ಗಣರಾಜ್ಯೋತ್ಸವ ದಿನದಂದು ‘ಸುರಕ್ಷಾ ಚಾಲಕ’ ಪ್ರಶಸ್ತಿ ಪ್ರದಾನ : ಕೆಎಸ್‍ಆರ್ ಟಿಸಿ

ಬೆಂಗಳೂರು

         ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 17 ವಿಭಾಗಗಳಲ್ಲಿ ಅಪಘಾತರಹಿತ ಹಾಗೂ ಅಪರಾಧರಹಿತ 283 ಚಾಲಕರಿಗೆ ಗಣರಾಜ್ಯೋತ್ಸವ ದಿನದಂದು ‘ಸುರಕ್ಷಾ ಚಾಲಕ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

       ಕಳೆದ 5 ವರ್ಷಗಳ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಚಾಲಕ ಹಾಗೂ ಚಾಲಕ – ನಿರ್ವಾಹಕರಿಗೆ ‘ಸುರಕ್ಷಾ ಚಾಲಕ’ ಬಿರುದು ನೀಡಿ ‘ಗಂಡಭೇರುಂಢ’ ಲಾಂಛನವನ್ನೊಳಗೊಂಡ 32 ಗ್ರಾಂ ತೂಕದ ಬೆಳ್ಳಿ ಪದಕ, 2 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಜೊತೆಗೆ, ಮಾಸಿಕ ರೂ.50 ರೂ. ಪ್ರೋತ್ಸಾಹ ಭತ್ಯೆ ನೀಡಲಾಗುವುದು. ಕೆಎಸ್‍ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಜಿ.ಕಳಸದ ಅವರು ಪ್ರಶಸ್ತಿಗೆ ಆಯ್ಕೆಯಾದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ವಿಭಾಗಾವಾರು ವಿಜೇತರ ಸಂಖ್ಯೆ;

          ಬೆಂಗಳೂರು(ಕೇಂದ್ರೀಯ) 32, ರಾಮನಗರ 17, ತುಮಕೂರು 10, ಕೋಲಾರ 62, ಚಿಕ್ಕಬಳ್ಳಾಪುರ 23, ಮೈಸೂರು ನಗರ 1, ಮೈಸೂರುಗ್ರಾಮಾಂತರ 12, ಮಂಡ್ಯ 13, ಚಾಮರಾಜನಗರ 12, ಹಾಸನ 24, ಚಿಕ್ಕಮಗಳೂರು 11, ಮಂಗಳೂರು 6, ಪುತ್ತೂರು 15, ದಾವಣಗೆರೆ 26, ಶಿವಮೊಗ್ಗ 11, ಕೆಂಪೇಗೌಡ ಬಸ್ ನಿಲ್ದಾಣ 2, ಕೇಂದ್ರಕಛೇರಿಯಲ್ಲಿ 6 ಜನ ಸೇರಿ 283 ಚಾಲಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap