ಬಳ್ಳಾರಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸರಕಾರದ ವಿವಿಧ ಯೋಜನೆಗಳ ಕುರಿತು ಬೀದಿನಾಟಕದ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಶನಿವಾರ ತೆಕ್ಕಲಕೋಟೆ ಮತ್ತು ನಡವಿ ಗ್ರಾಮಗಳಲ್ಲಿ ನಡೆಯಿತು.
ಈ ಜಾಗೃತಿಯಲ್ಲಿ ಇಸ್ರೆಲ್ ಕೃಷಿ ಪದ್ದತಿ ಅಳವಡಿಕೆ, ಸಾವಯವ ಕೃಷಿಗೆ ಒತ್ತು, ಕೃಷಿ ಸಾಲಮನ್ನಾ, ಆತ್ಮಹತ್ಯೆ ಮಾಡಿಕೊಳ್ಳದಿರಿ ರೈತರೇ ನಿಮ್ಮ ಬೆನ್ನಿಗೆ ಸರಕಾರವಿದೆ, ಸ್ವಚ್ಛತೆ ಮತ್ತು ಶೌಚಾಲಯ, ಸಮಾಜಕಲ್ಯಾಣ ಇಲಾಖೆ ಸಹಾಯವಾಣಿ, ಆರೋಗ್ಯ ಕರ್ನಾಟಕ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಕುರಿತು ರಂಗಸಂಸ್ಕತಿ ಕಲಾತಂಡದ ಕಲಾವಿದರು ಬೀದಿನಾಟಕದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಸರಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡ ಸಾರ್ವಜನಿಕರು ಸಂತೋಷ ವ್ಯಕ್ತಪಡಿಸಿದರು. ವಿವಿಧ ಯೋಜನೆಗಳ ಕುರಿತು ಹೊರತಂದ ಕಿರುಹೊತ್ತಿಗೆಗಳು ಮತ್ತು ಕರಪತ್ರಗಳನ್ನು ಜನರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ರಂಗಸಂಸ್ಕತಿ ಕಲಾತಂಡದ ಮುಖ್ಯಸ್ಥ ಪ್ರಶಾಂತ, ತಂಡದ ಸದಸ್ಯರುಗಳು ಸೇರಿದಂತೆ ಸಾರ್ವಜನಿಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
