ತುರುವೇಕೆರೆ
ತಾಲ್ಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಗುರುವಾರ ಸುಲಲಿತವಾಗಿ ನಡೆಯಿತು.
ಪರೀಕ್ಷೆ ಬೆಳಗ್ಗೆ 9.30ರಿಂದ ಪ್ರಾರಂಭವಾಗಿ ಮಧ್ಯಾಹ್ನ 12.30 ರ ತನಕ ನಡೆಯಿತು. ಗುರುವಾರ ಅಮ್ಮಸಂದ್ರದ ಮೈಸೆಂಕೋ ಶಾಲಾ ಮಕ್ಕಳು ಪ್ರಥಮ ಭಾಷೆ ಇಂಗ್ಲಿಷ್ ಅನ್ನು ದಂಡಿನಶಿವರ ಮತ್ತು ಹುಲ್ಲೇಕೆರೆ ಪರೀಕ್ಷಾ ಕೇಂದ್ರಗಳಲ್ಲಿ ಬರೆದರೆ; ಇನ್ನುಳಿದ ತಾಲ್ಲೂಕಿನ ಎಲ್ಲಾ ಶಾಲಾ ಮಕ್ಕಳು ಪ್ರಥಮಭಾಷೆ ಕನ್ನಡ ವಿಷಯವನ್ನು ಬರೆದರು.
ಈ ಬಾರಿ ತಾಲ್ಲೂಕಿನಲ್ಲಿ ಫ್ರೆಶ್‍ನ 1941 ಹಾಗೂ 206 ಪುನರಾವರ್ತಿತ ವಿದ್ಯಾರ್ಥಿಗಳು ತಾಲ್ಲೂಕಿನ 8 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದರು. ಇದರಲ್ಲಿ 63 ವಿದ್ಯಾರ್ಥಿಗಳು ಮಾತ್ರ ಮೊದಲನೆಯ ದಿನದ ಪರೀಕ್ಷೆಗೆ ಗೈರಾಗಿದ್ದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತುರುವೇಕೆರೆ ಜಿಲ್ಲೆಯಲ್ಲೆ ಉತ್ತಮ ಸ್ಥಾನ ಪಡೆಯುವಂತೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗಿದೆ ಎಂದು ಬಿಇಒ ರಂಗಧಾಮಯ್ಯ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
