ಪ್ರತಿ ಅನಕ್ಷರಸ್ಥರು ಕನಿಷ್ಟ ಓದು ಬರಹ, ಸಾಮಾನ್ಯ ಲೆಕ್ಕ ಕಲಿಸುವಂತೆ ಸಲಹೆ

ಹಾವೇರಿ

       ಗ್ರಾಮೀಣ ಅನಕ್ಷರಸ್ಥ ಸಮೂಹ ಸಾಕ್ಷರತಾ ಕಾರ್ಯಕ್ರಮದಡಿ ಕನಿಷ್ಟ ಓದು ಹಾಗೂ ಬರಹ ಮತ್ತು ಸಾಮಾನ್ಯ ಲೆಕ್ಕವನ್ನು ಕಲಿಯುವಂತಾಗಬೇಕು. ಈ ನಿಟ್ಟಿನಲ್ಲಿ ಸಾಕ್ಷರತಾ ಪ್ರೇರಕರು, ಬೋಧಕರು ಪ್ರೇರಣೆ ನೀಡಲು ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು ಸಲಹೆ ನೀಡಿದರು.

       ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಲೋಕಶಿಕ್ಷಣ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಲೋಕ ಶಿಕ್ಷಣ ಸಮಿತಿಯ ಮಹತ್ವವನ್ನು ವಿವರಿಸಿ ಜಿಲ್ಲೆಯಲ್ಲಿ 2540 ಕಲಿಕಾ ಕೇಂದ್ರಗಳು, 25404 ಅನಕ್ಷರಸ್ಥರು ಅಕ್ಷರ ಕಲಿಯುತ್ತಿದ್ದಾರೆ. ಎಲ್ಲರೂ ಕನಿಷ್ಟ ಅಕ್ಷರ ಜ್ಞಾನ, ಸಾಮಾನ್ಯ ಲೆಕ್ಕಪತ್ರಗಳನ್ನು ನಿಭಾಯಿಸುವಂತೆ ತರಬೇತಿ ನೀಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.

       ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ ಹಾಗೂ ಸಾಕ್ಷರತಾ ಕಾರ್ಯಕ್ರಮದ ಗ್ರಾ.ಪಂ.ನೋಡಲ್ ಅಧಿಕಾರಿಗಳಾದ ಪ್ರೌಢಶಾಲಾ ಶಿಕ್ಷಕರು, ತಾಲೂಕಾ ಸಂಯೋಜಕರು, ತಾಲೂಕಾ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link