ಸಂಚಾರಿ ನಿಯಮ ಪಾಲಿಸಲು ಆಟೋ ಚಾಲಕರಿಗೆ ಸೂಚನೆ

ಮಧುಗಿರಿ

     ಆಟೋ ಚಾಲಕರು ಸಾರಿಗೆ ನಿಯಮಗಳನ್ನು ಪಾಲಿಸಿ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವಂತೆ ಡಿವೈಎಸ್‍ಪಿ ಎಂ. ಪ್ರವೀಣ್ ಕರೆ ನೀಡಿದರು.

     ಪಟ್ಟಣದ ತಮ್ಮ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ಆಟೋ ಚಾಲಕರ ಮತ್ತು ಮಾಲೀಕರ ಕುಂದುಕೊರತೆಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚಾಲಕರು ಸರಕಾರ ನಿಗಧಿಪಡಿಸಿರುವ ಕಾನೂನು ಕ್ರಮಗಳನ್ನು ಪಾಲಿಸಬೇಕು. ಆಟೋ ಚಾಲನೆ ಮಾಡುವಾಗ ಚಾಲಕರು ಸಮವಸ್ತ್ರ ಮತ್ತು ಆಟೋಗೆ ಸಂಬಂಧಪಟ್ಟ ಮೂಲ ದಾಖಲಾತಿಗಳನ್ನು ಕಡ್ಡಾಯವಾಗಿ ತಮ್ಮ ಜೊತೆಯಲ್ಲಿಯೇ ಇಟ್ಟುಕೊಳ್ಳಬೇಕು ಸಂಭಂಧಪಟ್ಟವರು ಕೇಳಿದಾಗ ಮಾಹಿತಿ ನೀಡಬೇಕು.

     ನಿಗಧಿತ ಪ್ರಮಾಣದಲ್ಲಿಯೇ ಪ್ರಯಾಣಿಕರಿಗೆ ಸೇವೆಯನ್ನು ಒದಗಿಸಬೇಕು. ಹೆಚ್ಚಾಗಿ ಪ್ರಯಾಣಿಕರು ಆಟೋದಲ್ಲಿದ್ದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡು ಚಾಲಕ ಅಥವಾ ಮಾಲೀಕನಿಗೆ ದಂಡ ವಿಧಿಸಲಾಗುವುದು. ನಿಮ್ಮ ಸುರಕ್ಷತೆಯ ಜೊತೆಯಲ್ಲಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಹೆಚ್ಚು ಗಮನಹರಿಸಿ ಜವಾಬ್ದಾರಿಯಿಂದ ಆಟೋ ಚಾಲನೆ ಮಾಡಬೇಕು.

      ಚಾಲಕರು ಕೆಟ್ಟ ಚಟಗಳಿಗೆ ಒಳಗಾಗದೇ ತಾವುಗಳು ದುಡಿದ ಹಣವನ್ನು ಒಳ್ಳೆಯ ಕೆಲಸ ಕಾರ್ಯಗಳಿಗೆ ಬಳಸಿ. ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲಾರೂ ಕೈ ಜೋಡಿಸಬೇಕಾಗಿದೆ. ಚಾಲನ ಪರವಾನಿಗೆ ಇಲ್ಲದವರು ಸ್ಥಳದಲ್ಲಿಯೇ ತಮ್ಮ ಹೆಸರುಗಳನ್ನು ನೊಂದಾಯಿಸಿ ಅಗತ್ಯ ದಾಖಲೆಗಳನ್ನು ನೀಡಿ ಸರಕಾರಿ ಶುಲ್ಕವನ್ನು ಪಾವತಿಸಬೇಕಾಗಿದೆ. ಈ ಬಗ್ಗೆ ಸಂಭಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟೂ ಬೇಗಾ ಚಾಲನ ಪರವಾನಿಗೆ ದೊರೆಕಿಸಿ ಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

      ಈ ಸಭೆಯಲ್ಲಿ ಎಆರ್‍ಟಿಓ ಇಲಾಖೆಯ ಪ್ರಸನ್ನಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಜಾನಕಿರಾಮ್, ಗಣೇಶ್ , ಶ್ರೀನಿವಾಸ್ , ರಾಮಕೃಷ್ಣ ಹಾಗೂ ಆಟೋ ಚಾಲಕರು ಮತ್ತು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಚಾಲಕರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link