ಹಿರಿಯೂರು :
ನಗರದ ಶ್ರೀರಾಮಸೇವಾ ಸಮಿತಿ ವತಿಯಿಂದ ನಗರದ ಪ್ರಧಾನ ರಸ್ತೆಯಲ್ಲಿರುವ ಶ್ರೀ ಸತ್ಯನಾರಾಯಣಸ್ವಾಮಿ ದೇವಾಯಲದಲ್ಲಿ ರಾಮನವಮಿ ಅಂಗವಾಗಿ ವಿಶೇಷ ಪೂಜಾಕಾರ್ಯಕ್ರಮಗಳನ್ನು ನಡೆಸಲಾಯಿತು.
ಆನಂತರ ಶ್ರೀರಾಮ, ಸೀತಾಮಾತೆ, ಲಕ್ಷ್ಮಣ, ಆಂಜನೇಯಸ್ವಾಮಿ ದೇವರನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಟಾಪಿಸಿ ನಗರದ ಪ್ರಮುಖ ಬೀದಿಗಳಲ್ಲಿ ವೈಭವದ ಮೆರವಣಿಗೆ ನಡೆಸಲಾಯಿತು. ದಾರಿಯುದ್ಧಕ್ಕೂ ಭಕ್ತರ ಮನೆಗಳಲ್ಲಿ ದೇವರಿಗೆ ಪೂಜೆ ಸಮರ್ಪಿಸಲಾಯಿತು. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ಪಾನಕ, ಕೋಸುಂಬರಿ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ಎಂ.ರಾಮಮೂರ್ತಿ, ಎಂ.ಎಸ್.ವೆಂಕಟೇಶ್, ಎಂ.ಎಸ್.ರಾಘವೇಂದ್ರ, ವೆಂಕಟೇಶ್‍ದೀಕ್ಷಿತ್, ರಾಮಸ್ವಾಮಿ, ಗುರುಪ್ರಸಾದ್, ಡಾ||ರವಿಕಿರಣ್, ಸಂದೇಶ್, ಶ್ರೀರಾಮಚಂದ್ರ, ಪ್ರೇಮ್‍ಕುಮಾರ್, ನಿಖಿಲ್ ಸೇರಿದಂತೆ ಅನೇಕ ಭಕ್ತರು ಪಾಲ್ಗೊಂಡಿದ್ದರು.