ಹಿರಿಯೂರು:
ತಾಲೂಕಿನ ಹರ್ತಿಕೋಟೆ ಗ್ರಾಮ ಪಂಚಾಯಿತಿಯ ಕಾಳಜಿಯಿಂದಾಗಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಗ್ರಾಮದಲ್ಲಿ ಶನಿವಾರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗ್ರಾಮದಲ್ಲಿ ಕಳೆದವಾರ ಬೃಹತ್ ದನಗಳ ಜಾತ್ರೆ ನಡೆದ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ಗಲೀಜು, ಪ್ಲಾಸ್ಟಿಕ್ ತಟ್ಟೆ ಲೋಟ ಹಾಗೂ ಕಸದ ರಾಶಿ ಇಂದ ಸ್ವಚ್ಚತೆ ಮಾಯವಾಗಿತ್ತು.
ಇದನ್ನು ಗಮನ ಹರಿಸಿದ ಗ್ರಾಮ ಪಂಚಾಯಿತಿ ಶನಿವಾರ ಇಡೀ ಸಿಬ್ಬಂದಿ ಜತೆಗೂಡಿ ಅಲ್ಲಿದ್ದ ಎಲ್ಲ ಪ್ಲಾಸ್ಟಿಕ್‍ಗಳನ್ನು ಸುಡುವ ಮೂಲಕ ಹಾಗೂ ಜಾಲಿ ಮುಳ್ಳುಗಳನ್ನು ಸುಡುವ ಮೂಲಕ ಸ್ವಚ್ಚ ಮಾಡಿದರು. ಇವರೊಂದಿಗೆ ಗ್ರಾಮಸ್ಥರು ಕೈ ಜೋಡಿಸಿದ್ದು ವಿಶೇಷವಾಗಿತ್ತು.
ಈ ವೇಳೆ ಮಾತನಾಡಿದ ಅಧ್ಯಕ್ಷರಾದ ಹೆಚ್.ಎಂ.ರಂಗಮಹೇಶ್ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾವು ಸ್ವಚ್ಚತೆ ಕಾಪಾಡುವಂತೆ ಎಲ್ಲರೂ ಅವರವರ ಮನೆ ಮುಂಭಾಗ ಹಾಗೂ ಸುತ್ತಮುತ್ತ, ಖಾಲಿ ನಿವೇಶನಗಳಲ್ಲಿ ಗಲೀಜು ಹಾಕದಂತೆ ಸ್ವಚ್ಚವಾಗಿ ಇಡಬೇಕು ಎಂದು ಮನವಿಮಾಡಿದರು.
ಪಿಡಿಒ ಅಸಿಂತಿಯಾಜ್‍ಬೇಗಂ ಅವರು ಮಾತನಾಡಿ ಹರ್ತಿಕೋಟೆ ಗ್ರಾಮಪಂಚಾಯಿತಿಯನ್ನುವಿಶೇಷವಾಗಿ ಇಡೀ ತಾಲೂಕಿನಲ್ಲಿಯೇ ಸ್ವಚ್ಚತೆಯಿಂದಿಡುವ ಕಾರ್ಯನಮ್ಮದು. ಸಿಇಒ ಅವರ ಕಾಳಜಿಯ ಅನ್ವಯ ಇಡೀ ಗ್ರಾಮ ಪಂಚಾಯಿತಿ ಸಿಬ್ಬಂದಿ ಸ್ವಚ್ಚತೆ ಮಾಡುತ್ತಿದ್ದು ನಮ್ಮ ಕಾಯಕಕ್ಕೆ ಗ್ರಾಮಸ್ಥರು ಸಹಕರಿಸಬೇಕು ಎಂದರು.
ನೇಸರಸಂಸ್ಥೆಯ ಅಧ್ಯಕ್ಷ ಹಾಗೂ ಮುಖಂಡರಾದ ಬಿ.ಮಹಂತೇಶ್ ಮಾತನಾಡಿ, ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಬೇಕು. ಎಲ್ಲರೂ ನಮ್ಮ ಕಾರ್ಯ ಎಂದು ಮುಂದೆ ನಿಂತು ಮಾಡಬೇಕಾಗಿದೆ. ಈ ಆಂದೋಲನದಲ್ಲಿ ಎಲ್ಲರೂ ಭಾಗಿಯಾಗಬೇಕು ಮತ್ತು ಕಸವಿಲೇವಾರಿ ಮಾಡುವ ಮನಸ್ಥಿತಿ ಬದಲಾಗಿ ಸ್ವಚ್ಛತೆ ಮೂಡಬೇಕು ಎಂದರು.
ಅಧ್ಯಕ್ಷರಾದ ಹೆಚ್. ಎಂ.ರಂಗಮಹೇಶ್, ಪಿಡಿಒ ಅಸಿಂತಿಯಾಸ್ ಬೇಗಂ. ಗ್ರಾಮ ಪಂಚಾಯಿತಿ ಸದಸ್ಯರಾದ ಪರಮಶಿವ, ರಂಗನಾಥ್, ಮುಖಂಡರಾದ ಬಿ.ಮಹಂತೇಶ್, ರಾಜ್ಯ ಯುವ ಪ್ರಶಸ್ತಿ ಪುರಸ್ಕತ ಮಾಲತೇಶ್ ಅರಸ್, ಆಶಾಕಾರ್ಯಕರ್ತೆ ನರಸಮ್ಮ, ಗ್ರಂಥಾಲಯ ಪಾಲಕಿ ಲಕ್ಷ್ಮಿದೇವಿ,. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಲೋಕೇಶ್, ಮಾರನಾಯಕ, ರಾಮನಾಯಕ, ವೀರೇಶ್, ಅಮೃತೇಶ್, ನಿಂಗರಾಜ್, ಗ್ರಾಮ ಸಹಾಯಕ ಶಿವ ಶಂಕರ್, ಆರೋಗ್ಯ ಇಲಾಖೆಯ ಸಿಬ್ಬಂದಿ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
