ವಿದ್ಯಾರ್ಥಿಗಳಗೆ ಪ್ರಜಾಪ್ರಭುತ್ವ ಮೌಲ್ಯಗಳ ಅರಿವು ಅಗತ್ಯ

ಚಿತ್ರದುರ್ಗ;

    ದೇಶದ ಮುಂದಿನ ಪ್ರಜೆಗಳಾಗುವ ನೀವುಗಳಿಗೆ ರಾಜಕೀಯ,ಸಂವಿಧಾನ ಕಾನೂನು ಯಾವ ರೀತಿ ರಚನೆಯಾಗುತ್ತದೆ ಎಂದು ತಿಳಿಸುವ ಸಲುವಾಗಿ ಸರ್ಕಾರ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಯುವ ಸಂಸತ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಡಿಡಿಪಿಐ ಕೆ.ರವಿಶಂಕರ ರೆಡ್ಡಿ ತಿಳಿಸಿದರು.

   ಬೆಂಗಳೂರಿನ ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಹಾಗೂ ಡಿಎಸ್ ಇಆರ್ ಟಿ ಆಶ್ರಯದಲ್ಲಿ ಜಿಪಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಡದ ಯುವ ಸಂಸತ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

   ಪ್ರಜಾಪ್ರಭುತ್ವದ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಇದೊಂದು ಉತ್ತಮ ಕಾರ್ಯಕ್ರಮ ಇದಾಗಿದೆ, ಮಕ್ಕಳು ಬರೀ ಪಠ್ಯಕ್ಕೆ ಮಾತ್ರವೇ ಮೀಸಲಾಗದೇ ಈ ರೀತಿಯಾದ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮತ್ತಷ್ಟು ವಿಷಯಗಳನ್ನು ತಿಳಿಯಲು ಸಾಧ್ಯವಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಶಿಕ್ಷಣ ಇಲಾಖೆಯೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಈಗಾಗಲೇ ಶಾಲಾ ಹಂತ ತಾಲ್ಲೂಕು ಹಂತವನ್ನು ದಾಟಿ ಈಗ ಜಿಲ್ಲಾ ಹಂತಕ್ಕೆ ತಲುಪಲಾಗಿದೆ,ಇಲ್ಲಿಯೂ ಸಹಾ ಗೆಲವನ್ನು ಸಾಧಿಸುವುದರ ಮೂಲಕ ರಾಜ್ಯ ಮಟ್ಟದಲ್ಲಿ ಜಿಲ್ಲೆಯ ಹೆಸರನ್ನು ಎತ್ತಿ ಹಿಡಿಯುವಂತೆ ಮಕ್ಕಳಿಗೆ ಕರೆ ನೀಡಿದರು.

   ಶಿಕ್ಷಣವನ್ನು ಪಡೆಯುವುದರ ಮೂಲಕ ನಮ್ಮಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಕೊಳ್ಳಬಹುದಾಗಿದೆ,ಇದರಿಂದ ಯಾವುದೆ ಮಗು ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರವಹಿಸಬೇಕಿದೆ, ಈ ಸ್ಪರ್ಧೆಯಲ್ಲಿ ಆಡಳಿತ ಪಕ್ಷದವರು ತಪ್ಪು ಮಾಡಿದಾಗ ಅದನ್ನು ಎಚ್ಚರ ಮಾಡುವ ಕೆಲಸವನ್ನು ವಿರೋಧ ಪಕ್ಷದವರು ಮಾಡಬೇಕಿದೆ, ಆಗ ಮಾತ್ರ ಸರ್ಕಾರ ಸುಸುತ್ರವಾಗಿ ನಡೆಯಲು ಸಾಧ್ಯವಿದೆ. ಇದರ ಬಗ್ಗೆ ಮಕ್ಕಳು ಆಲೋಚನೆ ಮಾಡಬೇಕಿದೆ, ರಾಜಕೀಯ ಸಂವಿಧಾನ ಎಂದರೆ ಅದರ ಅರ್ಥ ಪರಿಪೂರ್ಣವಾಗಿ ತಿಳಿಯಬೇಕಿದೆ ಎಂದರು.

    ಶಿಕ್ಷಣ ಇಲಾಖೆಯ ನಾಗಭೂಷಣ ಮಾತನಾಡಿ, ಮಕ್ಕಳಿಗೆ ರಾಜಕೀಯ ಪ್ರಜಾಪ್ರಭುತ್ವ ಸಂವಿಧಾನ ಇದರ ಬಗ್ಗೆ ತಿಳಿಸುವಂತೆ ಕಾರ್ಯಕ್ರಮವೇ ಈ ಸಂಸತ್ ಸ್ಪರ್ದೆಯಾಗಿದೆ ಇದರ ಬಗ್ಗೆ ಈಗಿನಿಂದಲೇ ತಿಳಿಸಿದರೆ ಮುಂದಿನ ದಿನದಲ್ಲಿ ನೀವುಗಳು ಏನಾದರೂ ಚುನಾಯಿತ ಪ್ರತಿನಿಧಿಗಳಾದರೆ ಅನುಕೂಲವಾಗಲಿದೆ ಎಂದರು.

   ಜಿಲ್ಲೆಯ ಎಲ್ಲ ತಾಲೂಕುಗಳ 20ಕ್ಕೂಹೆಚ್ಚು ವಿವಿಧ ಶಾಲೆಗಳಿಂದ ಆಗಮಿಸಿದ್ದ 60 ವಿದ್ಯಾರ್ಥಿಗಳು ಸಂಸದೀಯ ಪಟುಗಳಾಗಿ ಹಾಗೂ 20 ವಿದ್ಯಾರ್ಥಿಗಳು ಪ್ರೇಕ್ಷಕರಾಗಿ ಭಾಗವಹಿಸಿದ್ದರು. ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap