ಬಳ್ಳಾರಿ:
2014 ರಲ್ಲಿ ಸರ್ವೋಚ್ಛ ನ್ಯಾಯಾಲಯವು ನ್ಯಾಷನಲ್ ಲೀಗಲ್ ಸರ್ವೀಸಸ್ ಅಥಾರಿಟಿ ಹಾಗೂ ಕೇಂದ್ರ ಸರ್ಕಾರದ ಮಧ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ಐತಿಹಾಸಿಕ ತೀರ್ಪಿನ ನಂತರ ಸರಣಿಗಳಲ್ಲಿ ರಚಿಸಲಾದ ಬಿಲ್‍ಗಳ ಪೈಕಿ ಇದು ನೂತನವಾದ ಬಿಲ್ ಆಗಿದೆ. 2016ರ ಬಿಲ್ ಬಗ್ಗೆ ಟ್ರಾನ್ಸ್ಜೆಂಡರ್ ಸಮುದಾಯದ ವಿಮರ್ಶೆಗಳನ್ನು ಹಾಗೂ ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸುಗಳನ್ನು ಇದರಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.
ಇದು ಸರ್ವೋಚ್ಛ ನ್ಯಾಯಾಲಯದ ತೀರ್ಪು, ಭಾರತದ ಸಂವಿಧಾನವು ಕೊಟ್ಟಿರುವಟ್ರಾನ್ಸ್ಜೆಂಡರ್ ವ್ಯಕ್ತಿಗಳ ಸಮಾನತೆಯ ಹಾಗೂಮೂಲಭೂತ ಹಕ್ಕುಗಳನ್ನು ಉಲ್ಲಂಘನೆ ಮಾಡಿರುತ್ತದೆ.ಇದು ಟ್ರಾನ್ಸ್ಜೆಂಡರ್ಗಳಿಗೆ ಶಿಕ್ಷಣ, ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ನೀಡದೆ ಅವಕಾಶವಂಚಿತರನ್ನಾಗಿ ಮಾಡಿದೆ. ಟ್ರಾನ್ಸ್ಜೆಂಡರ್ ಗಳಸಾಂಪ್ರದಾಯಕ ಆದಾಯ ಮೂಲವಾದ ಭಿಕ್ಷಾಟನೆಯ ಅಪರಾಧೀಕರಣವನ್ನು ಎತ್ತಿಹಿಡಿಯುತ್ತದೆ.
ಸಾಮಾನ್ಯ ವ್ಯಕ್ತಿಗಳ ಮೇಲಾಗುವ ಭೇದಭಾವಹಾಗೂ ಧೌರ್ಜನ್ಯಕ್ಕೆ ನೀಡಲಾಗುವ ಶಿಕ್ಷೆಗೆ ಹೋಲಿಸಿದರೆ ಟ್ರಾನ್ಸ್ಜೆಂಡರ್ ಗಳ ಮೇಲಾಗುವ ಭೇದಭಾವ ಹಾಗೂ ಧೌರ್ಜನ್ಯಕ್ಕೆ ಕಡಿಮೆ ಪ್ರಮಾಣದ ಶಿಕ್ಷೆಯನ್ನು ನೀಡುತ್ತದೆ. ಇದು ವಯಸ್ಕಟ್ರಾನ್ಸ್ಜೆಂಡರ್ ಗಳ ಕಾನೂನಾತ್ಮಕ ಹಕ್ಕುಗಳ ಉಲ್ಲಂಘನೆ ಮಾಡಿದ್ದು ಅವರು ತಮ್ಮಿಷ್ಟದಂತೆ ವಾಸವಿರಲು ಬಿಡದೆ ತಮ್ಮ ಪೋಷಕರೊಂದಿಗೆ ವಾಸಿಸಬೇಕು ಅಥವಾ ನ್ಯಾಯಾಲಯದ ಮೊರೆಹೋಗಬೇಕುಎಂದು ನುಡಿಯುವ ಮೂಲಕ ಅವರ ಇಚ್ಛೆ ಇದ್ದಲ್ಲಿ ಬದುಕುವ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ.
ಅಷ್ಟೆ ಅಲ್ಲದೆ ಇದು ಟ್ರಾನ್ಸ್ಜೆಂಡರ್ ಸಮುದಾಯವನ್ನು ಎರಡು ವರ್ಗಗಳಾಗಿ ವಿಂಗಡಿಸುತ್ತದೆ. ಅಂದರೆ ಯಾರು ಲಿಂಗ ಪುನರ್ವಿತರಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲವೊ ಅವರು ‘ಟ್ರಾನ್ಸ್ಜೆಂಡರ್’ಎಂದು ಮಾತ್ರಗುರುತಿಸಿಕೊಳ್ಳಬಹುದು. ಯಾರು ತಾನು “ಹೆಣ್ಣು” ಅಥವಾ “ಗಂಡು” ಎಂದು ಗುರುತಿಸ ಬಯಸುವರೊ ಅವರು ಈ ಶಸ್ತ್ರಚಿಕಿತ್ಸೆಗೆ ಒಳಗಾಗಿರಬೇಕು. ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ಇದು ಸಂಪೂರ್ಣವಾಗಿ ವಿರುದ್ಧವಾಗಿದೆ.
ಕಳ್ಳಸಾಗಾಣಿಕೆ/ಟ್ರಾಫಿಕಿಂಗ್ ಬಿಲ್: ಲೋಕಸಭೆಯಲ್ಲಿ ಅನುಮೋದಿಸಲಾದ ಕಳ್ಳಸಾಗಾಣಿಕೆ ಬಿಲ್ ಹಲವು ನಿಬಂಧನೆಗಳನ್ನು ಹೊಂದಿದ್ದು ಭಾರತೀಯ ಸಂವಿಧಾನದ ಸಿದ್ಧಾಂತಗಳಿಗೆ ವಿರುದ್ಧವಾಗಿವೆ. ಈಗಾಗಲೆ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಸೆಕ್ಷನ್ 370 ಹಾಗೂ 370ಎ ಅಡಿಯಲ್ಲಿ ಮಾನವ ಕಳ್ಳಸಾಗಾಣಿಕ ಹಾಗೂ ಅವರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಶಿಕ್ಷೆಯಿದ್ದು, ಈ ಬಿಲ್ ಅನವಶ್ಯಕವಾಗಿದೆ.
ಚಾಲ್ತಿಯಲ್ಲಿರುವ ಅನೈತಿಕ ಸಾಗಾಣಿಕೆ (ತಡೆ) ಕಾಯ್ದೆ,ಬಾಲಾಪರಾಧ ಕಾಯ್ದೆ, ಜೀತ ಕಾರ್ಮಿಕರ-ಒಪ್ಪಂದದ ಕಾರ್ಮಿಕರ-ಅಂತರ್ ರಾಜ್ಯ ಅಂತರ್ ರಾಜ್ಯ ವಲಸಿಗ ಕಾರ್ಮಿಕರಸಂಬಂಧಿಸಿದ ಕಾನೂನುಗಳೊಂದಿಗೆ ಈ ಬಿಲ್ ಯಾವ ರೀತಿಯ ಸಂಬಂಧ ಹೊಂದಿದೆ ಎಂಬುದು ಅಸ್ಪಷ್ಟವಾಗಿದೆ. ಇದು ಸಂಕೀರ್ಣವಾಗಿದ್ದು ಈ ಬಿಲ್ ಅನುಷ್ಠಾನಕ್ಕೆ ತೀವ್ರ ತಡೆಯೊಡ್ಡ ಬಹುದು.
”ಬಲವಂತದ ಕೂಲಿ” ಹಾಗೂ ಇತರೆ ಮುಖ್ಯ ಅಂಶಗಳ ವ್ಯಖ್ಯಾನಗಳು ಇದರಲ್ಲಿ ಇಲ್ಲ. ಇದರಲ್ಲಿನ ನೀತಿಗಳು ದೋಷಪೂರಿತವಾಗಿದ್ದು ವಯಸ್ಕ ಸ್ವಯಿಚ್ಚೆಯ ಲೈಂಗಿಕ ಕಾರ್ಮಿಕರನ್ನು ‘ದಾಳಿ ಹಾಗೂ ರಕ್ಷಣೆ’ ಎಂಬ ಮಾದರಿಯ ಮೂಲಕ ಪುನರ್ವಸತಿ ಕೇಂದ್ರಗಳಲ್ಲಿ ಅತ್ಯಧಿಕ ಸಮಯ ಇರಿಸಬಹುದು. ಇದು ವಲಸಿಗರು ಯಾವ ಉದ್ದೇಶಕ್ಕಾಗಿ ವಲಸೆ ಬಂದಿರುವರೆಂಬ ವಿಷಯವನ್ನು ತಿಳಿಯದೆಯೆ ಅಲ್ಪಾವಧಿಯಲ್ಲೆ ಅವರನ್ನು ಅವರ ತವರು ನೆಲೆಗಳಿಗೆ ಕಳುಹಿಸಲು ಒತ್ತು ನೀಡುತ್ತದೆ.
ಕಳ್ಳಸಾಗಾಣಿಕೆಯ ಉಲ್ಬಣವಾದ ಅಂಶವೆಂದು ಹೇಳಲಾಗುವ ಟ್ರಾನ್ಸ್ಜೆಂಡರ್ ಗಳು ಭಿಕ್ಷೆ ಬೇಡುವುದಕ್ಕೆ ಹತ್ತು ವರ್ಷಗಳ ಶಿಕ್ಷೆ ಪ್ರಮಾಣ ನಿಗದಿಪಡಿಸಿದ್ದು, ಆ ಸಮುದಾಯವನ್ನು ಅಪರಾಧೀಕರಣಗೊಳಿಸುವಂತಿದೆ.ಟ್ರಾನ್ಸ್ಜೆಂಡರ್ ಗಳಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳಲಾಗುವ ಹಾರ್ಮೋನ್ ಔಷಧಿ ಮಾತ್ರೆಗಳನ್ನು ಇದು ಅಪರಾಧೀಕರಣ ಗೊಳಿಸಿದ್ದಲ್ಲದೆ, ‘ದಬ್ಬಾಳಿಕೆ’ ಹಾಗೂ ‘ಸಹಾಯ’ದ ಮಧ್ಯೆ ಸ್ಪಷ್ಟವಾಗಿ ವಿಂಗಡಣೆ ಮಾಡಿಲ್ಲ. ಈ ಬಿಲ್ ನಲ್ಲಿ ವಯಸ್ಕ ಸ್ವಯಿಚ್ಚೆಯ ಲೈಂಗಿಕ ವೃತ್ತಿ ಮತ್ತು ಬಲವಂತದ ಲೈಂಗಿಕ ವೃತ್ತಿಗೂ ಯಾವುದೇ ರೀತಿಯ ವ್ಯತ್ಯಾಸ ಇಲ್ಲ. ಇದು ವಯಸ್ಕ ಸ್ವಯಿಚ್ಚೆಯ ಲೈಂಗಿಕಕಾರ್ಮಿಕರ ಮತ್ತು ಭಿಕ್ಷಾಟನೆ ಮಾಡುವವರ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತದೆ.
ಈ ಎರಡೂ ದೋಷಪೂರಿತ ಬಿಲ್‍ಗಳು ಈಗಾಗಲೆ ದುಸ್ಥಿತಿಯಲ್ಲಿರುವ ಟ್ರಾನ್ಸ್ಜೆಂಡರ್ ಗಳ, ಲೈಂಗಿಕ ಕಾರ್ಮಿಕರ, ಜೀತ ಕಾರ್ಮಿಕರ, ಗುತ್ತಿಗೆ ಕಾರ್ಮಿಕರ, ಗೃಹ ಕಾರ್ಮಿಕರ, ಕಟ್ಟಡ ಕಾರ್ಮಿಕರ ಹಾಗೂ ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಮತ್ತಷ್ಟು ತೀವ್ರಗೊಳಿಸುತ್ತದೆ. ಮನುಷ್ಯರ ದೇಹಗಳನ್ನು, ಅವರು ಆಯ್ದುಕೊಂಡಿರುವ ಕೆಲಸಗಳನ್ನು ಅಪರಾಧೀಕರಿಸುವ ಹಾಗೂ ಅಂಚಿನಲ್ಲಿರುವ ಜನರ ಮೂಲಭೂತ ಹಕ್ಕುಗಳನ್ನು ನಿರಾಕರಿಸುವಈ ಬಿಲ್ ವಿರುದ್ಧದ ನಮ್ಮ ಈ ಹೋರಾಟದಲ್ಲಿ ಭಾಗವಹಿಸಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
