ಚುನಾವಣಾ ವೇಳಾಪಟ್ಟಿ ಪ್ರಟಿಸಿದ ತಹಶೀಲ್ದಾರ್

ಬ್ಯಾಡಗಿ

         ಸ್ಥಳೀಯ ಪುರಸಭೆಗೆ ಮೆ.9 ರಿಂದ ನಾಮ ಪತ್ರ ಸಲ್ಲಿಕೆ ಕಾರ್ಯ ಪ್ರಾರಂಭವಾಗಲಿದೆ. ಮೇ.29 ರಂದು ಚುನಾವಣೆ ನಡೆಯಲಿದೆ ಎಂದು ತಹಶೀಲ್ದಾರ ಕೆ.ಗುರುಬಸವರಾಜ ತಿಳಿಸಿದರು.

        ತಹಶೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪುರಸಭೆ ಚುನಾವಣೆ ಹಿನ್ನಲೆಯಲ್ಲಿ ಮೇ.9 ರಿಂದ 16 ರವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದ್ದು ಮೇ.17 ನಾಮಪತ್ರ ಪರಿಶೀಲನೆ, ಮೇ.20 ನಾಮಪತ್ರ ಪಡೆಯಲು ಅಂತಿಮ ದಿನ, ಮೇ.29 ರಂದು ಮತದಾನ, ಹಾಗೂ ಅವಶ್ಯಕತೆ ಇದ್ದಲ್ಲಿ ಮೇ.30 ರಂದು ಮರು ಮತದಾನಕ್ಕೆ ದಿನ ನಿಗದಿ ಪಡಿಸಲಾಗಿದ್ದು, ಮೇ.31 ರಂದು ಮತ ಎಣಿಕೆ ಹಾಗೂ ಫಲಿತಾಂಶ ದಿನವಾಗಿದೆ ಎಂದರು.

           ಒಟ್ಟು 23182 ಮತದಾರರು:ಇಪ್ಪತ್ಮೂರು ವಾರ್ಡಗಳಿಂದ 11288 ಪುರುಷರು ಹಾಗೂ 11880 ಮಹಿಳೆಯರು ಇತರೆ 4 ಸೇರಿದಂತೆ ಒಟ್ಟು 23182 ಮತದಾರರಿದ್ದಾರೆ ಎಂದರು. ಪ್ರಸಕ್ತ ಚುನಾವಣೆಯಲ್ಲಿ ಮತದಾನಕ್ಕೆ ಬ್ಯಾಲೆಟ್ ಪೇಪರ್ ಬದಲಾಗಿ ಇವಿಎಂ ಮಿಷನ್‍ಗಳನ್ನು ಬಳಕೆ ಮಾಡಲಾಗುತ್ತಿದೆಯಾದರೂ, ಹಾಕಿದ ಮತವನ್ನು ದೃಢೀಕರಿಸಿಕೊಳ್ಳಲು ಬಳಕೆ ಮಾಡಲಾಗುತ್ತಿದ್ದ ವಿವಿ ಪ್ಯಾಟ್ ಮಾತ್ರ ಈ ಚುನಾವಣೆಯಲ್ಲಿ ಬಳಕೆಯಾಗುತ್ತಿಲ್ಲ ಎಂದರು.

3 ಜನ ಚುನಾವನಾಧಿಕಾರಿಗಳು:

       ವಾರ್ಡಗಳಿಗನುಸಾರ ಮೂವರು ಆರ್‍ಓ (ರಿಟರ್ನಿಂಗ ಆಫಿಸರ್) ಹಾಗೂ ಮೂವರು ಏಪಿ ಆರ್‍ಒಗಳನ್ನು ಆಯೋಜನೆ ಮಾಡಲಾಗಿದೆ. ಇದರಲ್ಲಿ ವಾರ್ಡ ಸಂಖ್ಯೆ 1 ರಿಂದ 8 ರವರೆಗೆ ಅಕ್ಷರದಾಸೋಹ ಸಹಾಯಜಕ ನಿರ್ದೇಶಕ ಎನ್.ತಿಮ್ಮಾರೇಡ್ಡಿ, (ಮೊ.9480835636) ಅವರನ್ನು ಸಹಾಯಕ ಅಧಿಕಾರಿಯಾಗಿ ಕೃಷಿ ಅಧಿಕಾರಿ ಆರ್.ಮಂ ಜುನಾಥ (ಮೊ.8277931830) ಅವರನ್ನು, ವಾರ್ಡ ಸಂಖ್ಯೆ 9 ರಿಂದ 16 ರವರೆಗೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ಎಫ ಬಾರ್ಕಿ (ಮೊ.9480695253) ಸಹಾಯಕ ಅಧಿಕಾರಿಯಾಗಿ ಟ.ಎಸ್.ಲಮಾಣಿ (ಮೊ.9448927085), ವಾರ್ಡ ಸಂಖ್ಯೆ 17 ರಿಂದ 23 ರವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರುದ್ರಮುನಿ (ಮೊ.9480695246) ಸಹಾಯಕ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆ ಪುಂಡಲಿಕ ಮಾನನವರ ಅವರನ್ನು ನಿಯೋಜನೆ ಮಾಡಲಾಗಿದೆ ಎಂದರು.

ಒಟ್ಟು 23 ಮತಗಟ್ಟೆಗಳು:

       ಪ್ರತಿ ವಾರ್ಡಗೆ ಒಂದರಂತೆ ಒಟ್ಟು 23 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರದಲ್ಲದೇ ಮಸ್ಟರಿಂಗ್ ಡಿಮಸ್ಟರಿಂಗನ್ನು ತಹಶೀಲ್ದಾರ ಕಛೇರಿಯಲ್ಲಿಯೇ ನಡೆಸಲಾಗುವುದು ಎಂದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆ ಯಲಿರುವ ಸಭೆಯಲ್ಲಿನ ಸೂಚನೆ ಮೇರೆಗೆ ವಿಶೇಷಚೇತನರ ಮತದಾನಕ್ಕೆ ವಿಶೇಷವಾದ ಸೌಲಭ್ಯ ಕಲ್ಪಿಸಲಾಗುವುದು ಎಂದರು.

       3 ಸ್ಥಳದಲ್ಲಿ ನಾಮ ಪತ್ರ ಸಲ್ಲಿಕೆ:ಮೇ.09 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು ಮೂರು ಸ್ಥಳಗಳಲ್ಲಿ ನಾಮಪತ್ರ ಸಲ್ಲಿ ಕೆಗೆ ವ್ಯವಸ್ಥೆ ಮಾಡಲಾಗಿದೆ. ತಾಲೂಕಾ ಪಂಚಾಯತ ಸಭಾಂಗಣ, ಪುರಸಭೆ ಬ್ಯಾಡಗಿ ಮತ್ತು ಸಾಮಥ್ರ್ಯಸೌಧದಲ್ಲಿ ನಾ ಮ ಪತ್ರ ಸಲ್ಲಿಸಬಹುದಾಗಿದೆ ಎಂದರು.

        ಶೈಕ್ಷಣಿಕ ಹಿನ್ನಡೆಗೆ ಅವಕಾಶ ಮಾಡಬೇಡಿ:ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ವತಿಯಿಂದ ಇಬ್ಬಿಬ್ಬರು ಅಧಿಕಾರಿಗಳ್ನು ಆರ್ ಓ, ಎಆರ್ ಓಗಳನ್ನಾಗಿ ನೇಮಕ ಮಾಡಿದ್ದರ ಹಿನ್ನಲೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಟಿ.ಎಸ್.ಲಮಾಣಿ ಹಾಗೂ ಸಮನ್ವಯಾಧಿಕಾರಿ ಎಂ.ಎಫ್.ಬಾರ್ಕಿ ಮಾತನಾಡಿ, ಇನ್ನೇನು ಕೇವಲೆ ದಿನಗಳಲ್ಲಿ ಶಾಲೆಗಳು ಆರಂಭವಾಗಲಿವೆ. ಮೇ.20 ರಿಂದ ಪುಸ್ತಕ ವಿತರಣೆ ಸೇರಿದಂತೆ ಮೇ.28 ಕ್ಕೆ ಶಾಲಾ ಪ್ರಾರಂಭೋತ್ಸವ ಹಾಗೂ ಜೂನ್‍ನಲ್ಲಿ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು ಇಬ್ಬರಲ್ಲಿ ಯಾರಾದರು ಒಬ್ಬರನ್ನು ಚುನಾವಣೆ ಕಾರ್ಯದಿಂದ ಕೈ ಬಿಟ್ಟಲ್ಲಿ ಅನೂಕೂಲವಾಗಲಿದೆ ಇಲ್ಲದೇ ಹೋದಲ್ಲಿ ಶೈಕ್ಷಣಿಕ ಕಾರ್ಯಗಳಿಗೆ ಹಿನ್ನಡೆಯಾಲಿದ್ದು. ಈ ಕುರಿತಂತೆ ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಮನವಿ ಮಾಡಿದರು. ಮತ್ತು ಇದೇ ರೀತಿಯ ಸಮಸ್ಯೆ ನಮ್ಮ ಇಲಾಖೆಯದ್ದು ಆಗಿದ್ದು ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಈ-ಮೇಲ್ ಮೂಲಕ ಮನವಿ ಸಲ್ಲಿಸಿರುವುದಾಗಿ ಲಮಾಣಿ ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link