ಕ್ರೀಡೆಯನ್ನು ಯುವ ಕ್ರೀಡಾಪಟುಗಳು ಸವಾಲನ್ನಾಗಿ ಸ್ವೀಕರಿಸಿ:ಮುದ್ದ ಹನುಮೇಗೌಡ

ಕೊರಟಗೆರೆ:-

        ಕ್ರೀಡೆಯನ್ನು ಯುವ ಕ್ರೀಡಾಪಟುಗಳು ಸವಾಲನ್ನಾಗಿ ಸ್ವೀಕರಿಸಿ ಗೆಲುವಿನತ್ತ ದಾಪುಗಾಲಿಡಬೇಕು, ಸೋತ ಕ್ರೀಡಾಪಟುಗಳು ಸೋಲಿನಿಂದ ದೃತಿಗೆಡದೆ ಸೋಲಿನ ಪಾಠಅರಿತು ಗೆಲುವಿನತ್ತ ಮುಖ ಮಾಡುವ ಮನಸ್ಸು ಬೆಳೆಸಿಕೊಳ್ಳಬೇಕು ಎಂದುತುಮಕೂರಿನ ಸಂಸದ ಎಸ್ ಪಿ ಮುದ್ದಹನುಮೇಗೌಡ ಅಭಿಪ್ರಾಯ ಪಟ್ಟರು.

          ಅವರುಪಟ್ಟಣದ ಪದವಿಪೂರ್ವಕಾಲೇಜು ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಪೃಥ್ವಿಇಲೆವನ್ ಮತ್ತು ಡಾ.ಜಿ.ಪರಮೇಶ್ವರ ಯೂತ್‍ ಐಕಾನ್ಸ್‍ ನಿಂದ ಕೊರಟಗೆರೆ ಪ್ರೀಮಿಯರ್ ಲೀಗ್‍ಕ್ರಿಕೇಟ್ ಪಂದ್ಯಾವಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಯುವ ಕ್ರೀಡಾಪಟುಗಳು ಕ್ರೀಡೆಯನ್ನು ಸವಾಲಾಗಿ ಸ್ವೀಕರಿಸಿ ಸೋಲು ಗೆಲುವು ಎರಡನ್ನೂ ಸಮಾನಾಂತರವಾಗಿ ಸ್ವೀಕರಿಸಿ ಗೆಲುವಿನಡೆಗೆ ಸಾಗುವ ದೃಡತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.

         ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ಕ್ರೀಡಾಶಕ್ತಿ ಪ್ರದರ್ಶಿಸಿ ಕೀರ್ತಿತಂದ ಬಹುತೇಕ ಕ್ರೀಡಾಪಟುಗಳು ಗ್ರಾಮೀಣ ಪ್ರದೇಶದವರಾಗಿದ್ದು, ಜಿಲ್ಲೆಯಲ್ಲಿಯೇಕೊರಟಗೆರೆತಾಲ್ಲೂಕಿನಲ್ಲಿಒಂದು ವಿನೂತನವಾದಕ್ರಿಕೇಟ್ ಪಂದ್ಯಾವಳಿಯನ್ನು ಆಯೋಜಿಸಿರುವುದು ಹೆಮ್ಮೆಯ ವಿಚಾರವಾಗಿದ್ದು, ಕ್ರಿಕೇಟ್‍ಅಲ್ಲದೇಇತರೆ ಆಟಗಳೂ ಸಹ ಮುಂದಿನ ದಿನಗಳಲ್ಲಿ ಆಯೋಜಿಸುವ ಮೂಲಕ ಕ್ರೀಡಾಪಟುಗಳನ್ನು ಉತ್ತೇಜಿಸುವಂತಹ ಕೆಲಸ ಯುವಕರಿಂದಆಗಬೇಕಿದೆ, ಕೊರಟಗೆರೆ ವಿಧಾನಸಭಾಕ್ಷೇತ್ರ ವ್ಯಾಪ್ತಿಯಿಂದ ಮುಂದಿನ ದಿನದಲ್ಲಿದೇಶ ಹಾಗೂ ವಿದೇಶಗಳಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ತಾಲ್ಲೂಕಿಗೆಕೀರ್ತಿತರುವಂತಹ ಕೆಲಸವಾಗಬೇಕು ಇದಕ್ಕೆ ನಮ್ಮ ಪೂರ್ಣ ಸಹಕಾರ ನೀಡಲಾಗುವುದುಎಂದರು.

         ಕ್ರೀಡೆಯನ್ನುಉತ್ತೇಜಿಸುವದೃಷ್ಟಿಯಿಂದ ಉಪಮುಖ್ಯಮಂತ್ರಿಗಳಾದ ಡಾ ಜಿ ಪರಮೇಶ್ವರ್‍ರವರುಇಲ್ಲಿನಕ್ರೀಡಾಂಗಣಅಭಿವೃದ್ದಿಗಾಗಿ 3 ಕೋಟಿರೂಅನುದಾನವನ್ನು ಬಿಡುಗಡೆಗೊಳಿಸಿವ ನಿಟ್ಟಿನಲ್ಲಿಕಾರ್ಯಪ್ರವೃತ್ತರಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಸುಸಜ್ಜಿತವಾದಕ್ರೀಡಾಂಗಣ ಹಾಗೂ ಕ್ರೀಡಾಪಟುಗಳಿಗೆ ಅನೂಕೂಲಕರವಾಗುವಂತಹಕ್ರೀಡಾ ಸಾಮಾಗ್ರಿಗಳನ್ನು ಒದಗಿಸುವಂತಹ ನಿಟ್ಟಿನಲ್ಲಿ ತಮ್ಮ ಇಲಾಖೆಯಾದ ಯುವಜನ ಮತ್ತು ಕ್ರೀಡಾ ಅಭಿವೃದ್ದಿ ಇಲಾಖೆಯಿಂದ ಬಿಡುಗಡೆಗೊಳಿಸಲು ಸಿದ್ದತೆ ನಡೆಸಿದ್ದಾರೆ ಎಂದರು.

            ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಗರಾಜು, ಇಓ ಶಿವಪ್ರಕಾಶ್, ಸಿಪಿಐ ಮುನಿರಾಜು, ಪಿಎಸೈ ಮಂಜುನಾಥ, ಪಪಂ ಸದಸ್ಯರಾದ ನಟರಾಜ್, ರಮೇಶ್, ಮುಖಂಡರಾದಅಶ್ವತ್ಥನಾರಾಯಣ್, ನರಸಪ್ಪ, ಕವಿತಾ, ಜಯರಾಮ್, ಮೂರ್ತಿ, ಮಂಜುನಾಥ, ಪ್ರಕಾಶ್, ಮೈಲಾರಪ್ಪ,ಕ್ರೀಡಾಪಟುಗಳಾದ ರಘುಪತಿ, ಕಿಶೋರ್, ಬಾಬು, ಮಾರುತಿ, ಸ್ವಾಮಿ, ಹರೀಶ್, ಅರವಿಂದ್, ರವಿ, ಜಯರಾಜ್, ಉಮೇಶ್, ಮಧು, ಸಲ್ಮಾನ್, ಖುನಾಲ್ ಸೇರಿದಂತೆಇತರರುಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link