ಚಳ್ಳಕೆರೆ
ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಗತಿಯ ಜೊತೆಯಲ್ಲಿ ಸಾಮಾಜಿಕ ಕಳಕಳಿಯನ್ನು ಸಹ ಹೊಂದಿರಬೇಕಾಗುತ್ತದೆ. ಇಂದಿನ ಶಿಕ್ಷಣವೂ ಸಹ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಹೊಸ ದಿಕ್ಕನ್ನು ತೋರಿಸುವಲ್ಲಿ ಯಶಸ್ಸಿಯಾಗಿವೆ. ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕ್ರೀಡಾ, ಸಾಂಸ್ಕøತಿಕ, ಸೇವಾ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆಸುವ ಮೂಲಕ ಕಾಲೇಜುಗಳು ಪ್ರಗತಿದಾಯಕ ದಿಕ್ಕಿನತ್ತ ಸಾಗುತ್ತಿವೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಪ್ರೊ.ಕೆ.ಪ್ರಸಾದ್ ತಿಳಿಸಿದರು.
ಅವರು ಶನಿವಾರ ಇಲ್ಲಿನ ಬಾಪೂಜಿ ವಿದ್ಯಾಸಂಸ್ಥೆಯ ಬಾಪೂಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2018-19ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ, ರೆಡ್‍ಕ್ರಾಸ್ ಸಂಸ್ಥೆ, ಪರಂಪರಾಕೂಟ, ಸಾಂಸ್ಕøತಿಕ ಸಮಿತಿಗಳ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಳೆದ ಹಲವಾರು ವರ್ಷಗಳಿಂದ ಬಾಪೂಜಿ ವಿದ್ಯಾಸಂಸ್ಥೆಯ ಚಟುವಟಿಕೆಗಳನ್ನು ಗಮನಿಸಿದ್ದೇನೆ. ಖಾಸಗಿ ವಲಯದ ಕಾಲೇಜುಗಳಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆಯನ್ನು ನೀಡುತ್ತದೆ ಎಂಬ ಅಂಶ ಆಶಾದಾಯಕವಾಗಿದೆ. ಈ ವಿದ್ಯಾ ಸಂಸ್ಥೆ ಇನ್ನು ಎತ್ತರಕ್ಕೆ ಬೆಳೆಯಲಿ ಮತ್ತಷ್ಟು ವಿದ್ಯಾವಂತರನ್ನು ಸಮಾಜ ಮುಖಿಗೆ ತರುವಂತಾಗಲಿ ಎಂದು ಶುಭಹಾರೈಸುವುದಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಎಂ.ಜಗದೀಶ್, ಬಾಪೂಜಿ ವಿದ್ಯಾಸಂಸ್ಥೆ ಕಳೆದ ಸುಮಾರು 45 ವರ್ಷಗಳಿಂದ ನಿರಂತರವಾಗಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಪಿಯುಸಿ ಮತ್ತು ಪ್ರಥಮ ದರ್ಜೆ ಕಾಲೇಜುಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ನೆರವು ನೀಡುತ್ತಾ ಬಂದಿದೆ. ಬಾಪೂಜಿ ವಿದ್ಯಾಸಂಸ್ಥೆ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಬದುಕನ್ನು ನಿರೂಪಿಸಿಕೊಳ್ಳಲು ಸಮರ್ಥನಾಗಬೇಕು ಎಂಬ ಉದ್ದೇಶದಿಂದ ಆರ್ಥಿಕ ಲಾಭವಿಲ್ಲದೆ ಶಿಕ್ಷಣ ಸಂಸ್ಥೆ ಬಡ ವಿದ್ಯಾರ್ಥಿಗಳಿಗೆ ನೆರವಾಗುತ್ತಿದೆ ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಜಿ.ಬಾಲರೆಡ್ಡಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಚಳ್ಳಕೆರೆ ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಾಪೂಜಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಪರಿಣಾಮಕಾರಿಯಾಗಿದೆ ಕಾರ್ಯನಿರ್ವಹಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ಬಾಪೂಜಿ ಆರ್ಯುವೇದಿಕ್ ಕಾಲೇಜನ್ನೂ ಸಹ ಪ್ರಾರಂಭಿಸಿ ಉಚಿತ ಆರೋಗ್ಯ ಶಿಬಿರಗಳ ಮೂಲಕ ಜನರ ಆರೋಗ್ಯದತ್ತ ಗಮನ ನೀಡುತ್ತಿದೆ ಎಂದರು.
ವಿಜಯನಗರ ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ.ಚಂದ್ರಶೇಖರಶಾಸ್ತ್ರಿ ಉಪನ್ಯಾಸದಲ್ಲಿ ಇಂದಿನ ವಿದ್ಯಾಭ್ಯಾಸ ಕೇವಲ ವಿದ್ಯಾರ್ಥಿಗಳ ಲಾಭಕ್ಕಾಗಿ ಸದುಪಯೋಗವಾಗದೆ ಸಮಾಜದ ಎಲ್ಲಾ ವರ್ಗವದ ಹಿತವನ್ನು ಬಯಸುವ ಮನೋಭಾವನೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಿದೆ. ರಾಷ್ಟ್ರೀಯ ಸೇವಾ ಯೋಜನೆ ಶಿಬಿರ, ರೆಡ್‍ಕ್ರಾಸ್ ಯೋಜನೆಗಳು ವಿಶೇಷವಾಗಿ ಗ್ರಾಮೀಣ ಜನರ ವಿಶ್ವಾಸವನ್ನು ಗಟ್ಟಿಗೊಳಿಸುವಲ್ಲಿ ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ಕಾಲೇಜಿನ ಶಿಕ್ಷಣ ಅವಧಿಯನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕಿದೆ. ಜನರ ವಿಶ್ವಾಸವನ್ನು ಸಮಾಜದ ಹಿತವನ್ನು ಬಯಸುವ ಔದಾರ್ಯವನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.
ಸಾಂಸ್ಕತಿಕ ವಿಭಾಗಗಳ ಸಂಚಾಲಕ ಪ್ರೊ ಜಿ.ವಿ.ರಾಜಣ್ಣ ಮಾತನಾಡಿ, ಕಾಲೇಜಿನ ಹಲವಾರು ವಿಭಾಗದ ಚಟುವಟಿಕೆಗಳು ಕ್ರಿಯಾಶೀಲವಾಗಿರಲು ಪ್ರತಿವರ್ಷದಂತೆ ಈ ವರ್ಷವೂ ಸಹ ವಿವಿಧ ಸಮಿತಿಗಳ ಆಯ್ಕೆ ಮತ್ತು ಉದ್ಘಾಟನೆ ಯಶಸ್ಸಿಯಾಗಿ ನಡೆದಿದೆ. ಪ್ರಸ್ತತ ವರ್ಷದ ವಿವಿಧ ಚಟುವಟಿಕೆಗಳಿಗೆ ಇಂದು ಉತ್ತಮ ಚಾಲನೆ ದೊರಕಿದೆ. ಪ್ರತಿವರ್ಷವೂ ಸಹ ಬಾಪೂಜಿ ಪ್ರಥಮ ದರ್ಜೆ ಕಾಲೇಜು ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲಾ ವರ್ಗದ ಗೌರವವನ್ನು ಸಂಪಾದಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಓ.ಬಾಬುಕುಮಾರ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರೆಡ್ಡಿ, ಉಮೇಶ್, ಗ್ರಂಥಾಲಾಧಿಕಾರಿ ಜೆ.ತಿಪ್ಪೇಸ್ವಾಮಿ, ಚಂದ್ರಶೇಖರ್, ನಂದಿನಿ, ತಿಪ್ಪೇಸ್ವಾಮಿ, ಮುಜೀಬುಲ್ಲಾ, ರುದ್ರಮುನಿಯಪ್ಪ, ಮಹಲಿಂಗಪ್ಪ, ರಾಜೇಶ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ