ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಿಬ್ಬಂದಿ ಕೊರತೆ

ಗುತ್ತಲ

      ಗುತ್ತಲ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಸುಮಾರು ಮೂರು ವರ್ಷ ಗತಿಸಿದರು ಅದಕ್ಕೆ ತಕ್ಕಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾತ್ರ ಈವರೆಗೂ ನೇಮಕಗೊಳ್ಳದೆ ಪಟ್ಟಣದ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ.

      ಗುತ್ತಲ ಪಟ್ಟಣ ಪಂಚಾಯಿತಿಯಾಗಿ 2015 ರ ಏಪ್ರಿಲ್‍ನಲ್ಲಿ ಮೇಲ್ದರ್ಜೆಗೇರಿದರು ಈವರೆಗೂ ಅನೇಕ ಸಿಬ್ಬಂದಿ ಕೊರತೆಯಿಂದ ಕೆಲಸ ಕಾರ್ಯಗಳು ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲಾ. ಪಟ್ಟಣ ಪಂಚಾಯಿತಿಗೆ ಕೋಟ್ಯಾಂತರ ರೂಪಾಯಿ ಅನುದಾನ ಬಂದರೂ ಅದರಿಂದ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಿಬ್ಬಂದಿಗಳ ಕೊರತೆ ಅಡ್ಡವಾಗಿದೆ. ಇದುವರೆಗೂ ಖಾಯಂ ಆಗಿ ಇಂಜಿನಿಯರ್ ಕೂಡಾ ಇಲ್ಲಾ. ಇದರಿಂದ ಅನುದಾನ ಬಳಕೆ ಹಾಗೂ ಅಭಿವೃದ್ದಿ ಕಾರ್ಯಗಳನ್ನು ಕಾರ್ಯ ರೂಪಕ್ಕೆ ತಂದು ಜನ ಸಾಮಾನ್ಯರಿಗೆ ತಲುಪಿಸಿ ಸ್ಪಂದಿಸಲು ಸಾಧ್ಯ ವಾಗುತ್ತಿಲ್ಲಾ ಎಂದು ಪ.ಪಂ ಸದಸ್ಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

         ಸದ್ಯದ ಪರಿಸ್ಥಿತಿಯಲ್ಲಿ ರಾಣೇಬೆನ್ನೂರು ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಜಿನಿಯರ್ ಅವರನ್ನು ಪಟ್ಟಣ ಪಂಚಾಯಿತಿಗೆ ನಿಯೋಜನೆ ಮಾಡಲಾಗಿದೆ. ಅವರು ಕೇವಲ ವಾರದಲ್ಲಿ ಎರಡು ದಿನ ಇಲ್ಲಿಗೆ ಬಂದು ಕಾರ್ಯನಿರ್ವಹಿಸುತ್ತಾರೆ ಇಂದರಿಂದ ಅಭಿವೃದ್ಧಿ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿವೆ. ಖಾಯಂ ಇಂಜಿನಿಯರ್ ನಿಯೋಜಿಸುವಂತೆ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಪದೋನ್ನತಿ ಹೊಂದಿದಾಗಿನಿಂದಲೂ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚಿಸುತ್ತಾ ಬಂದರು ಯಾವುದೇ ಪ್ರಯೋಜನವಾಗಿಲ್ಲಾ. ಈ ಬಗೆಗೆ ನಗರ ಯೋಜನಾ ಅಧಿಕಾರಿಗಳು ಕ್ರಮಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ.

        ಪಟ್ಟಣ ಪಂಚಾಯಿತಿಗೆ ಖಾಯಂ ಇಂಜಿನಿಯರ್ ನೇಮಕ ಅವಶ್ಯವಾಗಿದೆ. ಅನೇಕ ಕೆಲಸಗಳಿಗೆ ಇಂಜಿನಿಯರ್ ಅವಶ್ಯವಾಗಿದ್ದರು ವಾರದಲ್ಲಿ ಎರಡು ದಿನ ಬರುವ ಇಂಜಿನಿಯರ್ ಕಾದುಕುಳಿತು ಕೆಲಸ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ, ಇದರಿಂದ ಜನರಿಗೆ ಆಗುತ್ತಿರುವ ತೊಂದರೆಯನ್ನು ಯಾರೊಬ್ಬರು ಗಂಭೀರವಾಗಿ ಪರಿಗಣಿಸಿಲ್ಲಾ.

        ಪಟ್ಟಣ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ: 1) ಪ್ರಥಮ ದರ್ಜೆ ಕಂದಾಯ ನೀರಿಕ್ಷಕ, 2) ಪ್ರಥಮ ದರ್ಜೆ ಸಹಾಯಕ, 3)ನೋಡಲ್ ಇಂಜಿನಿಯರ್, 4) ಸಮುದಾಯ ಸಂಘಟನಾಧಿಕಾರಿ, 5) ಆರೋಗ್ಯ ನೀರಿಕ್ಷಕರ, 6) ಅಟೆಂಡರ್/ಸಿಪಾಯಿ ಈ ರೀತಿಯಾಗಿ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸಲು ಸೂಕ್ತ ರೀತಿಯ ಸಿಬ್ಬಂದಿಗಳಿಲ್ಲದೆ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಮುಟ್ಟಿಸುವಲ್ಲಿ ವಿಳಂಬವಾಗುತ್ತಿವೆ.

          ಈ ಎಲ್ಲಾ ಸಿಬ್ಬಂದಿಗಳ ಸಮಸ್ಯೆಯನ್ನು ಹೊತ್ತು ನಿಂತಿರುವ ಗುತ್ತಲ ಪಟ್ಟಣ ಪಂಚಾಯಿತಿಗೆ ಸಂಬಂದಿಸಿದ ಮೇಲಾಧಿಕಾರಿಗಳು ಖಾಲಿ ಇರುವ ಅಧಿಕಾರಿಗಳನ್ನು ನೇಮಕ ಮಾಡಿ, ಇಲ್ಲಿಯ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಮುಕ್ತಿ ನೀಡುವರಾ ಎಂದು ಇಲ್ಲಿ ಸ್ಥಳೀಯರು ಕಾದು ಕುಳಿತ್ತಿದ್ದಾರೆ.

          ಬಾಕ್ಸ..ಪಟ್ಟಣ ಪಂಚಾಯಿತಿಗೆ ಅವಶ್ಯವಿರುವ ಅಧಿಕಾರಿಗಳನ್ನು ನೀಡಿದರೆ ಜನ ಸಾಮಾನ್ಯರಿಗೆ ಸೂಕ್ತ ರೀತಿಯಲ್ಲಿ ಸೌಲಭ್ಯವನ್ನು ನೀಡಲು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗಲಿದೆ. ಎಮ್.ಕೆ.ಮುಗಳಿ ಪ.ಪಂ ಮುಖ್ಯಾಧಿಕಾರಿ.

          ಪಟ್ಟಣ ಪಂಚಾಯಿತಿಗೆ ಖಾಯಂ ಇಂಜಿನಿಯರ್ ನೇಮಕದ ಕುರಿತು ಸಂಬಂದಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲಾ ಕೂಡಲೇ ಸಂಬಂದಿಸಿದ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಖಾಯಂ ಇಂಜಿನಿಯರ್ ನೇಮಕ ಮಾಡಬೇಕಾಗಿದೆ. ನಾಗರಾಜ ಏರಿಮನಿ ಪ.ಪಂ ಉಪಾಧ್ಯಕ್ಷ

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link