ಚಳ್ಳಕೆರೆ
ರೈತರ ಸಾಲ ಮನ್ನಾ ಬಗ್ಗೆ ಪ್ರಸ್ತುತ ಮೈತ್ರಿ ಕೂಟ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರಿಯಾದ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾದ ರೈತರು ಸಾಲ ಬಾಧೆಯನ್ನು ಎದುರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ದುಖದ ಸಂಗತಿ ಎಂದು ಶಾಸಕ ಬಿ.ಶ್ರೀರಾಮುಲು ವಿಷಾದ ವ್ಯಕ್ತ ಪಡಿಸಿದರು.
ಅವರು, ಗುರುವಾರ ತಮ್ಮ ಕ್ಷೇತ್ರ ವ್ಯಾಪ್ತಿಯ ಯಾದಲಗಟ್ಟೆ ಗ್ರಾಮದಲ್ಲಿ ಡಿ.3ರ ಸೋಮವಾರ ಗ್ರಾಮದ ರೈತ ಈರಣ್ಣ ಬಿನ್.ಸಣ್ಣಈರಣ್ಣ (45) ಅಲ್ಪ ಜಮೀನು ಹೊಂದಿದ್ದು, ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ರೈತನ ಮನೆಗೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರಲ್ಲದೆ, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.
ರೈತರು ಸಾಲದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ದುಸಾಹಸಕ್ಕೆ ಕೈಹಾಕಬಾರದು. ಪತ್ನಿ, ಮಕ್ಕಳು ಮತ್ತು ಪೋಷಕರ ಬಗ್ಗೆಯೂ ಸಹ ಚಿಂತನೆ ನಡೆಸಬೇಕು. ರಾಜ್ಯ ಸರ್ಕಾರ ರೈತ ಸಾಲ ಮನ್ನಾ ಬಗ್ಗೆ ಇದುವರೆಗೂ ಯಾವುದೇ ಬ್ಯಾಂಕ್‍ಗಳಿಗೆ ಸ್ಪಷ್ಟ ನಿರ್ದೇಶನ ನೀಡಿಲ್ಲ. ಇದು ರೈತರ ಆತ್ಮವಿಶ್ವಾಸವನ್ನು ಕುಗ್ಗಿಸಿದೆ. ತಾಲ್ಲೂಕಿನಲ್ಲಿ ಒಂದೇ ದಿನ ಇಬ್ಬರು ಯುವ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನಾದರೂ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದರು. ಇದೇ ಸಂದರ್ಭದಲ್ಲಿ ರೈತ ಕುಟುಂಬಕ್ಕೆ ತಮ್ಮ ವಯಕ್ತಿಯ ನೆರವು ನೀಡುವ ಆಶ್ವಾಸನೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ.ಜಯಪಾಲಯ್ಯ, ಎಂ.ವೈ.ಟಿ.ಸ್ವಾಮಿ, ವೆಂಕಟಪ್ಪ, ಹೊನ್ನೂರು ಪ್ರಕಾಶ್ ಮುಂತಾದವರು ಭೇಟಿ ನೀಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ