ಬಳ್ಳಾರಿ
ದೇಶವನ್ನು ಗಂಡಾಂತರಕ್ಕೆ ತಂದೊಡ್ಡಿರುವ ಕೋಮುವಾದಿ ಬಿಜೆಪಿಯನ್ನು ದೂರ ಇಡಲು ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪನವರನ್ನು ಬೆಂಬಲಿಸುವಂತೆ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟವು ಮನವಿ ಮಾಡಿದೆ.ಈ ಕುರಿತು ಪತ್ರಿಕಾಗೋಷ್ಠಿ ನಡೆಸಿರುವ ಒಕ್ಕೂಟದ ದುರುಗಪ್ಪ ತಳವಾರ್ ಮತ್ತಿತರರು ಕಳೆದ 5 ವರ್ಷಗಳಲ್ಲಿ ಮೋದಿ ಸರ್ಕಾರ ಪ್ರಜಾತಂತ್ರ ವ್ಯವಸ್ಥೆ ಹಾಳು ಮಾಡಿದೆ. ಹಿಟ್ಲರ್ ಆಡಳಿತ ಜಾರಿಗೆ ತಂದಿದೆ.
ದಲಿತರು, ಅಲ್ಪ ಸಂಖ್ಯಾತರು, ಹಿಂದುಳಿದವರು ಅಸುರಕ್ಷಿತರಾಗಿ ಬದುಕುತ್ತಿದ್ದಾರೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನ ತಿದ್ದುಪಡಿ ಮಾಡಲು ಹೊರಟಿರುವ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸಬೇಕೆಂದು ಅವರು ಮನವಿ ಮಾಡಿದರು. ಈ ವೇಳೆ ಹೆಚ್.ರಮೇಶ, ಎಂ.ಶಿವಪ್ಪ, ಎಸ್.ನಾಗಭೂóಷಣ್, ಎಕೆ ಗಂಗಾಧರ್, ಹೆಚ್.ಹುಸೇನಪ್ಪ, ಈಶಪ್ಪ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ