ಚೇಳೂರು.
ಏಡ್ಸ್‍ತಂಹ ಮಾರಕ ಕಾಯಿಲೆ ಬಂತು ಎಂದು ಹೆದರುವುದಕಿಂತ ಅದು ಬರದಾಗೆ ಮುನ್ನಚ್ಚರಿಕೆ ವಹಿಸಿಕೊಂಡರೆ ಉತ್ತಮವಾದ ಆರೋಗ್ಯದ ಜೊತೆಗೆ ಜೀವನವನ್ನು ಸಹ ನೆಡೆಸಬಹುದು ಎಂದು ಚೇಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪೂಜಾ ರಾಯ್ಕರ್ ಹೇಳಿದರು
ಇವರು ಚೇಳೂರಿನ ಎಪಿಎಂಸಿ ಅವರಣದಲ್ಲಿ ಕುಟುಂಬ ಕಲ್ಯಾಣ ಇಲಾಖೆ.ಚೇಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಮುಗಳಿಯ ಶ್ರೀ ಮಲ್ಲಿಕಾರ್ಜನ ಜನಪದ ಕಲಾ ತಂಡದಿಂದ ನೆಡೆದ ಆರೋಗ್ಯ ಮತ್ತು ಏಡ್ಸ್ ಕುರಿತು ಅರಿವಿನ ಬೀದಿನಾಟಕದ ಕಾರ್ಯಕ್ರಮದಲಿ ಮಾತನಾಡುತ್ತ ಈ ಏಡ್ಸ್ ಕಾಯಿಲೆ 1981 ರಲ್ಲಿ ಅಮೇರಿಕಾದಲ್ಲಿ ಪತ್ತೆಯಾಗಿ ತದನಂತರ ವಿಶ್ವದಾದ್ಯಂತ ಕಾಡ್ಗಿಚ್ಚಿನಂತೆ ಹಾರಡಿತು.
ಹೆಚ್‍ಐವಿ ಎಂಬ ವೈರಸ್‍ಗಳೇ ಏಡ್ಸ್‍ಗೆ ಕಾರಣವಾಗಿದೆ. ಇದು ರಕ್ತ.ವೀರ್ಯಯೋನಿ.ದೇಹದ್ರವ.ಸೋಂಕು ಇರುವ ರೋಗಿಯ ದೇಹ ಹೊಕ್ಕು ಬಂದಿರುವ ಸೂಜಿ ಇಂದು ಹಾಗೂ ಇನ್ನೂ ಅನೇಕ ಸಂಪರ್ಕದಿಂದ ಈ ಏಡ್ಸ್ ಹಾರಡುತ್ತಾದೆ. ಇದರ ಅರಿವಿನ ಬಗ್ಗೆ ಸರ್ಕಾರ ಅನೇಕ ರೀತಿಯ ಕಾರ್ಯಕ್ರಮಗಳನ್ನು ಇಲಾಖೆಯವತಿಯಿಂದ ನೆಡೆಸುತ್ತಿದೆ. ಇದರಿಂದ ಸಾರ್ವಜನಿಕರು ಜಾಗೃತಿಗೊಂಡು ಏಡ್ಸ್ ಅತಂಹ ಕಾಯಿಲೆ ಬರದಾಗೆ ದೂರವಿರಿ.
ಈಗ ವಿಜ್ಞಾನಿಗಳು ಸಹ ಹೆಚ್‍ಐವಿ ಸೋಂಕನ್ನು ಬಗ್ಗೆ ಅರಿತುಕೊಂಡಿದ್ದಾರೆ. ಸೋಂಕು ತಗಲದಂತಹ ರಕ್ಷಾಣ ಮಾರ್ಗೋಪಾಯಗಳನ್ನು ಸಹ ಸೂಚಿಸಿದ್ದಾರೆ.ಸೋಂಕು ತಗಲಿರುವ ತಾಯಿ ಹೆರುವ ಮಗುವಿಗೆ ಸೋಂಕು ಆಂಟದಂತೆ ನಿರ್ಭಂದಿಸುವ ಔಷಧಿಗಳು ಸಹ ಲಭಿಸಿದೆ. ಸೋಂಕು ತಗಲಿರುವ ವ್ಯಕ್ತಿಯ ಯಾತನೆಯನ್ನು ಕಡಿಮೆ ಮಾಡಿ ಬದುಕನ್ನು ದೀರ್ಘಗೊಳಿಸುವ ಔಷದಿಗಳೂ ಸಹ ಲಭ್ಯವಾಗಿದೆ. ಏಡ್ಸ್ ಇರುವ ರೋಗಿಗಳನ್ನು ದೂರವಿಡದೆ.ಅವರೊಂದಿಗೆ ಯಾವ ತಾರತಮ್ಯ ಇಲ್ಲದೆ ಬೇರೆಯುವುದು. ಅವರ ಜೊತೆ ಮನಬಿಚ್ಚಿ ಮಾತನಾಡುವುದು ಹೀಗೆ ಅನೇಕ ರೀತಿಯ ಭಾವನೆಯಿಂದ ಬೆರೆಯ ಬೇಕಾಗಿದೆ ಹಾಗೂ ಹೆಚ್‍ಐವಿ ಅತಂಹ ಕಾಯಿಲೆಯ ನಿವಾರಣೆಯಲ್ಲಿ ಕೆಲವು ಯುವಕರ ಹಾಗೂ ಮಹಿಳೆಯರ ಪಾತ್ರವುಸಹ ಅತಿಮುಖ್ಯವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿಮಲ್ಲಿಕಾರ್ಜನ ಜನಪದ ಕಲಾ ತಂಡದ ಗುರುನಾಥ್‍ಹುಬಳ್ಳಿ.ಬಸವರಾಜು ಹಾಗೂ ತಂಡದವರು, ಆರೋಗ್ಯ ಇಲಾಖೆಯ ಪ್ರಭಾಕರ್.ಬಸವರಾಜು.ಪುಟ್ಟಯ್ಯ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
