ಕುರುಬರ ಸಂಘದ ರಾಜ್ಯಾಧ್ಯಕ್ಷ ಸ್ಥಾನ ಈ ಬಾರಿ ದಾವಣಗೆರೆ ಜಿಲ್ಲೆಗೆ ಸಿಗಲಿ

ದಾವಣಗೆರೆ:

    ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಸ್ಥಾನ ಈ ಬಾರಿ ದಾವಣಗೆರೆ ಜಿಲ್ಲೆಗೆ ಸಿಗಬೇಕೆಂದು ಎಪಿಎಂಸಿ ಮಾಜಿ ಅಧ್ಯಕ್ಷ, ಸಮಾಜದ ಹಿರಿಯ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಒತ್ತಾಯಿಸಿದರು.

    ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲಿ ಮಾತನಾಡಿದ ಅವರು, ಮಾಜಿ ಶಾಸಕ ಕೆ.ಮಲ್ಲಪ್ಪನವರ ನಂತರ ಈ ವರೆಗೆ ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ದಾವಣಗೆರೆಯವರು ಅಧ್ಯಕ್ಷರಾಗಿಲ್ಲ. ಈ ಬಾರಿ ಸಂಘದ ನಿರ್ದೇಶಕರಾಗಿ ದಾವಣಗೆರೆ ಜಿಲ್ಲೆಯಿಂದ 4 ಮಂದಿ ಆಯ್ಕೆಯಾಗಿದ್ದು, ಅವರಲ್ಲಿ ಒಬ್ಬರವನ್ನು ಸಂಘಕ್ಕೆ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

    ಸಂಘದ ನಿರ್ದೇಶಕರ 4 ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 23 ಜನರು ಸ್ಪರ್ಧಿಸಿದ್ದರು. ಚುನಾವಣೆ ಇಲ್ಲದೇ ಅವಿರೋಧ ಆಯ್ಕೆ ಮಾಡಬೇಕೆಂದು ಕರೆದಿದ್ದ ಸಭೆಗೆ ಆಹ್ವಾನ ಸ್ವೀಕರಿಸಿ 15 ಜನ ಹಾಜರಾಗಿದ್ದರು. ಅಂತಿಮವಾಗಿ ಒಮ್ಮತದಿಂದ ಕಣಕ್ಕಿಳಿಸಿದ್ದ 4 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಕೆಂಗೋ ಹನುಮಂತಪ್ಪ, ಹೆಚ್.ಬಿ.ಪರಶುರಾಮ, ಪಿ.ರಾಜಕುಮಾರ, ಆರ್.ಸುನಂದಮ್ಮ ಆಯ್ಕೆಗೆ ಸಹಕರಿಸಿದ ಎಲ್ಲ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ಇದೇ ವೇಳೆ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಕೆ.ವಿರೂಪಾಕ್ಷಪ್ಪ, ಬಳ್ಳಾರಿ ಷಣ್ಮುಖಪ್ಪ, ಮುದಹದಡಿ ದಿಳ್ಳೆಪ್ಪ, ಹದಡಿ ಬಸವರಾಜಪ್ಪ, ಅರವಿಂದ್ ಹಾಲೇಕಲ್, ಹೆಚ್.ಬಿ.ಗೋಣೆಪ್ಪ, ಹೆಚ್.ಸಿ.ಹನುಮಂತಪ್ಪ, ಹೆಚ್.ಜಿ.ಸಂಗಪ್ಪ, ಕೆ.ಪರಶುರಾಮಪ್ಪ, ಚೌಡಪ್ಪ, ಅಡಾಣಿ ಸಿದ್ದಪ್ಪ, ಎಸ್.ಎಸ್.ಗಿರೀಶ ಮತ್ತಿತರರು ಹಾಜರಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link