ಕಳಪೆ ಬೀಜ ಮಾರಾಟ ಮಾಡಿದರೆ ಕ್ರಮ: ತಹಸೀಲ್ದಾರ್ ಎಚ್ಚರಿಕೆ

ಹಿರೇಕೆರೂರು

      ಕೃಷಿ ಪರಿಕರ ಮಾರಾಟಗಾರರು ಸರ್ಕಾರದ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಬೇಕು ರೈತರಿಗೆ ಮೆಕ್ಕೆಜೋಳದ ಬೀಜಗಳನ್ನು ಬಿಡಿಯಾಗಿ ಮಾರಾಟ ಮಾಡಬಾರದು.ಬಿಡಿಯಾಗಿ ಮಾರಾಟ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.ಯಾವೂದೇ ಕಾರಣಕ್ಕು ಕಳಪೆ ಬೀಜ ಮಾರಾಟ ಮಾಡಬಾರದು.ಗುಣಮಟ್ಟದ ಬೀಜ ಮಾರಾಟ ಮಾಡಬೇಕು ಎಂದು ತಹಸೀಲ್ದಾರ್ ಆರ್.ಎಚ್.ಭಾಗವಾನ್ ತಿಳಿಸಿದರು.

      ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ನಡೆದ ಕೃಷಿ ಪರಿಕರ ಮಾರಾಟಗಾರರಿಗೆ ಪೂರ್ವ ಮುಂಗಾರು ಹಂಗಾಮು ತರಬೇತಿ ಕಾರ್ಯಾಗಾರಾ ಹಾಗೂ ಬೀಜ ಅಧಿನಿಯಮ ,ರಸಗೊಬ್ಬರ ನಿಯಂತ್ರಣ ಕಾಯ್ದೆ ಮತ್ತು ಕೀಟ ನಾಶಕ ಕಾಯ್ದೆ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

     ಕೃಷಿ ಪರಿಕರ ಮಾರಾಟಗಾರರ ಸಂಘದಿಂದ ಕೋವಿಡ್-19 ಮುಖ್ಯಮಂತ್ರಿ ಪರಿಹಾರ ನಿಧಿಗೆ 1,25,000 ರೂ ಮೊತ್ತದ ಚಕ್ಕ್ ನ್ನು ತಹಸೀಲ್ದಾರ್ ಮೂಲಕ ನೀಡಿದರು.ಬೆಳಗಾವಿ ಜಾಗೃತ ಕೋಶದ ಉಪ ಕೃಷಿ ನಿದೇಶಕ ಡಿ.ಎಮ್.ಬಸವರಾಜ, ಉಪ ಕೃಷಿ ನಿದೇಶಕಿ ಸ್ಪೂರ್ತಿ ಜಿ.ಎಸ್, ಪ್ರಾಣೇಶ, ಮಂಜುನಾಥ, ಸುನಿಲ್ ನಾಯಕ್, ಸವಿತಾ ಚಕ್ರಸಾಲಿ, ಮಾರುತಿ ಅಂಗರಗಟ್ಟಿ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link