ಚೇಳೂರು
ಮಾವು ಮತ್ತು ಹಲಸು ವರ್ತಕರು ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿಕೊಂಡು ವ್ಯವಹಾರವನ್ನು ನಡೆಸಬೇಕಾಗಿದೆ. ಇಲ್ಲವಾದರೆ ಅದಕ್ಕೆ ಸಂಬಂಧ ಪಟ್ಟವರು ಕ್ರಮವನ್ನು ಜಾರಿಗೊಳಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಘು ತಿಳಿಸಿದರು.
ಅವರು ಗ್ರಾಮದ ಎಪಿಎಂಸಿ ಆವರಣದಲ್ಲಿ ಭಾನುವಾರ ಮಾವು ಬೆಳೆಗಾರರು ಹಾಗೂ ವರ್ತಕರ ಸಭೆಯಲ್ಲಿ ಮಾತನಾಡಿ, ಈ ಭಾಗದಲ್ಲಿ ಮುಂದಿನ ತಿಂಗಳಿನಿಂದ ಮಾವು ಹೆಚ್ಚಾಗಿ ಬರುತ್ತವೆ. ಯಾವುದೇ ಕಾರಣಕ್ಕೂ ಮಾವಿಗೆ ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಹಣ್ಣು ಮಾಡಬಾರದು. ನೈಸರ್ಗಿಕವಾಗಿ ಹಣ್ಣು ಮಾಡಬೇಕು. ಇದನ್ನು ಗಮನದಲ್ಲಿಟ್ಟ್ಟುಕೊಂಡು ವರ್ತಕರು ವ್ಯವಹಾರವನ್ನು ಮಾಡಬೇಕಾಗಿದೆ.
ತಮ್ಮ ಮಳಿಗೆಗಳ ಮುಂದೆ ನೀರಿನ ವ್ಯವಸ್ಥೆ, ಸ್ಯಾನಿಟೈಸರ್ ಅಥವಾ ಸೋಪನ್ನು ಇಡಬೇಕು. ಯಾರೇ ಬಂದರು ಅಂತರದ ನಿಯಮಗಳನ್ನು ಪಾಲಿಸಬೇಕು. ಬೇರೆ ಜಿಲ್ಲೆಯಾಗಿರಲಿ, ರಾಜ್ಯದಿಂದಾಗಲಿ ಬರುವ ವರ್ತಕರು, ಚಾಲಕರು ವಾಹನದಲ್ಲಿ ಬರುವವರ ಆರೋಗ್ಯ ತಪಾಸಣೆಯ ದಾಖಲೆಗಳನ್ನು ನೋಡಿ ವ್ಯವಹರಿಸಬೇಕಾಗಿದೆ.
ಮಾರುಕಟ್ಟೆಗೆ ಮಾವು, ಹಲಸುಗಳನ್ನು ತುಂಬಿಕೊಂಡು ಬಂದ ವಾಹನ ಹೋದ ನಂತರವೆ, ಮತ್ತೊಂದು ವಾಹನ ಪ್ರವೇಶಿಸಬೇಕು. ಸರ್ಕಾರ ನೀಡಿರುವ ನಿಯಮಗಳನ್ನು ಪಾಲಿಸಿಕೊಂಡು ವರ್ತಕರು ಹಾಗೂ ರೈತರು ವ್ಯವಹರಿಸ ಬೇಕಾಗಿದೆ ಎಂದರು.ತಾಲ್ಲೂಕು ಮಾವು ಬೆಳೆಗಾರರ ಅಧ್ಯಕ್ಷ ಸಿ.ಎನ್.ತಿಮ್ಮೇಗೌಡ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಪ್ಪ, ಗುಬ್ಬಿ ಸಹಾಯಕ ಅಧಿಕಾರಿಗಳಾದ ಟಿ.ಹೊನ್ನೆಗೌಡ, ರಘುನಾಥ್, ವರ್ತಕರು ಹಾಗೂ ರೈತರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








