ಪಾಟೀಲರ ಪರ ಶ್ರೀನಿವಾಸ್ ಮಾನೆ ಪ್ರಚಾರ

ಹಾನಗಲ್ಲ :

       ಸಂವಿಧಾನದ ಸಂರಕ್ಷಣೆ, ಪ್ರಜಾಸತ್ತಾತ್ಮಕ ವ್ಯವಸ್ಥೆಯ ಉಳಿವಿಗೆ, ಸಂವಿಧಾನಿಕ ಸಂಸ್ಥೆಗಳ ಸಬಲೀಕರಣಕ್ಕೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವಂತೆ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಮನವಿ ಮಾಡಿದರು.

      ಶನಿವಾರ ಹಾನಗಲ್ ತಾಲೂಕಿನ ಹಿರೇಬಾಸೂರು, ಸೋಮಸಾಗರ, ಡೊಮ್ಮನಾಳ, ಬ್ಯಾಗವಾದಿ, ಮುಳಥಳ್ಳಿ, ಗುಡ್ಡದ ಮುಳಥಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ ಪರ ಮತಯಾಚಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡ ಕುಟುಂಬಗಳಿಗೆ ಪ್ರತಿ ತಿಂಗಳು ರೂ. 6 ಸಾವಿರ ನೀಡುವ ನ್ಯಾಯ ಹೆಸರಿನ ಮಹತ್ವಾಕಾಂಕ್ಷಿ ಯೋಜನೆ ಆರಂಭಿಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಉತ್ಸುಕರಾಗಿದ್ದಾರೆ.

         ದೇಶದಲ್ಲಿನ ಪ್ರತಿ ಬಡ ಕುಟುಂಬಗಳೂ ಸಹ ನೆಮ್ಮದಿ ಮತ್ತು ಗೌರವದಿಂದ ಜೀವನ ಸಾಗಿಸಬೇಕು ಎನ್ನುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಹೇಳಿದ ಅವರು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ ಎಲ್ಲರೊಂದಿಗೆ ಬೆರೆಯುವ ಸರಳ ಮತ್ತು ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದಾರೆ. ಇಂಥವರನ್ನು ಆಯ್ಕೆ ಮಾಡುವುದರಿಂದ ಲೋಕಸಭೆಯಲ್ಲಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಲಿದೆ ಎಂದರು.

          ನಿವೃತ್ತ ಜಿಲ್ಲಾಧಿಕಾರಿ ಬಿ.ಶಿವಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುಟ್ಟಪ್ಪ ನರೇಗಲ್, ಮುಖಂಡರಾದ ದಾನಪ್ಪ ಗಂಟೇರ, ಗೀತಾ ಪೂಜಾರ, ಶಾಂತಕ್ಕ ಅಂಗಡಿ ಮೊದಲಾದವರು ಮಾತನಾಡಿ, ಹಾವೇರಿ ಕ್ಷೇತ್ರಕ್ಕೆ ಸಂಸದ ಶಿವಕುಮಾರ ಉದಾಸಿ ಅವರ ಕೊಡುಗೆ ಏನು ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. 10 ವರ್ಷಗಳ ಕಾಲ ಕ್ಷೇತ್ರವನ್ನು ಪ್ರತಿನಿಧಿಸಿದರೂ ಸಮಸ್ಯೆ ಅರಿಯುವ, ಜನತೆಯ ಸಂಕಷ್ಟಗಳಿಗೆ ಸ್ಪಂದಿಸದ ಇಂಥ ಸಂಸದರು ಕ್ಷೇತ್ರಕ್ಕೆ ಅಗತ್ಯವಿಲ್ಲ ಎಂದರು.

          ಕೆಪಿಸಿಸಿ ಸದಸ್ಯ ಸತೀಶ್ ದೇಶಪಾಂಡೆ, ಮುಖಂಡರಾದ ಯಲ್ಲಪ್ಪ ಕಲ್ಲೇರ, ಭರಮಣ್ಣ ಶಿವೂರ, ಎಸ್.ಆರ್.ಪಾಟೀಲ, ಚನ್ನಬಸಯ್ಯ ಹಿರೇಮಠ, ನಾಗರಾಜ್ ಗಂಗಕ್ಕನವರ, ಚಂದ್ರಪ್ಪ ಲಮಾಣಿ, ಬಸವರಾಜ್ ಪೂಜಾರ, ಭೀಮಣ್ಣ ಲಮಾಣಿ, ಗಣೇಶ ಬುಳ್ಳಣ್ಣನವರ, ನಿಂಗಪ್ಪ ಮಲಗೌಡ್ರ, ಚಂದ್ರಪ್ಪ ಕಾರಡಗಿ, ಮಹದೇವಪ್ಪ ಬುಳ್ಳಣ್ಣನವರ, ಬಸವರಾಜ್ ಮೆಳ್ಳಳ್ಳಿ, ಕೊಟ್ರಪ್ಪ ಕುದರಿಸಿದ್ದನವರ, ಉಮೇಶ ಗೌರಕ್ಕನವರ, ವೀರಭದ್ರಪ್ಪ ಬಂಕಾಪೂರ ಮೊದಲಾದವರು ಈ ಸಂದರ್ಭದಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link