ಹೊಸದುರ್ಗ:
ಸೂರ್ಯನಂತೆ ಬೆಳಕು ಚೆಲ್ಲುವವರು ವಿಧ್ಯಾರ್ಥಿಗಳು ಮತ್ತು ಶಿಸ್ತು, ಸಹನೆ, ತಾಳ್ಮೆ ಪ್ರತಿಯೊಬ್ಬ ವಿಧ್ಯಾರ್ಥಿಗಳಲ್ಲಿದ್ದರೆ ಆ ವ್ಯಕ್ತಿ ಉನ್ನತ ಮಟ್ಟಕ್ಕೆ ಹೋಗುತ್ತಾನೆ ಎಂದು ಪ್ರೋ. ಹೆಚ್.ಎನ್. ಬಸವರಾಜು ಹೇಳಿದರು.
ಪಟ್ಟನದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಸಾಂಸ್ಕøತಿಕ ಚಟುವಟಿಕೆಗಳ ಸಮಿತಿ, ಕ್ರೀಡಾ, ಎನ್ ಎಸ್.ಎಸ್ ಯುವರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಸಮಿತಿಗಳ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉಧ್ಗಾಟಿಸಿ ಮಾತನಾಡಿದರು.
ಈ ದೇಶವು ದಕ್ಷ ಆಡಳಿತಗಾರ, ಶಿಸ್ತಿನ ಸಿಪಾಯಿಗಳನ್ನು ಬೆಳೆಸಲು ಬಯಸುತ್ತದೆ, ತಂದೆ ತಾಯಿಯ ಋಣವನ್ನು ತೀರಿಸಲು ಆಗದು, ತಾಯಿಯ ತುತ್ತನ್ನು ಉಣ್ಣಾದವರು ಯಾರು ಇಲ್ಲ, ನಿಮ್ಮನ್ನು ಓದಿಸಲು ಪ್ರತಿದಿನ ತ್ಯಾಗ ಮಾಡುತ್ತಿದ್ದಾರೆ. ಅವರ ಪ್ರೀತಿಗೆ, ಅವರ ತ್ಯಾಗಕ್ಕೆ ಮೋಸ ಮಾಡಬೇಡಿ. ನಿಮ್ಮ ಕಾಲೇಜಿನ ಪ್ರಾಧ್ಯಪಕರಿಗೆ ಶಿಕ್ಷಣದ ಬಗ್ಗೆ ಪ್ರಶ್ನೆ ಮಾಡುವ ಮನೋಭಾವ ರೂಡಿಸಿಕೊಳ್ಳಿ. ವಿಧ್ಯಾರ್ಥಿಗಳೇ ದೇವರೆಂದು ತಿಳಿದು ನಾವು ಪಾಠವನ್ನು ಮಾಡುತ್ತಿದ್ದೇವೆ. ನಾವು ಮಾಡಿರುವ ಪಾಠವನ್ನು ಕೇಳಿ ಸದ್ವಿನಿಯೋಗ ಮಾಡಿಕೊಳ್ಳಿ ಎಂದರು.
ನೀವು ವ್ಯಾಸಂಗಕ್ಕೆ ಕಾಲೇಜಿಗೆ ಬರಬೇಕಾದರೆ ವಿಧ್ಯಾಥಿಗಳಾಗಿ ಬರುತ್ತೀರಿ, ವ್ಯಾಸಂಗ ಮುಗಿಸಿ ಹೋಗಬೇಕಾದರೆ ಶಿಕ್ಷಣ ಕಲೆತು ಪ್ರಸಾದ ಆಗಿ ಹೋಗಿ ಆಗ ನೀವು ಕಲೆತಿದ್ದಕ್ಕೆ ಸಾರ್ಥಕತೆ ಸಿಗುತ್ತದೆ. ಶಿಕ್ಷಣವು ವ್ಯಕ್ತಿಯ ವ್ಯಕ್ತಿತ್ವವನ್ನು ಬದಲಾವಣೆ ಮಾಡುತ್ತದೆ. ಉತ್ತಮ ಶಿಕ್ಷಣ ಪಡೆಯಲು ನಿಮ್ಮ ಭವಿಷ್ಯ ರೂಪಿಸಲು ಹೊಸದುರ್ಗದಂತಹ ಶಿಕ್ಷಣ ಸಂಸ್ಥೆಗೆ ನಿಮ್ಮ ತಂದೆ ತಾಯಿ ಬಿಟ್ಟಿದ್ದಾರೆ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ ಎಂದು ಹೇಳಿದರು.
ಪ್ರೋ ಎಂ.ಓ ಮಮತೇಶ ಮಾತನಾಡಿ ಹಣವೇ ಮುಖ್ಯ ಆಗಿರುವ ಕಾಲದಲ್ಲಿ ಜನಗಳ ಪಾತ್ರ ಏನು ಅಂತ ಹುಡಕಬೇಕಿದೆ. ಶಿಕ್ಷಣ ಬದುಕನ್ನು ಕಟ್ಟಿಕೊಡುತ್ತದೆ. ಹಸಿವು ಮತ್ತು ಬಡತನವನ್ನು ಅನುಭವಿಸಿದರೆ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳುತ್ತಾನೆ. ಅನುಭವಗಳೇ ನಿಮ್ಮ ಬದುಕನ್ನು ಗಟ್ಟಿ ಗೊಳಿಸುತ್ತವೆ. ಭಯ, ಜಂಭ, ಅಹಂಕಾರ, ನಾನು, ನನ್ನಿಂದಲೇ ಎಂಬ ವೈರಸ್ ಗಳು ನಿಮ್ಮ ಮನಸ್ಸಿಗೆ ಲಗ್ಗೆ ಹಾಕುತ್ತಿರುತ್ತವೆ ಅವನ್ನೆಲ್ಲಾ ತೊರೆದು ನಿಂತರೆ ನಿಮಗೆ ಅರಿವಿಲ್ಲದೆ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಲು ಸಾಧ್ಯ ಎಂದರು.
ಈ ವೇಳೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಎಸ್.ಬಿ. ಮಂಜುನಾಥ, ಜಾನಪದ ಕಲಾವಿದ ಯುಗಧರ್ಮ ರಾಮಣ್ಣ, ಪ್ರಾಧ್ಯಪಕ ಜಯಣ್ಣ, ರಾಮಚಂದ್ರ, ಕವಿತಾ, ಮೋಹನ್, ಚಿರಂಜೀವಿ ಹಾಗೂ ವಿವಿಧ ಚಟುವಟಿಕೆಗಳ ಸಮಿತಿಯ ಸಂಚಾಲಕರು, ಸಮಸ್ತ ಭೋಧಕ ಭೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿ ವಿಧ್ಯಾರ್ಥಿನಿಯರು ಪಾಲ್ಗೋಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
