ಐ.ಡಿ.ಹಳ್ಳಿ
ಗ್ರಮ ಪಂಚಾಯಿತಿಯ ವತಿಯಿಂದ ಬುಧವಾರದಂದು ಗ್ರಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಹಾಲಿ ಸದಸ್ಯರು ಹಾಗೂ ಸಿಬ್ಬಂದಿಯವರು ಪ್ರತಿಯೊಂದು ವಾರ್ಡ್ ಗಳಿಗೆ ಭೇಟಿ ನೀಡಿ ಹಯಾ ವರ್ಡ್ ಗಳಲ್ಲಿ ವಾರ್ಡ/ಗ್ರಾಮಸಭೆ ಕಾರ್ಯಕ್ರಮವನ್ನು ಆಯೋಜಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಪ್ರಕಾಶ್ ರವರು ಮಾತನಾಡಿ ಈ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 7 ವಾರ್ಡ್ ಗಳನ್ನು ಹೊಂದಿದ್ದು ಎಲ್ಲಾ ಕುಟುಂಬದೊಂದಿಗೆ ಗ್ರಾಮ ಸ್ವರಾಜ್ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಮೊದಲು ಈ ಗ್ರಾಮ ಪಂಚಾಯಿತಿಗೆ ಸೇರಿದ ಈ ವಾರ್ಡ್ ಗಳಲ್ಲಿ ಬಯಲು ಶೌಚಮುಕ್ತ ಪಂಚಾಯಿತಿ ಮಾಡಲೇಬೇಕು. ಪ್ರತಿಯೊಂದು ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಬೇಕು.ನಮ್ಮ ಗ್ರಾಮ ಪಂಚಾಯಿತಿ ಇವತ್ತಿನಿಂದ ಪ್ರಗತಿ ಸಾಧಿಸಬೇಕಾಗಿದೆ.
ಸುವರ್ಣ ಗ್ರಾಮ ಯೋಜನೆಯಡಿ ಪ್ರತಿ ಗ್ರಾಮದ ಬೀದಿಗಳಲ್ಲಿ ಕಸದ ತೊಟ್ಟಿಗಳನ್ನು ಇಡುವ ಮೂಲಕ ಮನೆಯಲ್ಲಿ ನಿತ್ಯ ಬಳಕೆಯಲ್ಲಿ ಸಿಗುವಂತ ಕಸವನ್ನು ಮನೆಯ ಮುಂಭಾಗದ ತೊಟ್ಟಿಯಲ್ಲಿ ಹಾಕಬೇಕು. ಮಹಾತ್ಮರ ಗ್ರಾಮಸ್ವರಾಜ್ ಸಾಕಾರಗೊಳಿಸುವ ನಿಟ್ಟಿನಲ್ಲಿ ಸರ್ಕಾರಿ ಅನುದಾನ ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿಯತ್ತ ಮುನ್ನಡೆಸಬೇಕಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಯಲ್ಲಿ ರೈತರಿಗೆ ನೆರವಾಗುವ ದನದ ಕೊಟ್ಟಿಗೆ ಕೃಷಿ ಹೊಂಡ ನಿರ್ಮಾಣ ಕೊಳವೆ ಬಾವಿ ಮರುಪೂರಣ ಆಟದ ಮೈದಾನ ಸ್ಮಶಾನ ಅಭಿವೃದ್ಧಿ.ಮಲ್ಟಿ ಅರ್ ಚ್ ಚೆಕ್ ಡ್ಯಾಂ ಇನ್ನು ಮುಂತಾದ ಕಾರ್ಯಗಳನ್ನು ರೈತರು ಮಾಡಿಕೊಳ್ಳಲು ಅವಕಾಶವಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿ.ಇವೆಲ್ಲಾ ಕಾರ್ಯಗಳನ್ನು ಮಾಡಬೇಕಾದರೆ ಈ ಗ್ರಾ.ಪಂ.ಸದಸ್ಯರು ಗೆದ್ದಿರುವಂತಹ ವರ್ಡ್ ಗಳಲ್ಲಿ ನಿಂತು ನೀವೆ ರೈತರಿಗೆ ಕೇಲಸ ಮಾಡಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಾರ್ವತಮ್ಮ ಬಸ್ತಪ್ಪ ಮಾತನಾಡಿ ಗ್ರಾಮೀಣ ಅಭಿವೃದ್ಧಿ ಪರಿಕಲ್ಪನೆಯೊಂದಿಗೆ ಪರಿಶಿಷ್ಟ ಜಾತಿ.ಪರಿಶಿಷ್ಟ ಪಂಗಡಗಳ ಕಾಲೋನಿಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು ಕಾಲೋನಿಗಳ ಸಂಪೂರ್ಣ ಸಿ.ಸಿ.ರಸ್ತೆ ನಿರ್ಮಾಣ ಮಾಡಿ ಮಾದರಿ ಗ್ರಾಮಗಳಾಗಿ ಮಾಡಬೇಕು.ಗ್ರಾಮದ ಎಲ್ಲರಿಗೂ ಮೂಲ ಸೌಕರ್ಯ ಕಲ್ಪಿಸಬೇಕಾಗಿದೆ. ಕಾಲೋನಿಗಳಲ್ಲಿ ಸೋಲಾರ್ ದೀಪ ಅಳವಡಿಸಬೇಕಾಗಿದೆ ಎಂದು ಆಂಜನೇಯ ದೇವಸ್ಥಾನದ 3ನೇ ವಾರ್ಡ್ ನಲ್ಲಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಿಲಾನ್. ಗೋಪಾಲ್ ರೆಡ್ಡಿ.ನವೀನ್ ಕೂಮಾರ್.ಉಪಾಧ್ಯಕ್ಷ ಚೌಳಹಳ್ಳಿ ನಾಗರಾಜ.ಜಬಿವುಲ್ಲಾ.ಭೀಮಣ್ಣ. ಬ್ಯಾಂಕ್ ಶಿವಯ್ಯ. ಜನಾರ್ದನ್ ರೆಡ್ಡಿ. ಸಂಜೀವಪ್ಪ.ಸಿಬ್ಬಂದಿಗಳಾದ ಬಿಲ್ ಕಲೆಕ್ಟರ್ ಚಂದ್ರಣ್ಣ. ಕಮಲೇಶ. ಸೆಕ್ರೆಟರಿ ವೀರಭದ್ರ. ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
