ನರೇಗ ಕಾಮಗಾರಿ : ನಮ್ಮ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ:ಎಂ.ವಿ ವೀರಭದ್ರಯ್ಯ

ಮಧುಗಿರಿ :

    ತಾಲ್ಲೂಕಿನಲ್ಲಿ ನರೇಗ ಕೆಲಸಗಳನ್ನು ಮಾಡಿಸುವಾಗ ಪಿಡಿಓಗಳು ಆಡಳಿತಾಧಿಕಾರಿಗಳು ನಮ್ಮ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಕೆಲಸಗಳನ್ನು ಕೊಡಬೇಕು ಎಂದು ಶಾಸಕ ಎಂ.ವಿ. ವೀರಭದ್ರಯ್ಯ ಪಿಡಿಓಗಳಿಗೆ ಸೂಚಿಸಿದರು.

    ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಶಾಸಕರ ಕುಂದುಕೊರೆತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನರೇಗಾ ಕಾಮಗಾರಿಗಳನ್ನು ಕೈಗೊಳ್ಳಲು ಯಾವುದೇ ಆಡೆ ತಡೆಗಳಿಲ್ಲ ಆದರೆ ಕಾಮಗಾರಿಗಳ ಬಗ್ಗೆ ಹಾಗೂ ಕೆಲಸಗಳು ಎಲ್ಲಿ ಅವಶ್ಯವೊ ಅಲ್ಲಿ ನಮ್ಮ ಪಕ್ಷದ ಲೀಡರ್‍ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೇ ಕೆಲಸ ಕಾರ್ಯಗಳನ್ನು ಕೊಡಬೇಕು ಹಾಗೂ ಆ ಕೆಲಸಗಳನ್ನು ಗುರುತಿಸುವಾಗಲೂ ಮತ್ತು ಕಾಮಗಾರಿಗಳಿಗೆ ಚಾಲನೆ ಮಾಡುವಾಗಲೂ ಕೂಡ ನಮ್ಮ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕು.

     ಇನ್ನೂ ಆರ್ಥಿಕ ಚಟುವಟಿಕೆಗಳು ನಡೆಯುತ್ತಿಲ್ಲ ಹಾಗೂ ತೆರಿಗೆ ಹಣವು ಸರಿಯಾಗಿ ಸಂಗ್ರಹವಾಗುತ್ತಿಲ್ಲ. ಸರ್ಕಾರದಿಂದ ಅನುದಾನವು ಬಿಡುಗಡೆಯಾಗುತ್ತಿಲ್ಲ ಒಂದು ವರ್ಷಕ್ಕೆ ಶಾಸಕರಿಗೆ ನೀಡುವ 2 ಕೋಟಿಯ ಅನುದಾನದಲ್ಲಿ ಸಹ ಇದೂವರೆವಿಗೂ ಒಂದು ನಯಾ ಪೈಸೆಯು ಬಿಡುಗಡೆಯಾಗಿಲ್ಲ. ಹಿಂದಿನ ಸರಕಾರ ಅನೇಕ ಕೆಲಸ ಕಾಮಗಾರಿಗೆಗಳಿಗೆ ಬಿಡುಗಡೆ ಮಾಡಿದ್ದ ಅನುದಾನವನ್ನು ತಡೆಯಿಡಿಯಲಾಗಿದೆ ಮುಂದಿನ ದಿನಗಳಲ್ಲಿ ನೀಡುವ ಭರವಸೆ ಇದೆ.

     ಇದಕ್ಕೂ ಮುಂಚೆ ಮಹಿಳೆಯೊಬ್ಬರೂ ಸ್ವಾಮಿ ನಾವು ಸದಸ್ಯರಿಗೆ ಮನೆ ಕೇಳಿದರೆ ಅವರು ಹತ್ತು ಸಾವಿರ ದುಡ್ಡು ಕೇಳುತ್ತಾರೆ ಎಂದಾಗ ಈಗ ಅವರೆಲ್ಲ ಅಧಿಕಾರದಿಂದ ಇಳಿದು ಹೋಗಿದ್ದಾರೆ, ಮುಂದೆ ನಡೆಯುವ ಚುನಾವಣೆಯಲ್ಲಿ ನಿಮಗೆ ಬೇಕಾದ ವ್ಯಕ್ತಿಗೆ ಮತ ನೀಡಿ ಗೆಲ್ಲಿಸಿಕೊಳ್ಳಿ ಎಂದು ಶಾಸಕರು ಉತ್ತರ ನೀಡಿದರು. ಎಸ್.ಸಿ., ಎಸ್.ಟಿ. ಸಮುದಾಯಕ್ಕೆ ಮನೆಗಳು ಬೇಕಾದಷ್ಟು ಬರುತ್ತಿವೆ ಆದರೆ ಸಾಮಾನ್ಯ ವರ್ಗದ ಜನರಿಗೆ ತೊಂದರೆಯಾಗಿರುವುದರಿಂದ ವಸತಿ ಸಚಿವರನ್ನು ಕಾಡಿಬೇಡಿ ಪ್ರತಿ ಗ್ರಾಮ ಪಚಾಯಿತಿಗೆ 20 ಮನೆಗಳನ್ನು ತರುತ್ತೇನೆ. ಪಿಡಿಓಗಳು, ಆಡಳಿತಾಧಿಕಾರಿಗಳು ಮತ್ತು ಲೀಡರ್‍ಗಳು ಇದರಲ್ಲಿ ಯಾವುದೇ ರಾಜಕೀಯ ಮಾಡದೆ ಅರ್ಹ ಅಭ್ಯರ್ಥಿಗಳನ್ನು ಗುರುತಿಸಿ ಆಯ್ಕೆ ಮಾಡಿದ ಮೂರು ದಿನಗಳಲ್ಲಿ ನನಗೆ ಪತ್ರ ನೀಡಿದರೆ ಖಂಡಿತ ನಾನು ಮನೆಗಳನ್ನು ಮಂಜೂರು ಮಾಡಿಸಿಕೊಂಡು ಬರುತ್ತೇನೆ ಎಂದರು.

      ಇಓ ದೊಡ್ಡಸಿದ್ದಯ್ಯ, ಲೋಕೋಪಯೋಗಿ ಇಲಾಖೆ ಎಇಇ ಹೊನ್ನೇಶಪ್ಪ, ಕೃಷಿ ನಿರ್ದೇಶಕ ಡಿ. ಹನುಮಂತರಾಯಪ್ಪ, ಪಿಡಿಓ ಕಾಂತರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಸಿ. ನರಸರೆಡ್ಡಿ ಮುಖಂಡರಾದ ಹನುಮಂತರಾಯಪ್ಪ, ನಾಸೀರ್ ಉದ್ದೀನ್, ಜಯರಾಮೇಗೌಡ, ನರಸಿಂಹರೆಡ್ಡಿ, ಜಬೀವುಲ್ಲಾ, ಮೈಲಾರಿ, ಸೇಠುಗಂಗಾಧರ್, ಲಕ್ಷ್ಮೀನರಸಿಂಹಯ್ಯ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap