ಬಳ್ಳಾರಿ
ಜಿಲ್ಲೆಯಲ್ಲಿರುವ ಲಾಡ್ಜ್, ಹೋಟಲ್‍ಗಳಲ್ಲಿ ತಂಗಿ ಚುನಾವಣಾ ಅಕ್ರಮ ಚಟುವಟಿಕೆಗಳನ್ನು ನಡೆಸಿದರೇ ಮತ್ತು ಚುನಾವಣಾ ಪ್ರಕ್ರಿಯೆಗೆ ತೊಂದರೆ ಉಂಟುಮಾಡಲು ಪ್ರಯತ್ನಿಸಿದರೇ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಹೇಳಿದರು.
ಈಗಾಗಲೇ ಈ ಕುರಿತು ಲಾಡ್ಜ್ ಮತ್ತು ಹೋಟಲ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಒಂದು ವೇಳೆ ಅದನ್ನು ಮೀರಿ ಲಾಡ್ಜ್ ಮತ್ತು ಹೋಟೆಲ್‍ಗಳಲ್ಲಿದ್ದುಕೊಂಡು ಚುನಾವಣಾ ಅಕ್ರಮ ಚಟುವಟಿಕೆಗಳನ್ನು ನಡೆಸಿದರೇ ಕ್ರಮಕೈಗೊಳ್ಳಲಾಗುವುದು ಎಂದರು.
ಈ ರೀತಿ ತಪಾಸಣೆಯನ್ನು ಚುನಾವಣೆಗೆ ನಿಯೋಜಿತವಾದ ತಂಡಗಳು ನಡೆಸಲಿವೆ. ಜಿಲ್ಲೆಯಲ್ಲಿ ಮುಕ್ತ, ಶಾಂತಿಯುತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಸಕಲ ಕ್ರಮಗಳನ್ನು ಜಿಲ್ಲಾ ಚುನಾವಣಾ ಆಯೋಗದಿಂದ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಪೊಲೀಸ್ ವೀಕ್ಷಕ ಶರತ್ ನರ್ವಾಣೆ, ಜಿಪಂ ಸಿಇಒ ನಿತೀಶ್, ಪ್ರೊಫೆಷನರಿ ಐಪಿಎಸ್ ಅಧಿಕಾರಿಗಳು ಇದ್ದರು.