರ ಕ್ಷೇತ್ರದಿಂದ ಶ್ರೀನಿವಾಸ್ ಸ್ಪರ್ಧೆ ಇಂಗಿತ

ತುರುವೇಕೆರೆ

     ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದು ಡಿ.ಟಿ.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಬೆಂಬಲಿಗರು ಹಾಗೂ ಯಾದವ ಸಂಘದ ಮುಖಂಡರ ಜೊತೆ ಚುನಾವಣಾ ಸಿದ್ದತೆ ಬಗ್ಗೆ ಸಭೆ ನಡೆಸಿದ ಅವರು, ಪತ್ರಕರ್ತರ ಜೊತೆ ಮಾತನಾಡಿದರು. ನಾನು ಕಳೆದ ಒಂದೂವರೆ ವರ್ಷದಿಂದ ಚುನಾವಣಾ ಪೂರ್ವ ತಯಾರಿ ನಡೆಸಿದ್ದೇನೆ. ಕ್ಷೇತ್ರದ 31 ತಾಲ್ಲೂಕುಗಳಲ್ಲೂ ಒಂದೊಂದು ತಂಡವನ್ನು ರಚನೆ ಮಾಡಿ ಸುಮಾರು, 44 ಸಾವಿರ ಪದವೀಧರರನ್ನು ನೋಂದಣಿ ಮಾಡಿಸಲಾಗಿದೆ.

      ಈಗಾಗಲೇ ಕ್ಷೇತ್ರದ 20 ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿದ್ದೇನೆ. ನಮಗೆ ಎಲ್ಲ ತಾಲ್ಲೂಕಿನಲ್ಲಿ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ. ಜಾತಿ ಮೀರಿ ಎಲ್ಲರೂ ಪಕ್ಷ್ಷಾತೀತವಾಗಿ ನನಗೆ ಸಹಕಾರ ನೀಡುತ್ತಿದ್ದಾರೆ. ಅಹಿಂದ ನಾಯಕನಾಗಿ ಈ ಚುನಾವಣೆಯಲ್ಲಿ ಗೆಲ್ಲುವ ಭರವಸೆ ಇದೆ. ಅ. 8 ನೆ ತಾರೀಕು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು ಅ.7 ರಂದು ನಾಮ ಪತ್ರ ಸಲ್ಲಿಸಲಿದ್ದೇನೆ ಎಂದರು.

      ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ ಜಿಲ್ಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ಒಂದೊಂದು ತಾಲ್ಲೂಕಿನಲ್ಲೂ ತಂಡವನ್ನು ರಚನೆ ಮಾಡಿ ಚುನಾವಣಾ ಪ್ರಚಾರ ಆರಂಭಿಸಲಾಗಿದೆ. ನಾನು ಎಂಜಿನಿಯರ್ ಪದವೀಧರನಾಗಿದ್ದು, ಪೊಲೀಸ್ ಅಧಿಕಾರಿ, ಕೆಎಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಎಸ್.ಇ.ಎ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೇನೆ. ಸುಮಾರು 8000 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಬಡ ಜನರಿಗೆ, ಯುವಕರಿಗೆ ಹೆಚ್ಚಿನ ಅನುಕೂಲ ಸೇವೆ ಮಾಡುವ ಉದ್ದೇಶದಿಂದ ಸ್ಪರ್ಧಿಸಲಾಗುವುದಾಗಿ ತಿಳಿಸಿದರು.

     ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯ ಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ನರಸಿಂಹರಾಜು, ಪಟ್ಟಣ ಪಂಚಾಯ್ತಿ ಸದಸ್ಯ ಪ್ರ್ರಭಾಕರ್, ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಬಸವರಾಜು, ಅಕ್ಕಳಸಂದ್ರ ಪ್ರಕಾಶ್, ಚಂದ್ರಣ್ಣ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link