ಮಂಡ್ಯ:

ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಸುಮಲತಾ ಅವರಿಗೆ ಜೆಡಿಎಸ್ ಟಿಕೆಟ್ ಕೊಡಿಸುವ ಇಂಗಿತವಿತ್ತು ಆದರೆ ಅವರು ನಿರಾಕರಿಸಿದ್ದಕ್ಕೆ ಅದು ಸಾಧ್ಯವಾಗಿಲ್ಲ ಎಂದು ಡಿ.ಸಿ ತಮ್ಮಣ್ಣ ಅವರು ತಿಳಿಸಿದ್ದಾರೆ.
ಮಾದ್ಯಮಗಳೊಂದಿಗೆ ಮಾತನಾಡಿದ ತಮ್ಮಣ್ಣ ಅವರು ಸುಮಲತಾ ಅವರ ಜೊತೆಯಲ್ಲಿ ಸಂಧಾನಕ್ಕೆ ನಾನು,ನನ್ನ ಮಗ ಯತ್ನಿಸಿದ್ದೇವೆ , ಮಧು ಹಾಗೂ ಹೊನ್ನೇಗೌಡ ಎಂಬವರು ಸಂಧಾನ ಮಾಡಿದ್ದರು ಆದರೆ ಸುಮಲತಾ ಅವರೇ ಇದಕ್ಕೆ ಒಪ್ಪಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ,
ಸುಮಲತಾ ಅವರು ಜೆಡಿಎಸ್ ಟಿಕೆಟ್ ಕೊಡಿಸಿ ಎಂದು ಕೇಳಬಹುದಿತ್ತು, ಆದರೆ ಅವರು ಅದಕ್ಕೆ ಒಲವು ತೋರಲಿಲ್ಲ, ಜೆಡಿಎಸ್ ವರಿಷ್ಠರನ್ನು ಭೇಟಿ ಮಾಡುವ ಆಸಕ್ತಿ ತೋರಲಿಲ್ಲ ಎಂದು ತಿಳಿಸಿದ್ದಾರೆ. ಕುಮಾರಸ್ವಾಮಿ ಅವರ ಬಳಿ ಸುಮಲತಾ ಕೇಳಲಿಲ್ಲ, ಅವರು ನಾವು ಸಂಬಂಧಿಗಳು, ಕುಟುಂಬದ ಮಧ್ಯೆ ಭಿನ್ನಾಭಿಪ್ರಾಯ ಬೇಡವೆಂದು ನಾನು ಈ ಯತ್ನ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
