ತುಮಕೂರು
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ `ಅಮೃತ್’ ಯೋಜನೆಯಡಿ ಒಟ್ಟು 752.59 ಲಕ್ಷ ರೂ.ಮೊತ್ತದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಕೆಲವು ಕಾಮಗಾರಿಗಳಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಕೆಲವೊಂದು ಕಾಮಗಾರಿಗಳ ಬದಲಿಗೆ ಅದೇ ಮೊತ್ತವನ್ನು ಬಳಸಿಕೊಂಡು ಮತ್ತೊಂದು ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಬದಲಾದ ಕಾಮಗಾರಿಗಳು
- ನಗರದ ಕೋಡಿ ಬಸವೇಶ್ವರ ದೇವಾಲಯ ವೃತ್ತದಿಂದ ಹಿಡಿದು ಸ್ವಾತಂತ್ರೃ ಚೌಕ (ಚರ್ಚ್ ವೃತ್ತ)ದವರೆಗೆ 40 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಫುಟ್‍ಪಾತ್ ನಿರ್ಮಾಣ ಮತ್ತು ಎರಡೂ ಬದಿ ರೈಲಿಂಗ್ ಅಳವಡಿಕೆ ಕಾಮಗಾರಿ;
- ಗುಬ್ಬಿ ಗೇಟ್‍ನಲ್ಲಿ 80 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿ;
- ಬಟವಾಡಿ ವೃತ್ತದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿ;
- ಭದ್ರಮ್ಮ ಛತ್ರದ ವೃತ್ತದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿ;
- ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ 75 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿ- ಹೀಗೆ ಒಟ್ಟು 295 ಲಕ್ಷ ರೂ. ಮೊತ್ತದ ಒಟ್ಟು ಐದು ಕಾಮಗಾರಿಗಳನ್ನು ಕೈಗೊಳ್ಳಲು ಈ ಮೊದಲು ಉದ್ದೇಶಿಸಿದ್ದು, ಅವುಗಳನ್ನು ಈಗ ಕೈಬಿಡಲಾಗಿದೆ.
ಇದರ ಬದಲಿಗೆ
- ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ಮಾರುತಿ ನಗರದಿಂದ ಹಿಡಿದು ರಿಂಗ್ ರಸ್ತೆಯವರೆಗೂ 77.36 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಫುಟ್‍ಪಾತ್ ಅಭಿವೃದ್ಧಿ ಕಾಮಗಾರಿ;
- ಸರಸ್ವತಿಪುರಂ ಬಡಾವಣೆಯಲ್ಲಿ ದೇವರಾಜ ಅರಸ್ ರಸ್ತೆಯಲ್ಲಿ ವಿದ್ಯಾನಿಕೇತನ ಶಾಲೆಯವರೆಗೆ 90.43 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಫುಟ್‍ಪಾತ್ ಅಭಿವೃದ್ಧಿ ಕಾಮಗಾರಿ;
- ರಾಷ್ಟ್ರೀಯ ಹೆದ್ದಾರಿಯಿಂದ ಸಿದ್ಧಗಂಗಾ ಮಠದ ರಸ್ತೆಯಲ್ಲಿ ರೈಲ್ವೆ ಗೇಟ್‍ವರೆಗೆ 16.36 ಲಕ್ಷ ರೂ. ವೆಚ್ಚದಲ್ಲಿ ಫುಟ್‍ಪಾತ್ ಅಭಿವೃದ್ಧಿ ಕಾಮಗಾರಿ – ಈ ರೀತಿ ಒಟ್ಟು ಮೂರು ಕಾಮಗಾರಿಗಳನ್ನು ಒಟ್ಟು 184.15 ಲಕ್ಷ ರೂ. ಅಂದಾಜುವೆಚ್ಚದಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ.
ಉಳಿತಾಯ ಮೊತ್ತದ ಕಾಮಗಾರಿ
`ಅಮೃತ್’ ಯೋಜನೆಯ ಅನುದಾನದಲ್ಲಿ ಮಂಜೂರಾದ ಕಾಮಗಾರಿಗಳಲ್ಲಿ ಉಳಿತಾಯವಾದ ಮೊತ್ತದಲ್ಲಿ 440.54 ಲಕ್ಷ ರೂ. ಮೊತ್ತದಲ್ಲಿ ಮಳೆ ನೀರಿನ ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲು ಹಾಗೂ 127.91 ಲಕ್ಷ ರೂ. ಮೊತ್ತದಲ್ಲಿ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ನಿರ್ಣಯಿಸಲಾಗಿದೆ.
- ನಗರದ ರಿಂಗ್ ರಸ್ತೆಯಲ್ಲಿರುವ ಎಸ್.ಟಿ.ಪಿ. (ಸಿವರೇಜ್ ಟ್ರೀಟ್‍ಮೆಂಟ್ ಪ್ಲಾಂಟ್)ನಿಂದ ಭೀಮಸಂದ್ರ ಕೆರೆಯವರೆಗೆ 152 ಲಕ್ಷ ರೂ. ವೆಚ್ಚದಲ್ಲಿ ಮಳೆನೀರಿನ ಚರಂಡಿ ನಿರ್ಮಾಣ;
- ಸೋಮೇಶ್ವರ ಪುರಂನಿಂದ ಎನ್.ಇ.ಪಿ.ಎಸ್.ವರೆಗೆ 257 ಲಕ್ಷ ರೂ. ವೆಚ್ಚದಲ್ಲಿ ಮಳೆನೀರಿನ ಚರಂಡಿ ಅಭಿವೃದ್ಧಿ;
- ಶಿವಕುಮಾರ ಸ್ವಾಮೀಜಿ ವೃತ್ತದಿಂದ ಕೋತಿತೋಪು ವೃತ್ತದವರೆಗೆ ಇರುವ ಮಳೆನೀರಿನ ಚರಂಡಿಗೆ 31.54 ಲಕ್ಷ ರೂ. ವೆಚ್ಚದಲ್ಲಿ ಕವರಿಂಗ್ ಸ್ಲಾಬ್ ಅಳವಡಿಸುವುದು – ಹೀಗೆ ಒಟ್ಟು 440.54 ಲಕ್ಷ ರೂ. ಅಂದಾಜು ವೆಚ್ಚದ ಕಾಮಗಾರಿಯನ್ನು ಕೈಗೊಳ್ಳಲುದ್ದೇಶಿಸಲಾಗಿದೆ.
- ಮಾರುತಿನಗರದ ದಾಸಪ್ಪ ಗಾರ್ಡನ್ ಉದ್ಯಾನವನವನ್ನು 37.81 ಲಕ್ಷ ರೂ. ಅಂದಾಜಿನಲ್ಲಿ ಅಭಿವೃದ್ಧಿಪಡಿಸುವುದು;
- ಕುವೆಂಪುನಗರದಲ್ಲಿರುವ ಉದ್ಯಾನವನ್ನು 42.10 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದು;
- ಸಿದ್ಧರಾಮೇಶ್ವರ ಬಡಾವಣೆಯಲ್ಲಿರುವ ಉದ್ಯಾನವನ್ನು 48 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದು- ಈ ರೀತಿ 127.91 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.