ಕೂಡ್ಲಿಗಿ:
ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಲೋಕಸಭಾ ಚುನಾವಣೆಯಲ್ಲಿ ಜನರ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದು ಬೇಕಾಗಿಲ್ಲ ಎಂದು ಎಸ್‍ಯುಸಿಐ(ಕಮ್ಯುನಿಸ್ಟ್) ಪಕ್ಷದ ಮುಖಂಡ ಸೋಮಶೇಖರ ಗೌಡ ಹೇಳಿದರು. ಲೋಕಸಭಾ ಚುನಾವಣೆಯ ಅಂಗವಾಗಿ ಪಟ್ಟಣದಲ್ಲಿ ಶುಕ್ರವಾರ ಪಕ್ಷದಿಂದ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಬೆಲೆ ಏರಿಕೆ, ರೈತರ ಆತ್ಮಹತ್ಯೆ, ಭ್ರಷ್ಟಾಚಾರ, ನಿರುದ್ಯೋಗ, ಮಹಿಳೆಯರ ಮೇಲಿನ ದೌರ್ಜನೆಗಳ ಬಗ್ಗೆ ಪ್ರಧಾನಿ ಮೊದಿ ತಾವು ಮಾಡುವ ಭಾಷಣದಲ್ಲಿ ಚಕಾರ ಎತ್ತುತ್ತಿಲ್ಲ ಏಕೆ?. ಮೋದಿ ಇಂತಹ ವಿಷಯಗಳ ಬಗ್ಗೆ ಮಾತನಾಡುವ ನೈತಿಕತೆ ಉಳಿದಿಲ್ಲವೆ ಎಂದು ಪ್ರಶ್ನಿಸಿದ ಅವರು, ಅಚ್ಛೆ ದಿನ ಬರುತ್ತವೆ ಎಂದು ಹೇಳುತ್ತಲೇ ರೈತರಿಗೆ ಸೂಕ್ತ ಬೆಂಬಲ ಬೆಲೆ ನೀಡದೆ ಸಾಲಗಾರರನ್ನಾಗಿ ಮಾಡಿದರು. ನೋಟು ರದ್ದತಿ ಮಾಡುವ ಮೂಲಕ ಕಾರ್ಮಿಕರನ್ನು, ಜನ ಸಾಮಾನ್ಯರನ್ನು ಬೀದಿಗೆ ತಂದರು ಎಂದು ದೂರಿದರು.
ದೇಶದಲ್ಲಿ ಮತ್ತೆ ಅಧಿಕಾರ ಹಿಡಿಯವ ದಾವಂತದಲ್ಲಿರುವ ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಅನೇಕ ಘೋಷಣೆಗಳನ್ನು ಮಾಡಿದೆ. ನಿರಂತರ ದೇಶನ್ನಾಳಿದ ಈ ಪಕ್ಷವೂ ಬೆಲೆ ಏರಿಕೆ, ಭ್ರಷ್ಟಾಚಾರ, ನಿರುದ್ಯೋಗ ಬಡತನಂದಹ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ನವೇಲ್ಲರೂ ದುಡಿಯುವ ವರ್ಗಕ್ಕೆ ಸೇರಿದವರಾಗಿದ್ದು, ಇದೇ ನಮ್ಮ ಹೆಮ್ಮೆಯ ಗುರುತಾಗಿದೆ. ಇದರಿಂದ ನಾವು ನಮ್ಮ ದುಡಿಯುವ ವರ್ಗದ ಪರವಾಗಿ ನಮ್ಮ ಪಕ್ಷವನ್ನು ಎತ್ತಿ ಹಿಡಿಯಬೇಕಾಗಿದೆ. ಅದ್ದರಿಂದ ಕಳೆದ 30 ವರ್ಷಗಳಿಂದಲೂ ಹಲವಾರು ರೈತ, ಕಾರ್ಮಿಕ, ಗಣಿಬಾದಿತ ಜನರ, ಯುವ ಜನರ, ಆಶಾ ಕಾರ್ಯಕರ್ತೆಯರ ಪರವಾಗಿ ಹೋರಾಟ ಮಾಡಿದ ಎ. ದೇವದಾಸ್ ಅವರನ್ನು ನಮ್ಮ ಪಕ್ಷದ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿದ್ದು, ಸಂಸತ್ತಿನ ಒಳಗು, ಹೊರಗೂ ಜಿಲ್ಲೆಯ ಜನರ ಧ್ವನಿಯಾಗಲಿದ್ದಾರೆ. ಅದ್ದರಿಂದ ಅವರಿಗೆ ಮತ ನೀಡಬೇಕು ಎಂದು ಕೋರಿದರು.
ಪಕ್ಷದ ಮುಖಂಡರಾದ ಹನುಂತಪ್ಪ, ಪಂಪಾಪತಿ ಕೋಳೂರು, ಗೋವಿಂದಪ್ಪ, ಸುರೇಶ್, ಜಗದೀಶ್ ನೇಮಕಲ್, ರಾಜಮ್ ಶೇಖರ್, ರವಿ, ರಂಗಸ್ವಾಮಿ ಇದ್ದರು.