ಹಾವೇರಿ
ಹಾವೇರಿ ಜಿಲ್ಲಾ ಪಂಚಾಯತಿಯ ಸಾಮಾನ್ಯ ಸ್ಥಾಯಿ ಸಮಿತಿಗೆ ಶ್ರೀಮತಿ ದೀಪಾ ನಿಂಗಪ್ಪ ಅತ್ತಿಗೇರಿ, ಹಣಕಾಸು ಸ್ಥಾಯಿ ಸಮಿತಿಗೆ ಎಸ್.ಕೆ.ಕರಿಯಣ್ಣನವರ, ಸಾಮಾಜಿಕ ನ್ಯಾಯ ಸಮಿತಿಗೆ ಮಾರುತಿ ರಾಮಪ್ಪ ರಾಠೋಡ, ಶಿಕ್ಷಣ ಮತ್ತು ಆರೋಗ್ಯ ಸಮಿತಿಗೆ ರಮೇಶ ದುಗ್ಗತ್ತಿ, ಕೃಷಿ ಕೈಗಾರಿಕಾ ಸಮಿತಿಗೆ ಶ್ರೀಮತಿ ನೀಲವ್ವ ನಾಗಪ್ಪ ಚವ್ಹಾಣ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ಧಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತಿ ಐದು ಸ್ಥಾಯಿ ಸಮಿತಿಗಳಿಗೆ ಚುನಾವಣೆ ಜರುಗಿತು.
ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶ್ರೀಮತಿ ದೀಪಾ ನಿಂಗಪ್ಪ ಅತ್ತಿಗೇರಿ ಹಾಗೂ ಸದಸ್ಯರಾಗಿ ಕೊಟ್ರೇಶಪ್ಪ ರು. ಬಸೇಗಣ್ಣಿ, ಶ್ರೀಮತಿ ಶಶಿಕಲಾ ಕೋಂ. ಪರಮೇಶ ಲಮಾಣಿ , ಶ್ರೀಮತಿ ರಾಜೇಶ್ವರಿ ಕೋಂ. ಯಲ್ಲಪ್ಪ ಕಲ್ಲೇರ , ಶ್ರೀಮತಿ ಸುಮಂಗಲಾ ರವೀಂದ್ರ ಪಟ್ಟಣಶೆಟ್ಟಿ, ಅಬ್ದುಲಮುನಾಫ್ ಬಾ. ಎಲಿಗಾರ, ಶ್ರೀಮತಿ ಗೌರವ್ವ ಕೋಂ. ಭೀಮಪ್ಪ ಶೇತಸನದಿ ಅವರು ಆಯ್ಕೆಯಾಗಿದ್ದಾರೆ.
ಹಣಕಾಸು ಮತ್ತು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸಮಿತಿ ಅಧ್ಯಕ್ಷರಾಗಿ ಎಸ್.ಕೆ.ಕರಿಯಣ್ಣನವರ ಹಾಗೂ ಸದಸ್ಯರಾಗಿ ಮಾಲತೇಶ ನಿಂಗಪ್ಪ ಸೊಪ್ಪಿನ, ನೀಲಪ್ಪ ಮಲ್ಲಪ್ಪ ಈಟೇರ, ಪ್ರಕಾಶ ಬಸಪ್ಪ ಬನ್ನಿಕೋಡ, ಶಿವರಾಜ ಡಿ. ಹರಿಜನ, ಶ್ರೀಮತಿ ಮಹದೇವಕ್ಕ ಹೊ. ಗೋಪಾಕ್ಕಳಿ, ಶ್ರೀಮತಿ ಗದಿಗೆವ್ವ ಗುಡ್ಡಪ್ಪ ದೇಸಾಯಿ ಅವರು ಆಯ್ಕೆಯಾಗಿದ್ದಾರೆ.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮಾರುತಿ ರಾಮಪ್ಪ ರಾಠೋಡ ಹಾಗೂ ಸದಸ್ಯರಾಗಿ ಶ್ರೀಮತಿ ಮಂಗಳಗೌರಿ ಅರುಣುಕುಮಾರ ಎಂ.ಎಂ.ಪಿ, ಶಿವಾನಂದ ವಿ. ಕನ್ನಪ್ಪಳವರ, ಶ್ರೀಮತಿ ಮುಮ್ತಜಬಿ ಮೌ. ತಡಸ, ಶ್ರೀ ವಿರುಪಾಕ್ಷಪ್ಪ ಕೊಟ್ರಪ್ಪ ಕಡ್ಲಿ, ಶ್ರೀಮತಿ ಸುಮಿತ್ರಾ ಬ. ಪಾಟೀಲ ಹಾಗೂ ರಾಘವೇಂದ್ರ ಮ. ತಹಶೀಲ್ದಾರ ಅವರು ಆಯ್ಕೆಯಾಗಿದ್ದಾರೆ.
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರಮೇಶ ಬ. ದುಗ್ಗತ್ತಿ ಹಾಗೂ ಸದಸ್ಯರಾಗಿ ಏಕನಾಥ ಭೀಮರೆಡ್ಡಿ ಭಾನುವಳ್ಳಿ, ಬಸನಗೌಡ ಹ. ದೇಸಾಯಿ, ಟಾಕನಗೌಡ ಪಾಟೀಲ, ಶ್ರೀಮತಿ ಗಿರಿಜವ್ವ ಹ. ಬ್ಯಾಲದಹಳ್ಳಿ, ಸಿದ್ಧರಾಜ ಮ. ಕಲಕೋಟಿ ಹಾಗೂ ಶಿವರಾಜ ಹ. ಅಮರಾಪೂರ ಅವರು ಆಯ್ಕೆಯಾಗಿದ್ದಾರೆ.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶ್ರೀಮತಿ ನೀಲವ್ವ ನಾಗಪ್ಪ ಚವ್ಹಾಣ ಹಾಗೂ ಸದಸ್ಯರಾಗಿ ಶ್ರೀಮತಿ ಲಕ್ಷ್ಮವ್ವ ಮಾರುತಿ ಗೊರವರ, ಶ್ರೀಮತಿ ಶೋಭಾ ಚಂದ್ರಶೇಖರ ಗಂಜಿಗಟ್ಟಿ, ಶ್ರೀಮತಿ ಅನುಸೂಯಾ ಉರ್ಫ ಲಲಿತಾ ಶಿ. ಕುಳೇನೂರು, ಶ್ರೀಮತಿ ಬಿ.ಎಮ್. ಪಠಾಣ, ಸಿದ್ದರಾಜ ಮ. ಕಲಕೋಟಿ ಹಾಗೂ ಶ್ರೀಮತಿ ಸಹನಾ ಶ್ರೀಧರ ದೊಡ್ಡಮನಿ ಅವರು ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಗಳಾಗಿ ಜಿ.ಪಂ.ಉಪಕಾರ್ಯದರ್ಶಿ ಜಿ.ಗೋವಿಂದಸ್ವಾಮಿ, ಡಿ.ಆರ್.ಡಿ.ಎ ವಿಭಾಗದ ಯೋಜನಾಧಿಕಾರಿ ಎ.ಟಿ.ಜಯಕುಮಾರ, ಮುಖ್ಯ ಯೋಜನಾಧಿಕಾರಿ ವಿಶ್ವನಾಥ ಮುತ್ತಜ್ಜಿ, ಸಹಾಯಕ ಕಾರ್ಯದರ್ಶಿ ಜಾಫರ ಸುತಾರ್, ಸಹಾಯಕ ಯೋಜನಾಧಿಕಾರಿ ಧರ್ಮರ ಕೃಷ್ಣಪ್ಪ ಕಾರ್ಯ ನಿರ್ವಹಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಉಪಾಧ್ಯಕ್ಷೆ ಶ್ರೀಮತಿ ದೀಪಾ ಅತ್ತಿಗೇರಿ, ಜಿ.ಪಂ.ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಶ್ರೀಮತಿ ಶಿಲ್ಪಾ ನಾಗ್, ಉಪಕಾರ್ಯದರ್ಶಿ ಜಿ.ಗೋವಿಂದಸ್ವಾಮಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ