ವೃತ್ತಿಪರ ಅಕ್ರಮ ಮರಳುಕೋರರ ಮೇಲೆ ಚಾಟಿ ಬೀಸಿ:ಸಚಿವ ಸಿ.ಸಿ.ಪಾಟೀಲ್

ಹೊಸಪೇಟೆ

   ಬಳ್ಳಾರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಅಕ್ರಮ ಮರಳುಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತ ರಾಗುವಂತೆ ಖಡಕ್ ಸೂಚನೆ ನೀಡಿದ ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಅವರು ವೃತ್ತಿಪರ ಅಕ್ರಮ ಮರಳುಕೋರರ ಮೇಲೆ ಚಾಟಿ ಬೀಸಿ ಎಂದು ಸೂಚಿಸಿದರು.

   ನಗರದ ಅಮರಾವತಿ ಪ್ರವಾಸಿ ಮಂದಿರದಲ್ಲಿ ಶನಿವಾರ ಮಧ್ಯಾಹ್ನ ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಗಳ ಮರಳು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಅಕ್ರಮ ಮರಳುಕೋರರ ವಿರುದ್ಧ ಯಾವುದೇ ರೀತಿಯ ಮುಲಾಜಿಲ್ಲದೇ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಿ ಹಾಗೂ ಸರಕಾರಕ್ಕೆ ಸೂಕ್ತ ರಾಯಲ್ಟಿ ಬರುವಂತೆ ನೋಡಿಕೊಳ್ಳಿ ಎಂದು ಹೇಳಿದ ಅವರು, ತಹಸೀಲ್ದಾರರು, ಸಹಾಯಕ ಆಯುಕ್ತರು ಜಿಲ್ಲಾಧಿಕಾರಿಗಳ ಮಾರ್ಗದರ್ಶನ ಮತ್ತು ಸಹಕಾರದಲ್ಲಿ ಅಕ್ರಮ ಮರಳುಗಣಿಗಾರಿಕೆ ತಡೆಯುವುದಕ್ಕೆ ಮುಂದಾಗಬೇಕು ಎಂದರು.

     ಸಚಿವರು ಹೇಳಿದ್ದಾರೆ ಎಂದುಕೊAಡು ಸಣ್ಣಪುಟ್ಟ ಮನೆಕೆಲಸಗಳಿಗೆ ಅಲ್ಪಸ್ವಲ್ಪ ಮರಳು ತೆಗೆದುಕೊಂಡು ಹೋಗುವವರ ಮೇಲೆ ತಮ್ಮ ಪ್ರಕರಣಗಳ ಪ್ರಯೋಗ ಮಾಡದೇ ಅವರ ವಿಷಯದಲ್ಲಿ ಸ್ವಲ್ಪಉದಾರತೆಯೂ ಇರಲಿ ಎಂಬ ಸಲಹೆಯನ್ನು ವ್ಯಕ್ತಪಡಿಸಿದ ಸಚಿವ ಪಾಟೀಲ್ ಅವರು,ಅಕ್ರಮ ಮರಳನ್ನು ಸಾಗಾಣಿಕೆ ಮಾಡುವುದಕ್ಕೆ ಅನುಕೂಲ ಮಾಡಿಕೊಡುವವರ ಜಮೀನು ಮಾಲೀಕರಿಗೂ ಸಹ ನೋಟಿಸ್ ಜಾರಿ ಮಾಡಿ ಎಂದರು.

    ಬಳ್ಳಾರಿ,ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಸಾಕಷ್ಟು ಪ್ರಮಾಣದ ಮರಳು ಲಭ್ಯವಿದೆ; ಮರಳು ಲಭ್ಯವಿರದ ಜಿಲ್ಲೆಗಳಿಗೆ ತಮ್ಮಲ್ಲಿ ಲಭ್ಯವಿರುವ ಮರಳಿನ ಕುರಿತು ಮಾಹಿತಿ ನೀಡಿ ಒದಗಿಸುವ ಕೆಲಸ ಮಾಡಿ ಎಂದರು. ಮರಳು ಅತ್ಯಂತ ಸುಲಭವಾಗಿ ಮತ್ತು ಕೈಗೆಟುಕುವ ದರದಲ್ಲಿ ಲಭ್ಯವಾಗಬೇಕು ಎಂಬುದು ಸರಕಾರದ ಉದ್ದೇಶ; ಆ ನಿಟ್ಟಿನಲ್ಲಿ ತಾವು ಕ್ರಮಕೈಗೊಳ್ಳುವಂತೆ ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link