ಹಾವೇರಿ :
ಜಿಲ್ಲೆಯ ಏಕೈಕ ಸಕ್ಕರೆ ಕಾರ್ಖಾನೆಯಾದ ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಜಿ.ಎಮ್. ಸೂಗರ್ಸ್ ಲಿಮಿಟೇಡ್ ಗುತ್ತಿಗೆ ಪಡೆದಿದ್ದು. 2018-19 ನೇ ಸಾಲಿನ ಕಬ್ಬು ನೂರಿಸುವ ಹಂಗಾಮನ್ನು ಪ್ರಾರಂಬಿಸಲು ಹಾವೇರಿ ಉಪ ವಿಭಾಗಧಿಕಾರಿಯ ಕಛೇರಿಯಲ್ಲಿ ನಡೆದ ಸಭೆಯಲ್ಲಿ ರೈತರು ಹಾಗೂ ಕಾರ್ಖಾನೆಯ ಮಾಲಿಕರ ಮಧ್ಯ ದರ ನಿಗದಿ ಪಡಿಸುವಲ್ಲಿ ದೊಡ್ಡ ಪ್ರಮಾಣದ ಅಂತರ ಕಂಡುಬಂದಿದ್ದರಿಂದ ಸಭೆ ವಿಫಲವಾಗಿದೆ.
ರೈತರು ಈ ಭಾರಿ ಪ್ರತಿ ಟನಗೆ ಕಬ್ಬಿಗೆ 3500 ರೂ ದರವನ್ನು ನೀಡಬೇಕೆಂದು ಕಾರ್ಖಾನೆಯ ಗುತ್ತಿಗೆದಾರರಿಗೆ ತಿಳಿಸಿದಾಗ ಜಿ.ಎಮ್. ಸೂಗರ್ನ ಆಡಳಿತ ಮಂಡಳಿಯ ಅಧಿಕಾರಿಗಳು ಮುಂಗಡವಾಗಿ ಪ್ರತಿ ಟನಗೆ ಕಬ್ಬಿಗೆ 1500 ರೂ ದರ ಮತ್ತು ಸಾಗಣಿಕೆ ಹಾಗೂ ಕಟಾವುನ ವೆಚ್ಚ ಒದಗಿಸುತ್ತೆವೆ ಎಂದು ಹೇಳಿದರು, ರೈತ ಸಂಘಟನೆಯ ಪ್ರಮುಖರು ಒಪ್ಪಲಿಲ್ಲ, ನಂತರ ಕಳೆದ ಬಾರಿ 2017-18 ನೇ ಸಾಲಿನ ಹಂಗಮಿನಲ್ಲಿ ತಾವು ನೀಡಿದ ಮುಂಗಡ ದರವಾದ ಪ್ರತಿ ಟನಿಗೆ ಕಬ್ಬಿಗೆ 2826 ರೂ ದರ ನೀಡಬೇಕೆಂದು ಪಟ್ಟು ಹಿಡಿದರು.
ಕಾರ್ಖಾನೆಯ ಗುತ್ತಗೆದಾರರು ಎಫ್,ಆರ್.ಪಿ ದರವಾದ ಪ್ರತಿ ಟನ್ ಕಬ್ಬಿಗೆ 2613 ರೂ ನೀಡುತ್ತೆವೆ ಎಂದು ಸಭಗೆ ತಿಳಿಸಿದಾಗ ರೈತೆರು ಒಪ್ಪದೆ. ಕಬ್ಬನ್ನು ಯಾವ ಕಾರ್ಖಾನೆಯುವರು ಹೆಚ್ಚು ದರವನ್ನು ನೀಡುತ್ತಾರೆ ಆ ಕಾರ್ಖಾನೆಗಳಿಗೆ ಕಬ್ಬು ನೀಡುತ್ತೇವೆ ಎಂದು ಎಲ್ಲ ಕಬ್ಬು ಬೆಳಿಗಾರರ ಸಂಘಟನೆ ಪ್ರಮುಖರು ನಿರ್ಧರಿಸಲಾಗಿದೆ ಕಬ್ಬು ಬೆಳಿಗಾರರ ಸಂಘಟನೆಯ ಜಿಲ್ಲಾಧ್ಯಕ್ಷರಾದ ಸಿದ್ದರಾಜ ಕಲಕೋಟಿ ಹೇಳಿದರು.
ಈ ಸಂದರ್ಭದಲ್ಲಿ ರಾಜಶೇಖರ ಬೆಟಗೇರಿ, ಶಿವಾನಂದ ಗುರುಮಠ, ಸಂಗೂರ ಸಕ್ಕರೆ ಕಾರ್ಖಾನೆಯ ನೀದೆರ್ಶಕ ಮಂಡಳಿಯ ಅಧ್ಯಕ್ಷರಾದ ವಿ.ಆರ್. ಪಾಟೀಲ, ಉಪಾಧ್ಯಕ್ಷರಾದ ಪ್ರಭು ಗರಾತಿ, ಕಾರ್ಖಾನೆಯ ನೀದೆರ್ಶಕರಾದ ಶ್ರೀನಿವಾಸ ಶಿವಪೂಜಿ, ಮಂಜುನಾಥ ಸೀತಾಳದ, ಕಾರ್ಖಾನೆಯ ಬೂವನೇಶ್ವರ ಶಿಡ್ಲಾಪೂರ, ದೀಪಕ್ ಗಂಟಿಸಿದ್ದಪ್ಪನವರ, ದಾನಪ್ಪ ಕೆಂಗೊಂಡ, ಶಿದ್ಲಿಂಗಪ್ಪ ಶಂಕ್ರಿಕೊಪ್ಪ, ಚಂದ್ರಣ್ಣ ವರ್ಧಿ, ಮಂಜುನಾಥ ಅಸುಂಡಿ, ಮಂಜುನಾಥ ಕ್ಯಾತಪ್ಪನವರ, ನಾಗಪ್ಪ ಆನಿಶೆಟ್ಟಿರ, ಎಂ.ಬಿ. ಹಿರೇಗೌಡರ ಮುಂತಾದ ರೈತ ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ