ಸುಪ್ರೀಂನಿಂದ ನಾಳೆ ಶಬರಿಮಲೆ ತೀರ್ಪು ಪ್ರಕಟ..!

ತಿರುವನಂತಪುರಂ:

    ದೇಶದಲ್ಲಿ ತೀವ್ರ ವಿವಾದಾತ್ಮಕ ಪ್ರಕರಣಗಳ ಪೈಕಿ ಅಯೋಧ್ಯೆ ತೀರ್ಪು ಬಂದ ನಂತರ ದೇಶದ ಜನತೆ ಬಹುಕಾಲದಿಂದ ಕಾಯುತ್ತಿರುವ ಇನ್ನೊಂದು ಮಹತ್ವದ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನಾಳೆ ನೀಡಲಿದೆ.

   ಅದುವೇ ಅಯ್ಯಪ್ಪನ ಸನ್ನಿಧಾನಕ್ಕೆ ಮಹಿಳೆಯರ ಪ್ರವೇಶದ ಕುರಿತಂತೆ ಮರುಪರಿಶೀಲನೆ ಅರ್ಜಿ ತೀರ್ಪಾಗಿದೆ. ಸುಪ್ರೀಂ ಕೋರ್ಟ್ ಗುರುವಾರ ಶಬರಿಮಲೆ ಪರಿಶೀಲನಾ ಅರ್ಜಿಗಳ ಕುರಿತಂತೆ ನಾಳೆ ತೀರ್ಮಾನ ನೀಡಲಿದೆ.ಈ ತೀರ್ಪಿನಿಂದ ಕೇರಳ ರಾಜ್ಯ ರಾಜಕೀಯ ವಲಯದಲ್ಲಿ ಪ್ರಮುಖ ಬೆಳವಣೆಗೆಗಳಾಗುವ ಸಾಧ್ಯತೆ ಹೆಚ್ಚಾಗಿವೆ ಎನ್ನಲಾಗಿದೆ.

   ಮಂಡಲ ಮಕರವಿಳಕ್ಕುಂ ಋತುಮಾನವು ನವೆಂಬರ್ 16 ರಿಂದ  ಪ್ರಾರಂಭವಾಗಲಿದ್ದು ಇದರಿಂದಾಗಿ ಈ ತೀರ್ಪು ಹೆಚ್ಚಿನ ಮಹತ್ವ ಪಡೆದಿದೆ ಕಳೆದ ಬಾರಿ ತೀರ್ಪು ಬಂದಾಗ ರಾಜ್ಯ ಸರ್ಕಾರ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಬೆಟ್ಟದ ಮೇಲಿನ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಪ್ರವೇಶಿಸಲು ಅನುವು ಮಾಡಿಕೊಡು ಮುಂದಾಗಿತ್ತು ಇದಕ್ಕಾಗಿ ವಿವಿಧ ಮೂಲೆಗಳಿಂದ  ಜನರನ್ನು ಕರೆತರಲಾಗಿತ್ತು. ಹೀಗಾಗಿ ದೇವಾಲಯಕ್ಕೆ ತೆರಳುವ ದಾರಿಯಲ್ಲಿ ಮಹಿಳಾ ಯಾತ್ರಿಕರನ್ನು ನಿರ್ಬಂಧಿಸಿ ಭಾರೀ ಪ್ರತಿಭಟನೆಗಳು ಸಹ ನಡೆದಿದ್ದವು. ಇದರಿಂದ ಮಂಡಲದ ಅವಧಿಯುದ್ದಕ್ಕೂ  ಸಾಕಷ್ಟು ಉದ್ವಿಗ್ನತೆ ಉಂಟಾಗಿತ್ತು.

   ನಾಳಿನ ಸುಪ್ರೀಂ ತೀರ್ಪಿಗೆ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಅತ್ಯಂತ ಮುಖ್ಯವಾಗಿರಲಿದೆ.ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಮತ್ತು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಇದಾಗಲೇ ಅಯೋಧ್ಯೆಯ ತೀರ್ಪಿನಂತೆ ಶಬರಿಮಲೆ ಪರಿಶೀಲನಾ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap