ಹಾವೇರಿ 
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಫಾರ್ಮಸಿಸ್ಟ್ ಅವರ ವೇತನ ಹಾಗೂ ಇತರ ಬೇಡಿಕೆಗಳ ಇಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿಸ್ಟ್ ಸಂಘದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಡಳಿತ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರು.
ಸುಮಾರು 3500 ಕ್ಕಿಂತ ಹೆಚ್ಚು ಫಾರ್ಮಸಿಸ್ಟ್‍ರು ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಮತ್ತು ರಾಜ್ಯದ ನೌಕರರ ವೇತನ ಹಾಗೂ ಇತರ ಭತ್ಯೆಗಳಲ್ಲಿ ವ್ಯಾತ್ಯಾಸವಿರುವುದನ್ನು ಸರಿ ಪಡಿಸಬೇಕಾಗಿದೆ. ಇಲಾಖೆಯಲ್ಲಿ ಕಾರ್ಯನಿರ್ವಹಣೆಗೆ ಜನಸಂಖ್ಯೆ ಹೆಚ್ಚಳದಿಂದ ಈ ಹುದ್ದೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕವಾಗಬೇಕಾಗಿದೆ.
ವಿದ್ಯಾರ್ಹತೆಗೆ ಅನುಗುಣವಾಗಿ ಬಡ್ತಿಗೆ ಅವಕಾಶ ಸಿಗುವಂತಾಗಬೇಕು.ಕೆಲಸ ಕಾರ್ಯನಿರ್ವಹಣೆಗಾಗಿ ಮೇಲುಸ್ತುವಾರಿವಹಿಸಲು ಫಾರ್ಮಸಿ ಅಧಿಕಾರಿಗಳನ್ನು ನೇಮಸಿ ಸಾರ್ವಜನಿಕರಿಗೆ ಅನುಕೂಲವಾಗಿಸಬೇಕು.1982 ರಿಂದ ಕಡಿಮೆ ವೇತನ ಹಾಗೂ ಭತ್ಯೆ ಪಡೆಯುವಂತಾಗಿದ್ದು,ಈ ನ್ಯಾಯಪೂರಕವಾಗಿ ಸರಿಪಡಿಸಬೇಕು .ಮಹಾರಾಷ್ಟದಲ್ಲಿರುವಂತೆ ಫಾರ್ಮಸಿಸ್ಟ್ ಹುದ್ದೆಯ ಪದನಾಮವನ್ನು ಫಾರ್ಮಸಿ ಅಧಿಕಾರಿ ಎಂದು ಬದಲಾವಣೆ ಮಾಡುವುದು ಸೇರಿದಂತೆ ಅನೇಕ ಬೇಡಿಕೆಗಳ ಇಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕೊಡಲೇ ಬೇಡಿಕೆ ಇಡೇರಿಸುವಂತಾಗಬೇಕು.ಇಲ್ಲವಾದರೆ ಹಲವು ಹಂತಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿಸ್ಟ್ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ ಪಾಟೀಲ.ಪ್ರ.ಕಾ ಆನಂದಗೌಡ ಎಚ್.ರಾಜ್ಯ ಪರಿಷತ್ ಸದಸ್ಯರಾದ ಎಂ ವೈ ಪಟೇಲ.ಉಪಾಧ್ಯಕ್ಷ ಪ್ರಕಾಶ ಮೋಟಗಿ.ಖಜಾಂಚಿ ರಾಜು ಗುರಪ್ಪನವರ.ಶಶಿಧರ ನಿರ್ವಾಣಿಮಠ.ವೀರುಪಾಕ್ಷ ಲಮಾಣಿ.ಗುರುರಾಜ ಶರಾಳಕರ.ಭಾರತಿ.ಪೂರ್ಣಿಮಾ ಸಂಘದ ಪದಾಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







