ಗೋಪನಹಳ್ಳಿ ಗ್ರಾಮದಲ್ಲಿ ದೀವಣಿಗೆ ಹಬ್ಬಕ್ಕೆ ಮೆರಗು ತಂದ ಎತ್ತುಗಳ ಮೆರವಣಿಗೆ

0
28

ಚಳ್ಳಕೆರೆ

          ಪ್ರತಿವರ್ಷದ ದೀಪಾವಳಿ ನಗರ ಪ್ರದೇಶದಲ್ಲಿ ಪಟಾಕಿಗಳ ಸಿಡಿತದಿಂದ ಆಚರಿಸಲ್ಪಟ್ಟರೆ ಗ್ರಾಮೀಣ ಭಾಗಗಳಲ್ಲಿ ಮಾತ್ರ ಸಂಪ್ರದಾಯ ಬದ್ದವಾಗಿ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ದೀಪಾವಳಿ ಹಬ್ಬವೆಂದರೆ ರೈತರಿಗೆ ಸುಗ್ಗಿಯ ಪ್ರಾರಂಭದ ಹಬ್ಬವಾಗಿದ್ದು, ವರ್ಷವೀಡಿ ಕೃಷಿ ಕಾರ್ಯದಿಂದ ದುಡಿಯುವ ಎತ್ತುಗಳನ್ನು ಪೂಜಿಸಿ ಅವುಗಳ ಅಲಂಕರಿಸಿ ಗ್ರಾಮದ ತುಂಬಾ ಮೆರವಣಿಗೆ ಮಾಡುವುದಲ್ಲದೆ, ದೇವಸ್ಥಾನದ ದರ್ಶನವನ್ನು ಸಹ ಮಾಡಿಸಲಾಗುತ್ತದೆ.

       ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ದೀವಣಿಗೆ ಅರ್ಥಾತ್ ದೀಪಾವಳಿ ಹಬ್ಬವನ್ನು ಅಲ್ಲಿನರೈತರು ಹಾಗೂ ಗ್ರಾಮಸ್ಥರು ಅರ್ಥಗರ್ಭಿತವಾಗಿ ಆಚರಿಸಿದರು. ಗ್ರಾಮದ ಮುಂದಿನ ದೇವಸ್ಥಾನದ ಬಳಿ ನೂರಾರು ಎತ್ತುಗಳನ್ನು ಅಲಂಕರಿಸಿ ಮೆರವಣಿಗೆ ಮೂಲಕ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮಂಗಳವಾದ್ಯಗಳೊಂದಿಗೆ ನಡೆಸಿಕೊಂಡು ಹೋಗಲಾಯಿತು.

       ಈ ಹಬ್ಬದಲ್ಲಿ ಎತ್ತುಗಳ ಅಲಂಕರಕ್ಕೆ ವಿಶೇಷವಾಗಿ ತಂಕಟೆ ಹೂ ಶ್ರೇಷ್ಠವಾಗಿದ್ದು, ಇವುಗಳನ್ನು ತಂದು ಪೂಜಿಸುವರು. ನಂತರ ಎತ್ತುಗಳ ಮೆರವಣಿಗೆ ಮುಗಿಸಿ ಗ್ರಾಮದ ಹೊರ ಭಾಗದಲ್ಲಿ ಮೊದಲೇ ನಿಗದಿಗೊಳಿಸಿದ ಸ್ಥಳದಲ್ಲಿ ಎಲ್ಲಾ ಅಲಂಕೃತ ಎತ್ತುಗಳನ್ನು ಕರೆತಂದು ಗುಡ್ಡಕ್ಕೆ ಬೆಂಕಿ ಹಚ್ಚಿ ಎತ್ತುಗಳನ್ನು ಓಡಿಸುವುದರೊಂದಿಗೆ ದೀವಣಿಗೆ ಹಬ್ಬಕ್ಕೆ ವಿದಾಯ ಹೇಳಲಾಗುವುದು. ಈ ದೃಶ್ಯವನ್ನು ನೋಡಲು ಗ್ರಾಮದ ಇಡೀ ಜನರೆ ಬಂದು ಸೇರುವುದು ವಿಶೇಷ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here