ಚೇಳೂರು.
ನಿಮ್ಮ ಜೊತೆ ಸಾರ್ವಜನಿಕರ ಆರೋಗ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸ್ವಚ್ಛತೆ ಬಗ್ಗೆ ಗಮನ ಹರಿಸಿ, ಕೊರೊನಾದ ಜೊತೆ ಬೇರೆ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರ ವಹಿಸಿ ಎಂದು ಪಿಎಸ್‍ಐ ವಿಜಯಕುಮಾರ್ ಹೇಳಿದರು.
ಅವರು ಹೋಬಳಿಯ ನಂದಿಹಳ್ಳಿ ಗೇಟ್ ಬಳಿ ಎತ್ತಿನಹೊಳೆ ಯೋಜನೆ 2.6 ದಿಂದ 2.10 ರವರೆಗೆ ಗುತ್ತಿಗೆದಾರ ಜಿ.ಶಂಕರ್ ನಿರ್ಮಿಸುತ್ತಿರುವ ಕಾಮಗಾರಿಯ ಕೆಲಸಗಾರರಿಗೆ ಥರ್ಮಾ ಸ್ಕ್ಯಾನರ್ ಮೂಲಕ ಆರೋಗ್ಯ ತಪಾಸಣೆ ಮಾಡಿಸಿ ಮಾತನಾಡಿದರು. ದೇಶವೆ ಕೊರೊನಾದಂತಹ ವೈರಾಣುಗಳ ಭಯದಿಂದ ಇದೆ. ಅದನ್ನು ಹೋಗಲಾಡಿಸುವ ಪ್ರಯತ್ನ ಪಟ್ಟು ಯಶಸ್ವಿಯಾಗುವ ಹಂತಕ್ಕೆ ಹೋಗುತ್ತಿದೆ. ಅಂತಹುದರಲ್ಲಿ ಇಲ್ಲಿ ಸ್ವಚ್ಛತೆ ಹೆಚ್ಚಾಗಿ ಕಾಣುತ್ತಿಲ್ಲ.
ಅದಕ್ಕೆ ಸೂಕ್ತವಾದ ರೀತಿಯಲ್ಲಿ ಸ್ವಚ್ಛತೆ ಬಗ್ಗೆ ಗಮನ ಹರಿಸಿ. ಸುಮಾರು ತಿಂಗಳಿಂದ ಇಲ್ಲಿ ಕೆಲಸ ಮಾಡುತ್ತಿರುವರು ಹೊರರಾಜ್ಯದವರು. ಇದಕ್ಕೆ ಸಂಬಂಧ ಪಟ್ಟವರು ಜೊತೆಗೆ ಕೆಲಸಗಾರರು ಸಹ ಸ್ವಚ್ಛತೆ ಬಗ್ಗೆ ಗಮನ ಹರಿಸಿ ಎಂದರು.ಬಿದರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಷ್ಮ 140 ಕೆಲಸಗಾರರಿಗೆ ಆರೋಗ್ಯ ತಪಾಸಣೆ ಮಾಡಿ ಮಾತನಾಡುತ್ತಾ, ಇಲ್ಲಿ ಇರುವರು ಎಲ್ಲರೂ ಅಂತರ ಕಾಯ್ದುಕೊಂಡು, ವೈರಾಣುಗಳು ಬಾರದಂತೆ ತಡೆಗಟ್ಟಿಕೊಂಡು ಸ್ವಚ್ಛತೆಯಿಂದ ಇರಬೇಕಾಗಿದೆ.
ಇಲ್ಲವಾದರೆ ಇಲ್ಲಿಯೆ ಹಲವು ಕಾಯಿಲೆಗಳು ಉತ್ಪತ್ತಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರ ಇದ್ದಷ್ಟೂ ಸಹ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು ಎಂದರು.ಆರೋಗ್ಯ ಇಲಾಖೆಯ ಎ.ಷಣ್ಮುಖಯ್ಯ, ಅನಂತಲಕ್ಷ್ಮಮ್ಮ, ಕಾವ್ಯ, ಪೊಲೀಸ್ ಇಲಾಖೆಯ ಮಧು, ಬಾಪೂಗೌಡ್ರು ಹಾಗೂ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ