ಬಳ್ಳಾರಿ
ಏ.15ರವರೆಗೆ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತೆಯನ್ನು ನಿರಂತರವಾಗಿ ಕೈಗೊಳ್ಳುವ ಮೂಲಕ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಂಡು ಮಹಾತ್ಮ ಗಾಂಧೀಜಿಯವರ ಕನಸಾಗಿರುವ ಸ್ವಚ್ಛ ಭಾರತ ಗುರಿ ತಲುಪಲು ಆರೋಗ್ಯ ಇಲಾಖೆಯು ಸಹಿತ ಈ ದಿಶೆಯಲ್ಲಿ ಭಾಗಿಯಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವರಾಜ ಹೆಡೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆ ಇವರ ಆಶ್ರಯದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಸ್ವಚ್ಛತೆ ಮಾಡುವ ಮೂಲಕ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
2016-17ರಲ್ಲಿ 06, 2017-18ರಲ್ಲಿ 16, 2018-19ರಲ್ಲಿ 17 ಆಸ್ಪತ್ರೆಗಳು ಸ್ವಚ್ಛತೆಯ ಮಾನದಂಡದಡಿಯಲ್ಲಿ ‘’ಕಾಯಕಲ್ಪ ಪ್ರಶಸ್ತಿ’’ಗೆ ಆಯ್ಕೆಯಾಗಿದ್ದು ಇನ್ನೂ ಹೆಚ್ಚಿನ ಆಸ್ಪತ್ರೆಗಳು ಸ್ವಚ್ಛತೆಗೆ ಗಮನ ನೀಡಲು ಆರೋಗ್ಯ ಇಲಾಖೆ ಶ್ರಮಿಸುತ್ತಿದೆ ಎಂದು ಹೇಳಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ಎನ್. ಬಸರೆಡ್ಡಿ ಮಾತನಾಡಿ ಕಳೆದ ವರ್ಷ ಆಸ್ಪತ್ರೆಯ ಸ್ವಚ್ಛತಾ ಆಯ್ಕೆಯಲ್ಲಿ ರಾಜ್ಯಮಟ್ಟದಲ್ಲಿ 2ನೇ ಅತ್ಯುತ್ತಮ ಆಸ್ಪತ್ರೆ ಎಂಬ ಬಿರುದು ಪಡೆದಿದ್ದು, ಆಸ್ಪತ್ರೆಗೆ ಆಗಮಿಸುವ ಸಾರ್ವಜನಿಕರು ಆಸ್ಪತ್ರೆ ಆವರಣದಲ್ಲಿ ಯಾವುದೇ ಕಸವನ್ನು ಹಾಕದಂತೆ ವಿನಂತಿಸಿ ಕಸದ ಡಬ್ಬಿಯಲ್ಲಿ ಕಸ ಹಾಕುವ ಮೂಲಕ ಸ್ವಚ್ಛತೆಗೆ ಸಹಕರಿಸಬೇಕು. ಆರೋಗ್ಯ ಇಲಾಖೆಯ ಸಿಬ್ಬಂದಿ ವಾರದಲ್ಲಿ 2ಗಂಟೆ ತಮ್ಮ ಸುತ್ತಲಿನ ಸ್ವಚ್ಚತೆಗೆ ಮೀಸಲಿಟ್ಟು ದೇಶವನ್ನು ಸ್ವಚ್ಛಗೊಳಿಸಲು ಪಣತೋಡಬೇಕು ಎಂದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಪ್ರತಿಜ್ಞಾವಿಧಿ ಬೋದಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ತರಬೇತಿ ಕೇಂದ್ರ ಪ್ರಾಂಶುಪಾಲ ಡಾ.ಗುರುನಾಥ.ಬಿ. ಚೌವ್ಹಾಣ, ಬೆಂಗಳೂರು ಕಾಯಕಲ್ಪ ಕಾರ್ಯಕ್ರಮ ರಾಜ್ಯ ಸಲಹೆಗಾರ ಡಾ.ನಿಶಾಂತ್, ಆರ್.ಎಮ್.ಒ ಡಾ.ಸೌಭಾಗ್ಯವತಿ ಕಾಯಕಲ್ಪ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು ಹಾಗೂ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆರ್. ವಿಜಯಲಕ್ಷ್ಮಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ರಾಜಶೇಖರ ರೆಡ್ಡಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಹೆಚ್. ನಿಜಾಮುದ್ದೀನ್, ಜಿಲ್ಲಾ ಸಮಿಕ್ಷಣಾಧಿಕಾರಿ ಡಾ.ಆರ್. ಅನಿಲ್ ಕುಮಾರ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ರವೀಂದ್ರನಾಥ, ಹೆಚ್.ಎಂ, ತಜ್ಞವೈದ್ಯರಾದ ಡಾ.ಚಂದ್ರಬಾಬು, ಡಾ.ಲಿಂಗರಾಜ್.ಎಂ ಡಾ. ವೆಂಕಟೇಶ್, ಡಾ.ಬಾಲುವೆಂಕಟೇಶ್ ಡಾ.ವಿಜಯಲಕ್ಷ್ಮಿ, ಡಾ.ಶಾರದ, ಡಾ.ಅನಿಲ್‍ರೆಡ್ಡಿ, ಡಾ. ಮಲ್ಲಿಕಾರ್ಜುನ್, ಡಾ.ಲಕ್ಷ್ಮಿಕಾಂತ್ ಡಿ.ಕ್ಯೂ.ಸಿ ಡಾ. ಬವಸಪ್ರಭು ಹಾಗೂ ಟಿ ರೋಹಿಣಿ, ಉದಯ್ ಎಸ್.ದೆಸಾಯಿ, ಆರ್.ವಿ.ನಾಗೇಶ್ವರಾವ್, ಮೆಹಬೂಬ್ ಖಾನ್, ಬವರಾಜ್, ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಇದ್ದರು.