ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಕಾ.ದೇವದಾಸ್ ಅವರಿಂದ ಕೊರ್ಲಗುಂದಿಯಲ್ಲಿ ಪ್ರಚಾರ

 ಬಳ್ಳಾರಿ

        ಲೋಕಸಭಾ ಕ್ಷೇತ್ರದ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಯಾದ ಕಾ.ದೇವದಾಸ್ ರವರು ಕೊರ್ಲಗುಂದಿಯಲ್ಲಿ ರೈತರ ಮಧ್ಯೆ ಚುನಾವಣಾ ಪ್ರಚಾರ ನಡೆಸಿದರು. ಕೊರ್ಲಗುಂದಿಯ ಬಸ್ ನಿಲ್ದಾಣದ ಬಳಿ ಸೇರಿದ್ದ ಗ್ರಾಮಸ್ಥರು ಹಾಗೂ ಪಕ್ಷದ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದರು.

      “ನಮ್ಮ ರೈತ ಕೃಷಿ ಕಾರ್ಮಿಕ ಸಂಘಟನೆ ಹಾಗೂ ಎಸ್.ಯು.ಸಿ.ಐ (ಸಿ) ಪಕ್ಷವು ಕೊರ್ಲಗುಂದಿಯಲ್ಲಿ ಅನೇಕ ಹೋರಾಟಗಳನ್ನು ಸಂಘಟಿಸಿದೆ. ಅನಿಯಮಿತ ವಿದ್ಯುತ್ ವ್ಯತ್ಯಯದ ವಿರುದ್ಧ, ಹತ್ತಿಗೆ ಬೆಂಬಲ ಬೆಲೆಗಾಗಿ ಆಗ್ರಹಿಸಿ, ಕುಡಿಯುವ ನೀರಿಗಾಗಿ, ಹೆಚ್.ಎಲ್.ಸಿ. ಕಾಲುವೆಗೆ ನೀರು ಬಿಡಲು ಆಗ್ರಹಿಸಿ, ಕೊರ್ಲಗುಂದಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರ ಕೊರತೆಯನ್ನು ಪರಿಹರಿಸಲು ಆಗ್ರಹಿಸಿ ಎಸ್.ಯು.ಸಿ.ಐ ಕಮ್ಯೂನಿಸ್ಟ್ ಪಕ್ಷವು ಯಶಸ್ವಿ ಹೋರಟಗಳನ್ನು ಕಟ್ಟಿದೆ. ಈ ರೀತಿಯಾದ ಪ್ರಭಲ ಹೋರಾಟಗಳೇ ಎಲ್ಲಾ ಸಮಸ್ಯೆಗಳ ಪರಹಾರಕ್ಕೆ ಉಳಿದಿರುವ ಏಕಮಾತ್ರ ಮಾರ್ಗ” ಎಂದರು.

       ಮುಂದುವರೆದು “ಇಂದು ದುಡಿಯುವ ಜನರ, ಕಾರ್ಮಿಕರ ರಕ್ತ ಹೀರಿ ಕೊಬ್ಬಿದ ಬಂಡವಾಳಿಗರ ಸೇವಗಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಟೊಂಕ ಕಟ್ಟಿ ನಿಂತಿವೆ. ರೈತರಿಗೆ, ಜನಸಾಮಾನ್ಯರಿಗೆ ನೀರಿಲ್ಲದಿದ್ದರೂ ಜಿಂದಾಲ್ ಮತ್ತು ಇತರೆ ಕಂಪನಿಗಳಿಗೆ ಟಿ.ಬಿ. ಡ್ಯಾಮ್‍ನ ನೀರು ಮೀಸಲಿಡಲಾಗುತ್ತದೆ.

       ಸಾವಿರಾರು ಕೋಟಿ ಸಾಲ ತೆಗೆದುಕೊಂಡು ದೇಶ ಬಿಟ್ಟು ಓಡಿಹೋದ ವಿಜಯ್ ಮಲ್ಯ, ನೀರವ್ ಮೋದಿ ಅಂತಹ ಮೋಸಗಾರರನ್ನು ಕೇಂದ್ರದ ಬಿಜೆಪಿ ಸರ್ಕಾರ ಕಾಪಾಡುತ್ತಿದೆ. ಆದರೆ, ರೈತರಿಗೆ ಕನಿಷ್ಟ ಬೆಂಬಲ ಬೆಲೆ ನೀಡಲು, ಸಾಲ ಮನ್ನಾ ಮಾಡಲು ಮೀನಾಮೇಶ ಎಣಿಸುತ್ತಿದೆ. ಹಾಗಾಗಿ ಈ ಪಕ್ಷಗಳು ಜನಪರ ನೀತಿಗಳನ್ನು ತರುವುದಿಲ್ಲ ಎನ್ನುವುದು ಜನರಿಗೆ ಮನನವಾಗುತ್ತಿದೆ.

        ಹಣ-ಹೆಂಡದ ಕೊಳೆತ ರಾಜಕೀಯವನ್ನು ನಡೆಸುತ್ತಿರುವ ಈ ಎಲ್ಲಾ ಪಕ್ಷಗಳನ್ನು ಸೋಲಿಸಲು ಹಾಗೂ ಭಗತ್ ಸಿಂಗ್, ನೇತಾಜಿ ರವರ ಹೋರಾಟದ ರಾಜಕೀಯ ಮಾರ್ಗವನ್ನು ಹಿಡಿದಿರುವ ಎಸ್.ಯು.ಸಿ.ಐ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು” ಜನರಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಎಸ್.ಯು.ಸಿ.ಐ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಈ.ಹನುಮಂತಪ್ಪ, ಕಾರ್ಯಕರ್ತರಾದ ಗಾದಿಲಿಂಗಪ್ಪ, ಪಂಪಾಪತಿ, ಬಸಣ್ಣ ಇನ್ನಿರರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link